ವ್ಯರ್ಥ ಪ್ರೀತಿ

ವ್ಯರ್ಥ ಪ್ರೀತಿ

ವ್ಯರ್ಥ ಪ್ರೀತಿ.

ಪ್ರತ್ಯೂಷದ ನೆರಳಲ್ಲಿ ಹಾಸಿದ ರಂಗೋಲಿ
ವ್ಯರ್ಥವಾಯಿತು ಗೆಳೆಯಾ ನಿನ್ಗ ದಾರಿ ಕಾದು
ಕಣ್ಣ ತೆರೆಯ ಕೊನೆಯಲ್ಲಿ ಬಾಗಿದ ಕಾಡಿಗೆ
ಬಿಕ್ಕಳಿಸಿತು ಗೆಳೆಯಾ ವ್ಯರ್ಥ ನಗುವಾಗಿ.

ಪರೀಕ್ಷೆಗಳ ಬರೆದು ಬರೆದು ನಪಾಸಾದ ಹುಡುಗನಂತೆ
ಪರಿವಳಿಸಿದ ಪುಷ್ಪ ನೆಲಕಚ್ಚಿತು ಕರಕಲಾಗಿ
ಬಾಡದ ಹೂಗಳ ತೋರಣ ಬಾಡಿ ಬಸವಳಿಯಿತು
ನಲ್ಲನ ನಿರೀಕ್ಷೆಯ ಝಳದಲ್ಲಿ.

ಬಂಗಾರದ ತೋಳಬಂದಿ ಎದೆಯ ಇರಿಯಿತು.
ನಿರಾಕರಣೆಯ ಕುರುಹಾಗಿ
ಕೃಷ್ಣನ ಕೊಳಲು ರಾಧೆಗಾಗಿಯಲ್ಲ!
ಸತ್ಯಭಾಮೆಗಲ್ಲ! ಗೋಪಿಕೆಯರಿಗೆ ಮೀಸಲು!
ಎಂಥ ಬಯಲು ಬೆಂಗಾಡಾಯಿತು
ಈ ವಸುಂಧರೆಯ ಒಡಲು!!

ಕೈಗೆ ಹಚ್ಚಿದೆ ಮದರಂಗಿ, ಹಣೆಯಲ್ಲಿಟ್ಟ ಸಿಂಧೂರ,
ಮುಡಿದೆ ಮಲ್ಲಿಗೆ ನಿನ್ನ ಉಸಿರಾಗಿ
ಬರಲಿಲ್ಲ ನೀ ಬದಲಾಗಿ
ನನ್ನ ಒಲವಾಗಿ.

ಪ್ರತ್ಯೂಷದಿ ನಿತ್ಯ ನಿರೀಕ್ಷೆಯ
ಬಣ್ಣ ಬಣ್ಣದ ರಂಗೋಲಿ
ವ್ಯರ್ಥವಾಯಿತು ಗೆಳೆಯಾ
ನಿನ್ನ ನೆನಪಾಗಿ.  

Rating
No votes yet

Comments