ಲೈನಕ್ಸ್ ನ ಕನ್ನಡೀಕರಣದ ನಂತರ ಗೂಗ್ಲ್ ಕನ್ನಡೀಕರಣಕ್ಕೆ ಕೈ? - ನಾನು ಮತ್ತು ಜೋಕುಮಾರ !

ಲೈನಕ್ಸ್ ನ ಕನ್ನಡೀಕರಣದ ನಂತರ ಗೂಗ್ಲ್ ಕನ್ನಡೀಕರಣಕ್ಕೆ ಕೈ? - ನಾನು ಮತ್ತು ಜೋಕುಮಾರ !

ಲೈನಕ್ಸ್ ನ ಕನ್ನಡೀಕರಣಕ್ಕಾಗಿ ಹದಿನೈದು ಸಾವಿರ ಶಬ್ದ/ವಾಕ್ಯಗಳ ಅನುವಾದ ಅಗತ್ಯವಿದ್ದು . ನಾನು ಈ ಕೆಲಸಕ್ಕೆ ಕೈ ಹಾಕಿದಾಗ ಅದಾಗಲೇ ಐದುಸಾವಿರದಷ್ಟು ಅನುವಾದ ಆಗಿತ್ತು ಎರಡು ತಿಂಗಳ ಅವಧಿಯಲ್ಲಿ ನಾನೂ ಸುಮಾರು ಐದುಸಾವಿರದಷ್ಟು ಅನುವಾದ ಮಾಡಿದ್ದು ೨/೩ ರಷ್ಟು ಅನುವಾದ ಆದಂತಾಗಿದೆ. ಮುಂದೆ ನನ್ನ ಕೈಸಾಗದೆ ಬಿಟ್ಟಿರುವೆ.

ಮುಂದೇನು ?

ಈದೀಗ ಗೂಗ್ಲ್ ನಲ್ಲೂ ಇಂಥ ಒಂದು ಕೆಲಸ ನದೆದಿರುವದು ಗಮನಕ್ಕೆ ಬಂತು . ಅದಕ್ಕೆ ಕೈ ಹಚ್ಚಿರುವೆ ಈಗ.

ಜೋಕುಮಾರಸ್ವಾಮಿ ನಾಟಕ ನೀವು ಓದಿರಬಹುದು ಅಥವಾ ಕೇಳಿರಬಹುದು ಅದರಲ್ಲಿ ಜನಪದಕಥೆಯ ನಾಯಕ ಜೋಕುಮಾರ ಹುಟ್ಟಿದ ಮೊದಲ ದಿನ ಹುಡುಗಿಯರನ್ನು 'ಎಳೆ'ಯುತ್ತಾನೆ.
ಎರಡನೆಯ ದಿನ ಮತ್ತೈದೆಯರನ್ನು 'ಎಳೆ'ಯುತ್ತಾನೆ.
ಮೂರನೆಯದಿನ ಬಾಲೆಯರನ್ನ 'ಎಳೆ'ಯುತ್ತಾನೆ.
ನಾಲ್ಕನೆಯ ದಿನ ಮುದುಕಿಯರನ್ನು 'ಎಳೆ'ಯುತ್ತಾನೆ.
..... ಇತ್ಯಾದಿತ್ಯಾದಿ

ನಾನು ಒಮ್ಮೆ ಕನ್ನಡಸಾಹಿತ್ಯ.ಕಾಂ ಗಾಗಿ ಲೇಖನ ತಿದ್ದುಪಡಿ ಮತ್ತು ಸ್ಪೆಲ್ ಚೆಕ್ಕರ್
ಮತ್ತೊಮ್ಮೆ ಸಂಪದಕ್ಕಾಗಿ ಲೈನಕ್ಸ್ ಕನ್ನಡೀಕರಣ
ಮಗದೊಮ್ಮೆ ಗೂಗ್ಲ್ ಗಾಗಿ ಕನ್ನಡೀಕರಣ
ಮಾಡುತ್ತಿರುವದೂ ಹೀಗೇ ಏನೋ ?!

Rating
No votes yet

Comments