ಶಕ್ತಿವಂತರಾಗಲು ಮಾಂಸಾಹಾರ ಅಗತ್ಯವೇ?

ಶಕ್ತಿವಂತರಾಗಲು ಮಾಂಸಾಹಾರ ಅಗತ್ಯವೇ?

 

ಸ್ಪಷ್ಟನೆ : ಇದು "ಶಕ್ತಿವಂತರಾಗುವ" ಬಗ್ಗೆ ಮಾತ್ರ. ಸಸ್ಯಾಹಾರ vs ಮಾಂಸಾಹಾರ ಬಗೆಗಿನ ಎಂದಿನ ವಾದ ಅಲ್ಲ.

 

ಕೆಳಗಿನ ಕೊಂಡಿಯಲ್ಲಿ ಕುಸ್ತಿಪಟು ಸುಶೀಲ್ ಕುಮಾರ್ ಅವರು ಸಸ್ಯಾಹಾರಿಗಳು ಎಂಬ ಬಗ್ಗೆ ವಿವರಗಳಿವೆ. 

http://www.petaindia.com/feat/f-sushil-kumar.asp

 

ಹಾಗೆಯೇ ಕೆಳಗಿನ ಕೊಂಡಿಯಲ್ಲಿ ಸಸ್ಯಾಹಾರಿಗಳಾದ ೧೦ ಪ್ರಖ್ಯಾತ ಕ್ರೀಡಾಪಟುಗಳ ಬಗ್ಗೆ ವಿವರಗಳಿವೆ :

http://www.treehugger.com/galleries/2009/05/10-superstar-athletes-who-do-not-eat-meat.php

 

ಅಲ್ಲದೆ, ಚೀನಾದ Martial Arts ಕಲಾವಿದರಿಗೂ ಮಾಂಸ ವ್ಯರ್ಜ್ಯ ಎಂದು ಕೇಳಿದ್ದೇನೆ. ಆದರೆ ದೈಹಿಕ ಶ್ರಮ ಬೇಡುವ ಕೆಲಸಗಳಲ್ಲಿರುವ (ಸೇನೆ, ಪೋಲೀಸ್, ಕ್ರೀಡೆ ಇತ್ಯಾದಿ) ಬಹುತೇಕರು ಮಾಂಸಾಹಾರಿಗಳು ಎಂಬುದೂ ಸತ್ಯ.

 

ಹಾಗಿದ್ದಲ್ಲಿ "ದೈಹಿಕ ಶಕ್ತಿಗೂ ಆಹಾರ ಪಧ್ಧತಿಗೂ ಸಂಬಂಧವಿಲ್ಲ" ಎಂದು ಹೇಳಬಹುದೇ?

 

 

Rating
No votes yet

Comments