ವಿಜಯಕರ್ನಾಟಕದ ಮತ್ತೊಂದು ಕೊಡುಗೆ!

ವಿಜಯಕರ್ನಾಟಕದ ಮತ್ತೊಂದು ಕೊಡುಗೆ!

ಸಂಪದ ಓದುಗರು ಈಗಾಗಲೇ ಓದಿರಬಹುದು, ಇಂದಿನ ವಿಜಯಕರ್ನಾಟಕದಲ್ಲಿ ಅನಂತಮೂರ್ತಿಯವರ 'ಋಜುವಾತು' ಬಿಡುಗಡೆ ಸಮಾರಂಭದ ಭಾಷಣವನ್ನು ಟೀಕಿಸಿ ಬರೆದ ಲೇಖನವನ್ನು.

ವಿಜಯಕರ್ನಾಟಕ ಬರ್ತಾ ಬರ್ತಾ ತೀರಾ ಬೇಜಾವಾಬ್ದಾರಿಯಿಂದ ಲೇಖನಗಳನ್ನು ಪ್ರಕಟಿಸುತ್ತಿದೆ ಎಂಬ ವಾದಕ್ಕೆ ಇಂದಿನ ಲೇಖನ ಮತ್ತೊಂದು ಪುರಾವೆ.

ಲೇಖನ ಓದಿದರೆ ಮೊದಲೇ‌ ಅನ್ನಿಸುತ್ತದೆ. ಸರಿಯೋ ತಪ್ಪೋ‌, ಅನಂತಮೂರ್ತಿ 'ಅಂಡ್ ಕೋ' ವನ್ನು ನಿಂದಿಸಲಿಕ್ಕೇ‌ ಹೊರಟ ಲೇಖನ ಇದು ಅಂತ. ಇರಲಿ, ಅದರಲ್ಲಿ ತಪ್ಪೇನಿಲ್ಲ. ನಾನೇನು ಅನಂತಮೂರ್ತಿಯವರ 'ಅಂಡ್ ಕೋ' ಬಳಗದವನಲ್ಲ. ಅಥವ, ಅನಂತಮೂರ್ತಿ ಮತ್ತು ಪ್ರಸ್ತುತ ಲೇಖಕರ ಜ್ಞಾನ/ಅಜ್ಞಾನ ಗಳ ಬಗ್ಗೆ ಮಾತಾಡುವಷ್ಟು ಪಾಂಡಿತ್ಯವೂ ನನಗಿಲ್ಲ.

ಅನಂತಮೂರ್ತಿಯವರಿಗೆ, ತೀರಾ ಹಿಂದಿನ ಕನ್ನಡ ಸಾಹಿತ್ಯದ ಬಗ್ಗೆ ಹೆಚ್ಚಾದ ಅನುಭವವಿಲ್ಲದಿದ್ದರೂ ಅವರು ಹಿಂದಿನ ಕನ್ನಡದ ಲೇಖಕರು 'non-communal' ಅಂತ ಹೇಳುವುದು ತಪ್ಪು ಎಂಬ ಅರ್ಥ ಬರುವ ಒಂದು ಪ್ಯಾರಾಗ್ರಾಫ್ ಇದೆ. ಇದಕ್ಕೆ ಅನಂತಮೂರ್ತಿಯವರೇ ಬರೆದ ೧೯೮೫ರ ಒಂದು ಪುಸ್ತಕದ ಮುನ್ನುಡಿ ಸಾಕ್ಷಿ ಎನ್ನುವುದು ಲೇಖಕರ ವಾದ. ಆದರೆ ಇದರಲ್ಲಿ ಒಂದು ತಾರ್ಕಿಕ ತಪ್ಪಿದೆ. (ಕೇವಲ ತಾರ್ಕಿಕ). ಅಲ್ಲಾ ಸ್ವಾಮಿ, ೨೨ ವರ್ಷಗಳ ಹಿಂದೆ ಅನಂತಮೂರ್ತಿಯವರು ಹಳೆಯ ಸಾಹಿತ್ಯವನ್ನು ಓದಿರಲಿಲ್ಲ, ಅದನ್ನು ಒಪ್ಪಿಕೊಂಡು ಬರೆದಿದ್ದರು. ಈಗ ೨೨ ವರ್ಷಗಳ ನಂತರವೂ‌ ಅವರ ಕನ್ನಡ ಸಾಹಿತ್ಯ ಜ್ಞಾನ ವೃದ್ಧಿಸಿಲ್ಲ ಅಂತ ಹೇಗೆ ಹೇಳುತ್ತೀರ? ಉಲ್ಲೇಖ ನೀಡುವುದಕ್ಕೆಯೇ‌ ಎಲ್ಲಿಂದಲೋ ತಂದು ಉಲ್ಲೇಖಿಸಿದಂತಿದೆ ಈ‌ ಮಾಹಿತಿ.

ಇದಾದ ಮುಂದಿನ ಪ್ಯಾರ ದಲ್ಲಿಯೇ ಲೇಖಕರು ಮತ್ತೊಂದು potentially damaging statement ಕೊಡ್ತಾರೆ. ಅದ್ಯಾವುದು ಅಂತ ನೀವೇ‌ ನೋಡಿ! (ಜಾಸ್ತಿ ತಲೆ ಕೆಡೆಸಿಕೊಳ್ಳಬೇಕಾಗಿಲ್ಲ, ಸಾಹಿತ್ಯದ ಗಂಧವೂ ಇಲ್ಲದೇ, ಸಮುದಾಯ ಜ್ಞಾನವನ್ನು ಅಷ್ಟೋ ‌ಇಷ್ಟೋ by default‌ ತಲೆಯಲ್ಲಿ ಸೇರಿಸಿಕೊಂಡಿರುವ ನಾನೇ‌ ಕಂಡು ಹಿಡಿದಿರಬೇಕಾದರೆ ಯಾರೂ‌ ಕೂಡ ಇದನ್ನು ಹಿಡಿದು ಲೇಖಕರನ್ನು ಮತ್ತೂ‌ ಟೀಕಿಸಬಹುದು.)

ಒಟ್ಟಿನಲ್ಲಿ ಈ‌ ಪೇಪರ್ ನ ಉಗಿಯಕ್ಕೆ ನನಗೆ ಮತ್ತೊಂದು ಚಾನ್ಸು ಅಷ್ಟೇ.

Rating
No votes yet

Comments