ವಾರಣಾಸಿ,ಬಾಂಬ್ ಮತ್ತು ರಾಜಕೀಯ

ವಾರಣಾಸಿ,ಬಾಂಬ್ ಮತ್ತು ರಾಜಕೀಯ

ನಿನ್ನೆ ವಾರಣಾಸಿಯಲ್ಲಿ ಆದ ಬಾಂಬ್ ಸ್ಫೋಟದ ನಂತರ ನ್ಯೂಸ್ ಚಾನೆಲ್‍ಗಳು ರಾತ್ರಿಯಿಡಿ ಸ್ಪೋಟಕ್ಕೆ ಕಾರಣದ ಬಗ್ಗೆ ವಿಶ್ಲೇಷಣೆ ಮಾಡುತ್ತ ಇದ್ದರು.ವಿಶ್ಲೇಷಣೆಯಲ್ಲಿ ಹೊಸತೇನು ಇರಲಿಲ್ಲ.
ಬಿಜೆಪಿಯವರು ಯುಪಿಯೆ ಸರ್ಕಾರದ ನೀತಿಯನ್ನು ಟೀಕಿಸಿದರೆ , ಕಾಂಗ್ರೇಸ್‍ಗೆ ಉತ್ತರ ಪ್ರದೇಶದದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದ ಅಂತ ಹೇಳಲಿಕ್ಕೆ ಇನ್ನೊಂದು ಕಾರಣ ಸಿಕ್ಕಿತು.ಆದ್ರೆ ಕೊನೆಗೆ ಎಲ್ಲರೂ ಈ ಸಮಯದಲ್ಲಿ ರಾಜಕೀಯ ಮಾಡಬಾರದು ಎಂದೂ ಹೇಳಿದರು!ರಾಜಕೀಯ ಒಮ್ಮತ ಅಂದ್ರೆ ಇದು!
ರೈಲ್ವೇ ನಿಲ್ದಾಣದಲ್ಲಿ ಆದ ಸ್ಫ್ಹೋಟದ ಬಗ್ಗೆ ಲಾಲೂ ಸಾಹೇಬರು ತನಿಖೆ ನಡೆಸಬಹುದು.ಮುಂದಿನ ಚುನಾವಣೆಯ ಒಳಗೆ ಅಲ್ಲಿ ನಡೆದದ್ದು ಅಪಘಾತ ಅಂತ ವರದಿಯೂ ತಯಾರಾಗಬಹುದು.
ಮುಲಾಯಮ್ ಸಿಂಗ್‍ಗೆ ಬಾಂಬ್ ಸ್ಫೋಟದ ಹಿಂದೆ ಪಾಕಿಸ್ತಾನದ 'ಕೈ' ಕಾಣಿಸುತ್ತಾ ಇದೆ ಅಂತೆ!ಆತಂಕವಾದಿಗಳು ಪಾಕಿಸ್ತಾನಲ್ಲಿ ಮಾತ್ರ ಇರೋದ?ಯಾವಿದೋ ಡ್ಯಾನಿಷ್ ಕಾರ್ಟೂನಿಷ್ಟ್ ನ ತಲೆಗೆ ೫೧ ಕೋಟಿಯನ್ನು ಸುಪಾರಿ ಕೊಡುವವರು ಇನ್ನೂ ಸರ್ಕಾರದಲ್ಲಿ ಸಚಿವರಾಗಿದ್ದಾರೆ..
ಮನಮೋಹನ್ ಸಿಂಗ್ ಮತ್ತು ಸೋನಿಯ ಗಾಂಧಿ ಈ ದಾಳಿಯನ್ನು ತೀವ್ರವಾಗಿ ಟೀಕಿಸಿದ್ದಾರೆ!
ಅಡ್ವಾಣಿಯವರು ಇನ್ನೊಂದು ಯಾತ್ರೆ ಹೊರಡುತ್ತಾರೆ ಅಂತೆ.

ನಿಜವಾಗಿಯೂ ಈ ದಾಳಿ ನಡೆಸಿದ್ದು ಯಾರು? ಯಾವತ್ತಾದ್ರು ಈ ಸತ್ಯ ಹೊರ ಬರಬಹುದ?
ಭಾರತ ಮತ್ತು ಬುಶ್‍ನ ಅಮೇರಿಕಾದ ನಡುವಿನ ಬಾಂಧವ್ಯ ಉತ್ತಮವಾಗಿರೋದು ಇದಕ್ಕೆ ಕಾರಣವಾಗಿರಬಹುದು ಅಂತ ರಾಜಕೀಯ ಪಂಡಿತರು ಹೇಳುತ್ತಾರೆ.ಇದನ್ನು ನಂಬೋಕೆ ನಾನು ತಯಾರಿಲ್ಲ.

ಪೂರ್ತಿ ರಕ್ಷಣೆ ಯಾವತ್ತು ಸಾಧ್ಯ ಆಗಲಿಕಿಲ್ಲ.ಆದರೆ "Offence is the best way of defence". ಅಲ್ವಾ?

Rating
No votes yet

Comments