ವೇದಸುಧೆಯ ವಾರ್ಷಿಕೋತ್ಸವ

ವೇದಸುಧೆಯ ವಾರ್ಷಿಕೋತ್ಸವ

ಆತ್ಮೀಯ ಸಂಪದ ಮಿತ್ರರೇ, ಅಂತರ್ಜಾಲ ಕ್ಷೇತ್ರದಲ್ಲಿ ನೂರಾರು ಜನ ಸಹೃದಯರನ್ನು ಹತ್ತಿರ ತಂದ ಕೀರ್ತಿಯು "ಸಂಪದ" ಕ್ಕೆ ಸಲ್ಲುತ್ತದೆ.ನನ್ನ ವೈಯಕ್ತಿಕ ಬ್ಲಾಗ್ "ವೇದಸುಧೆಯು," ಒಂದು ಬಳಗದ ಬ್ಲಾಗ್ ಆಗಿ ಕಾರ್ಯಾರಂಭ ಮಾಡಿದ ಮೇಲೆ  ಸಂಪದದಲ್ಲಿ ನನ್ನ ಬರವಣಿಗೆಯು ಕಡಿಮೆ ಯಾಯ್ತು.ಆದರೂ ಸಂಪದ ಮಿತ್ರರ ಸಂಪರ್ಕ ಇದ್ದೇಇದೆ. ಶ್ರೀಹರಿಪ್ರಸಾದ್ ನಾಡಿಗ್ ಮೊದಲ್ಗೊಂಡಂತೆ ನೂರಾರು ಜನ ಆತ್ಮೀಯರನ್ನು ಕೊಟ್ಟ ಸಂಪದಕ್ಕೆ ಕೃತಜ್ಞತೆಯನ್ನು ಸಲ್ಲಿಸುತ್ತಾ ಎಲ್ಲಾ ಮಿತ್ರರನ್ನೂ ಹಾಸನದಲ್ಲಿ ಇದೇ ೩೦ ರಂದು ನಡೆಯಲಿರುವ ವೇದಸುಧೆಯ ವಾರ್ಷಿಕೋತ್ಸವಕ್ಕೆ ಹೃತ್ಪೂರ್ವವಾಗಿ ಆಹ್ವಾನಿಸುತ್ತಿದ್ದೇನೆ. ಬೆಳಗಿನ ೯.೩೦ ರಿಂದ ಆರಂಭವಾಗುವ ವಾರ್ಷಿಕೋತ್ಸವ ಸಮಾರಂಭದ ವಿವರಗಳು ಜೊತೆಯಲ್ಲಿ ಪ್ರಕಟವಾಗಿರುವ ಆಹ್ವಾನ ಪತ್ರಿಕೆಯಲ್ಲಿದೆ. ದಯಮಾಡಿ ಬನ್ನಿ. ಒಂದು ದಿನ ಎಲ್ಲರೂ ಒಟ್ಟಾಗಿ ಹಾಸನದಲ್ಲಿರೋಣ. ಊಟೋಪಚಾರ ಇತ್ಯಾದಿ ಎಲ್ಲಾ ವ್ಯವಸ್ಥೆಗಳ ಯೋಜನೆ ಈಗಾಗಲೇ ಆಗಿದೆ. ಹೆಚ್ಚಿನ ಮಾಹಿತಿಗಾಗಿ ಒಂದು ಮೇಲ್ ಮಾಡಿ, ಅಥವಾ ವೇದಸುಧೆಗೆ ಭೇಟಿ ನೀಡಿ. ನಿಮ್ಮ ಮಿತ್ರ

-ಹರಿಹರಪುರಶ್ರೀಧರ್

 

 

 

 

 

 

 

 

 

 

 

 

 

 

 

 


Rating
No votes yet

Comments