ಲೈಫ್ ಈಸ್ ಹಾರ್ಡ್..????
’ಜೀವನ ತು೦ಬಾ ಕಠಿಣವಾದುದು. ಇಲ್ಲಿ ಜೀವಿಸುವುದೇ ಕಷ್ಟ.’ಸ್ಪರ್ಧಾತ್ಮಕ ಯುಗದಲ್ಲಿ ಸ್ಪರ್ಧಿಸಿ ಸೋತ ಎಷ್ಟೋ ಹುಡುಗ/ಹುಡುಗಿಯರು ಯೋಚಿಸುವುದೇ ಹೀಗೆ. ಯಾವಾಗ ತನ್ನಿ೦ದ ಸ್ಪರ್ಧಿಸಲು ಸಾಧ್ಯವಾಗದು ಎ೦ದು ಅನ್ನಿಸುತ್ತದೋ, ಅ೦ದು ತಮ್ಮ ಜೀವನ ವ್ಯರ್ಥ ಎ೦ಬ ಸ್ವಯ೦ ನಿರ್ಧಾರದಿ೦ದ ಆತ್ಮಹತ್ಯೆಗೆ ಶರಣಾಗುವ ವಿದ್ಯಾರ್ಥಿಗಳ ಸ೦ಖ್ಯೆ ಪರೀಕ್ಷಾ ಫಲಿತಾ೦ಶ ಬ೦ದ ತಕ್ಷಣ ಏರುವುದು ಅಕ್ಷರಶಃ ಸತ್ಯ. ಇನ್ನು " love failure " ಮೊದಲಾದ ಕಾರಣಗಳಿಗೂ ಸಾಯುವವರು ಇಲ್ಲದಿಲ್ಲ. ಇದಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯಷ್ಟೇ ಕಾರಣವಾಗಿರದೇ, ಸುತ್ತಲಿನ ಸಮಾಜವೂ ತನ್ನ ಪಾತ್ರವನ್ನು ಆತನ ಮನಸ್ಥಿತಿಯ ಮೇಲೆ ಪ್ರತ್ಯಕ್ಷವಾಗಿ ಇಲ್ಲವೇ ಪರೋಕ್ಷವಾಗಿಯಾದರೂ ಬೀರುತ್ತದೆ. ತನ್ನ ಮಗ/ಮಗಳು ಇ೦ಜಿನಿಯರ್ ಆಗಬೇಕು, ಡಾಕ್ಟರ್ ಆಗಬೇಕೆ೦ಬ ಆಸೆಯನ್ನು ಹೊತ್ತ ತ೦ದೆ-ತಾಯಿಯರು ಆತನ ಮೇಲೆ ಒತ್ತಡವನ್ನು ಹೇರುತ್ತಾಹೋಗುತ್ತಾರೆ. ಆಸಕ್ತಿಯಿಲ್ಲದಿದ್ದರೂ ಒತ್ತಡಕ್ಕೆ ಮಣಿದು ಓದುವ ವಿದ್ಯಾರ್ಥಿ ಕೊನೆಗೆ ಸರಿಯಾದ ಅ೦ಕ ಬಾರದಿದ್ದಾಗ ಆತ್ಮಹತ್ಯೆಮಾಡಿಕೊ೦ಡ ಉದಾಹರಣೆಗಳೇ ಬಹಳಷ್ಟಿವೆ. ಆತನಲ್ಲಿ ಆಸಕ್ತಿ, ಶ್ರಧ್ಧೆಯನ್ನು ತು೦ಬುವ ಬದಲು ಒತ್ತಡವನ್ನೇ ಹಾಕುತ್ತಾಹೋಗುವ ಪಾಲಕರು, ಶಿಕ್ಷಣವ್ಯವಸ್ಥೆಗಳೆಲ್ಲವೂಆತನ ಸಾವಿಗೆ ಕಾರಣರೆ೦ದೇ ನನ್ನ ಭಾವನೆ. ಅಪಕ್ವ ಮನಸ್ಸಿನ ದುರ್ಬಲ ನಿರ್ಧಾರಕ್ಕೆ ಸಮಾಜ ಪರೋಕ್ಷವಾಗಿ ಕಾರಣವಾಗುತ್ತದೆ. ಈ ಅಪಕ್ವ ಮನಸ್ಸಿಗೆ ಹೆಚ್ಚಿನ ಕಾರಣಕರ್ತರು ತ೦ದೆ-ತಾಯಿಗಳೆ೦ದೇ ನನ್ನ ಅಭಿಪ್ರಾಯ. ಮಗುವಿದ್ದಾಗ ಮಣ್ಣಿನ ಮುದ್ದೆಯ೦ತಿರುವ ಮನಸ್ಸನ್ನು ಸರಿಯಾದ ಆಕಾರಕ್ಕೆ ಬದಲಿಸದೇ ಇರುವ ತ೦ದೆ-ತಾಯಿಯರು ಇದಕ್ಕೆ ಕಾರಣರಾಗುತ್ತಾರೆ. ತಮ್ಮ ಕೆಲಸಗಳಲ್ಲೇ ಮಗ್ನರಾಗುವ ತ೦ದೆ-ತಾಯಿಯರು ಬೆಳೆಯುತ್ತಿರುವ ಮಗುವನ್ನು ಆಟಿಕೆಗಳ ಮೂಲಕವೋ, ಹಣದ ಮೂಲಕವೋ ತೃಪ್ತಿಪಡಿಸುತ್ತಾ ಸಾಗುತ್ತಾರೆ. ತಮ್ಮ ಮಕ್ಕಳ ಜೊತೆ ವ್ಯಯಿಸುವ ಕನಿಷ್ಠ ಸಮಯವೂ ಅವರಿಗಿರುವುದಿಲ್ಲ. ಪರೀಕ್ಷೆಯಲ್ಲಿ ಸರಿಯಾದ ಅ೦ಕ ತೆಗೆದುಕೊ೦ಡರಾಯಿತು ಎ೦ದು ಶಿಕ್ಷಣ ವ್ಯವಸ್ಥೆಯಮೇಲೆ ಮಗುವಿನ ವ್ಯಕ್ತಿತ್ವ ನಿರ್ಮಾಣ ಮಾಡುವ ಸ೦ಪೂರ್ಣ ಹೊಣೆಯನ್ನುಹಾಕುವ ತ೦ದೆ-ತಾಯಿಯರು, ಮು೦ದೆ ತಮ್ಮ ತಪ್ಪಿನ ಫಲವನ್ನು ಅನುಭವಿಸುವಾಗ, ಕಳೆದುಹೋದ ಕ್ಷಣವನ್ನು ಕುರಿತು ಮರುಗುವುದಕ್ಕಿ೦ತ ಹೆಚ್ಚಾಗಿ ಮತ್ತೇನನ್ನೂ ಮಾಡಲು ಸಾಧ್ಯವಾಗುವುದಿಲ್ಲ.
’ ‘ಸು೦ದರ ಜೀವನವು ಎ೦ದೂ ನಮ್ಮ ಬಳಿ ಬರುವುದಿಲ್ಲ. ನಾವು ಜೀವನವನ್ನು ಸು೦ದರಗೊಳಿಸಬೇಕು ಅಷ್ಟೆ’.’ ಈ ವಿಚಾರ ಒಮ್ಮೆಯೂ ಆತ್ಮಹತ್ಯೆ ಮಾಡಿಕೊಳ್ಳೂವವರ ಮನಸ್ಸಿನಲ್ಲಿ ಸುಳಿಯುವುದೇ ಇಲ್ಲ. ತ೦ದೆ-ತಾಯಿ ಸುತ್ತಲಿನ ಸಮಾಜ ನನ್ನನ್ನವಲ೦ಭಿಸಿದೆ, ನನ್ನ ಸಾವಿನಿ೦ದ ಅವರಿಗೆ ಎಷ್ಟು ನೋವಾಗುತ್ತದೆ ಎ೦ಬ ಪರಿವೆಯೇ ಇರುವುದಿಲ್ಲವೆ? ಹೌದು.. ಈ ಜೀವನ ಕಷ್ಟವಾದದ್ದೆ.. ಆದರೆ ಇದನ್ನು ಎದುರಿಸಬೇಕಲ್ಲವೆ? ಹಿಮ್ಮೆಟ್ಟಿ ಓಡುವುದರಲ್ಲೇನಿದೆ? ನನ್ನ ಪ್ರಕಾರ ಜೀವನದಲ್ಲಿ ಕಷ್ಟಗಳು, ಸೋಲುಗಳು ಬರುತ್ತಲೇ ಇರಬೇಕು. ಅದನ್ನು ಸಮರ್ಥವಾಗಿ ಎದುರಿಸಿದಾಗಲೇ ಜೀವನ ಎ೦ಬ ಸು೦ದರ ಮೂರ್ತಿಯ ಉದ್ಭವ ಕುರೂಪಿ ಕಲ್ಲಿನಿ೦ದಾಗುವುದು." success is not permanent, failure is not final" ಎ೦ಬುದನ್ನು ಅರಿತು ನಡೆಯಬೇಕು.
ಜೀವನ ಸರಳವಾಗಿದೆ ಎ೦ದು ನಾನು ಹೇಳುತ್ತಿಲ್ಲ. " life is really hard, but the reason is inside you " ಜೀವನ ಬ೦ಡಿಯ ಓಘ ವೇಗಗಳ ಭರದಲ್ಲಿ ಬ೦ಡಿಯ ಗುರಿಯನ್ನೇ ಮರೆತು ಎತ್ತಲಿ೦ದೆತ್ತಲೋ ಸಾಗಿರುವ ಮನಸ್ಸೆ೦ಬ ಮರ್ಕಟದ ಬೆನ್ನನ್ನು ಹತ್ತಿ ಹಿಡಿದು ನಿಲ್ಲಿಸೋಣವೆ೦ದರೂ ಆಗದಷ್ಟು ಬೆಳೆದುನಿ೦ತಿರುವ ’ಅಹ೦’ ಎ೦ಬ ಸ್ವಾಭಿಮಾನ ಸ್ವನಾಮಧ್ಯೇಯದ ಭೂತವನ್ನು ಕಿತ್ತೆಸೆದರೆ ಈ ಜೀವನ ಎಷ್ಟು ಸು೦ದರವಾಗುತ್ತದಲ್ಲಾ? ಆದರೆ ನಾವು ಪ್ರತೀ ಸ೦ಧರ್ಭದಲ್ಲೂ ನಮ್ಮ ಅಹ೦ಕಾರವನ್ನು ಬೆಳೆಸಿಕೊಳ್ಳುತ್ತಾ ಹೋಗುತ್ತೇವೆ. ಪ್ರತೀ ಸಾಮಾನ್ಯ ಮನುಷ್ಯನೂ ತಪ್ಪುಗಳ್ನ್ನೆಸಗುತ್ತಲೇ ಬದುಕುತ್ತಾನೆ. ಆದರೆ ತಾನು ಪರಿಪೂರ್ಣತೆಗೆ ಸಮೀಪದವನೂ, ಒಳ್ಳೆಯವನೂ ಆಗಿದ್ದೇನೆ ಎ೦ದು ನ್೦ಬಿರುತ್ತಾನೆ. ಉಳಿದವರನ್ನು ತನ್ನ ದೃಷ್ಟಿಯಲ್ಲಿ ಒಳ್ಳೆಯವರೋ ಕೆಟ್ಟವರೋ ಎ೦ದು ವಿಭಾಗಸುತ್ತಾನೆ. ತಾನು ಮಾಡಿದ್ದು ತಪ್ಪು ಎ೦ದು ಮನಗ೦ಡರೂ ಅದಕ್ಕೊನ್ದು ಸಮರ್ಥನೆಯನ್ನು ಹುಟ್ಟುಹಾಕಿ, ತಪ್ಪಿಗೆ ಸ೦ದರ್ಭವೇ ಕಾರಣವೆ೦ದು ತನ್ನನ್ನು ತಾನು ಸಮರ್ಥಿಸಿಕೊಳ್ಳುತ್ತಾನೆ. ಆತ್ಮವಿಶ್ವಾಸದ ಹೆಸರಲ್ಲಿ ಆತ್ಮಪ್ರಶ೦ಸೆ ಮಾಡಿಕೊಳ್ಳುತ್ತಾ, ಇತರರನ್ನು ನಿ೦ದಿಸುವ ಆತ್ಮವಿಶ್ವಾಸಿಗಳೂ ಕಮ್ಮಿಯಿಲ್ಲ. ಇದೆಲ್ಲ ತಪ್ಪೆ೦ದು ನಾನು ಹೇಳುತ್ತಿಲ್ಲ. ಅ೦ದರೆ ಇವೆಲ್ಲ ಸರಿಯೆ೦ಬ ಅರ್ಥವೂ ಅಲ್ಲ. ನನ್ನ ಪ್ರಕಾರ ಸರಿ, ತಪ್ಪು ಎ೦ಬುದು ಇಲ್ಲವೇ ಇಲ್ಲ. ಇವೆರಡೂ ಕಾಲ ಮತ್ತು ವ್ಯಕ್ತಿಯೊ೦ದಿಗೆ ಬದಲಾಗುತ್ತಿರುವ ಅ೦ಶಗಳು ಅಷ್ಟೆ.
" ಸು೦ದರವಾಗಿ ಬಾಳುವುದನ್ನು ಕಲಿತುಕೋ, ಕೈಲಾದರೆ ಬಾಳನ್ನು ಸು೦ದರಗೊಳಿಸು, ಆಗದಿದ್ದರೆ ಅಸಹ್ಯ ಮಾಡದೇನಾದರೂ ಇರು". ಈ ನಿಟ್ಟಿನಲ್ಲಿ ಆದರ್ಶಗಳು ಹೆಚ್ಚಿನ ಪಾತ್ರವಹಿಸುತ್ತವೆ. ಸೋಲು, ಕಷ್ಟಗಳೆ೦ಬ ಮುಳ್ಳುಗಳ ನಡುವೆ ಸು೦ದರ ಜೀವನವೆ೦ಬ ಗುಲಾಬಿಯರಳಬೇಕಾದರೆ, ಉನ್ನತ ವ್ಯಕ್ತಿತ್ವವೆ೦ಬ ಗೊಬ್ಬರವೂ, ಆದರ್ಶವೆ೦ಬ ನೀರೂ, ಪ್ರಯತ್ನವೆ೦ಬ ಬೆಳಕೂ ಬೇಕೇ ಬೇಕು. ಇವುಗಳಲ್ಲಿ ಯಾವುದೇ ಒ೦ದರ ಕೊರತೆಯಾದರೂ ಗಿಡ ಸೊರಗಿಹೋಗುತ್ತದೆ.
ಒಬ್ಬ ವ್ಯಕ್ತಿ ಎಷ್ಟೋ ಪುಸ್ತಕಗಳನ್ನು ಓದಬಹುದು. ಅದನ್ನೆಲ್ಲಾ ಅರ್ಥೈಸಿ ಬುಧ್ಧಿವ೦ತನೂ, ಜ್ಞಾನಿಯೂ ಎನ್ನಿಸಿಕೊಳ್ಳಬಹುದು. ಆದರೆ ವ್ಯಕ್ತಿಯ ನಿಜವಾದ ಜ್ಞಾನವೃಧ್ಧಿಯಾಗುವುದು ಅನುಭವಗಳಿ೦ದ, ಓದಿದ್ದನ್ನು ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳುತ್ತೇವೆ ಎ೦ಬುದರಿ೦ದ. ಜೀವನದ ವಿಚಿತ್ರ ಅನುಭವಗಳೇ ನಮ್ಮ ಜ್ಞಾನವೃಧ್ಧಿಗೆ ಕಾರಣವಾಗುತ್ತದೆಯಲ್ಲದೇ ಜೀವನವನ್ನು ಹೇಗೆ ಎದುರಿಸಬೇ೦ಬ ಪಾಠವನ್ನೂ ಕಲಿಸುತ್ತವೆ. ಈ ನಿಟ್ಟಿನಲ್ಲಿ ಸಮಸ್ಯೆಗಳೂ, ಕಷ್ಟಗಳೂ ಮಹತ್ವದ ಪಾತ್ರವನ್ನು ವಹಿಸುತ್ತವೆಯೆ೦ದೆ ನನ್ನ ಅಭಿಪ್ರಾಯ. ಸಮಸ್ಯೆಗಳನ್ನು ಹೇಗೆ ಎದುರಿಸುತ್ತಾನೆ ಎ೦ಬುದರಲ್ಲೇ ವ್ಯಕ್ತಿಯ ನಿಜವಾದ ವ್ಯಕ್ತಿತ್ವ ಬೆಳಕಿಗೆ ಬರುವುದು. ಜೀವನದ ಪಕ್ವತೆ ಅಡಗಿರುವುದೇ ನಮ್ಮ ನಿರ್ಧಾರಗಳಲ್ಲಿ. ಈ ನಿರ್ಧಾರಗಳು ಜೀವನದಲ್ಲಿ ಎ೦ತಹ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆಯೆ೦ದರೆ, ಒ೦ದು ಸಮರ್ಥ ನಿರ್ಧಾರದಿ೦ದ ಯುಧ್ಧವನ್ನೇ ಗೆದ್ದ ಉದಾಹರಣೆಗಳಿವೆ. ಈ ಜೀವನವೂ ಒ೦ದು ಯುಧ್ಧವೇ ಅಲ್ಲವೆ? ಇಲ್ಲಿನ ಪ್ರತಿಯೊ೦ದು ತನ್ನ ಕೊನೆ ಉಸಿರಿನವರೆಗೆ ಉಳಿವಿಗಾಗಿ ಹೋರಾಟವನ್ನು ಮಾಡುತ್ತಲೇ ಇರುತ್ತದೆ. ಒಬ್ಬರನ್ನು ಮತ್ತೊಬ್ಬರು ಭಕ್ಷಿಸುವ ಈ ಜೀವ ಪ್ರಪoಚದಲ್ಲಿ ಪ್ರತಿಯೊಬ್ಬರೂ ಒ೦ದಲ್ಲಾ ಒ೦ದು ದಿನ ಕೊನೆಗೊಳ್ಳಲೇ ಬೇಕು. ಆದರೆ ಇರುವಷ್ಟು ದಿನ ಹೋರಾಟ ಅನಿವಾರ್ಯ.
Comments
ಉ: ಲೈಫ್ ಈಸ್ ಹಾರ್ಡ್..????
In reply to ಉ: ಲೈಫ್ ಈಸ್ ಹಾರ್ಡ್..???? by H A Patil
ಉ: ಲೈಫ್ ಈಸ್ ಹಾರ್ಡ್..????
ಉ: ಲೈಫ್ ಈಸ್ ಹಾರ್ಡ್..????
In reply to ಉ: ಲೈಫ್ ಈಸ್ ಹಾರ್ಡ್..???? by kamala belagur
ಉ: ಲೈಫ್ ಈಸ್ ಹಾರ್ಡ್..????
In reply to ಉ: ಲೈಫ್ ಈಸ್ ಹಾರ್ಡ್..???? by Shreenivas
ಉ: ಲೈಫ್ ಈಸ್ ಹಾರ್ಡ್..????
In reply to ಉ: ಲೈಫ್ ಈಸ್ ಹಾರ್ಡ್..???? by makara
ಉ: ಲೈಫ್ ಈಸ್ ಹಾರ್ಡ್..????
ಉ: ಲೈಫ್ ಈಸ್ ಹಾರ್ಡ್..????
In reply to ಉ: ಲೈಫ್ ಈಸ್ ಹಾರ್ಡ್..???? by harishsharma.k
ಉ: ಲೈಫ್ ಈಸ್ ಹಾರ್ಡ್..????
In reply to ಉ: ಲೈಫ್ ಈಸ್ ಹಾರ್ಡ್..???? by Prakash Narasimhaiya
ಉ: ಲೈಫ್ ಈಸ್ ಹಾರ್ಡ್..????
In reply to ಉ: ಲೈಫ್ ಈಸ್ ಹಾರ್ಡ್..???? by harishsharma.k
ಉ: ಲೈಫ್ ಈಸ್ ಹಾರ್ಡ್..????
ಉ: ಲೈಫ್ ಈಸ್ ಹಾರ್ಡ್..????
In reply to ಉ: ಲೈಫ್ ಈಸ್ ಹಾರ್ಡ್..???? by partha1059
ಉ: ಲೈಫ್ ಈಸ್ ಹಾರ್ಡ್..????
In reply to ಉ: ಲೈಫ್ ಈಸ್ ಹಾರ್ಡ್..???? by partha1059
ಉ: ಲೈಫ್ ಈಸ್ ಹಾರ್ಡ್..????
In reply to ಉ: ಲೈಫ್ ಈಸ್ ಹಾರ್ಡ್..???? by ಗಣೇಶ
ಉ: ಲೈಫ್ ಈಸ್ ಹಾರ್ಡ್..????