ವಿರಹದಾ ಬೇಗೆ
ಹೃದಯದಾ ಪ್ರೀತಿಯಾ ಹೇಳಲೆಂತು ಗೆಳೆಯಾ
ವಿರಹದಾ ನೋವಾ ತಾಳಲೆಂತು ಇನಿಯಾ
ನೀನಿರದಾ ದಿನಗಳು
ಕಣ್ಣೀರಿನಾ ಹನಿಗಳು
ನನ್ನ ಕಂಬನಿಯೊಂದಿಗೊಡಗೂಡಿ
ಕಂಬನಿಯಿಡುತಿವೆ ಆ ಲತೆಗಳು
ಏನೆಂದು ಹೇಳಲಿ ಆ ಲತೆಯ ವ್ಯಥೆಯಾ
ಹಸಿರಾದ ಬಳಿಳಿಗೆ
ಉಸಿರುಗಟ್ಟಿದ ಹಾಗೆ
ತಾಳಲೆಂತು ನಾ ಈ ವಿರಹ ಬೇಗೆ
ಉಸಿರಾದ ಗೆಳೆಯಾ ಹೋದೆ ನೀ ಎಲ್ಲಿಗೆ
ಆ ರವಿಯ ಬೆಳಕಿನಲಿ ಬೆಳಗುತಿಹ ಕಂಬನಿ
ಸಾಲುಗಳ ತನಿಸುವೆಯಾ ಬಂದು ನೀ
ಬಾಡಿರುವ ಮೊಗಸಿರಿಗೆ ಜೀವಕಳೆ ತರಲೆಂದು
ನಿಲ್ಲಬಾರದೆ ಗೆಳೆಯಾ ನನ್ನೆದಿರು ಬಂದು
ಕಾದಿರುವೆ ನಿನಗಾಗಿ ಕಂಬನಿಯ ಮಿಡಿಯುತ್ತಾ
ಕಂಬನಿಯನೊರೆಸಲು ನೀ ಬರುವೆ ಎಂದು
Rating
Comments
ಉ: ವಿರಹದಾ ಬೇಗೆ
In reply to ಉ: ವಿರಹದಾ ಬೇಗೆ by manju787
ಉ: ವಿರಹದಾ ಬೇಗೆ
ಉ: ವಿರಹದಾ ಬೇಗೆ
In reply to ಉ: ವಿರಹದಾ ಬೇಗೆ by makara
ಉ: ವಿರಹದಾ ಬೇಗೆ
In reply to ಉ: ವಿರಹದಾ ಬೇಗೆ by sumangala badami
ಉ: ವಿರಹದಾ ಬೇಗೆ
In reply to ಉ: ವಿರಹದಾ ಬೇಗೆ by makara
ಉ: ವಿರಹದಾ ಬೇಗೆ