ಶಾಯರಿ ಜುಗಲಬಂದಿ-೦೨

ಶಾಯರಿ ಜುಗಲಬಂದಿ-೦೨

http://sampada.net/blog/veeravenki/12/01/2009/15607

ದಡೂತಿ ಜಗಳಗಂಟಿ ನನ್ನ ಹೆಂಡತಿ
ದಡೂತಿ ಜಗಳಗಂಟಿ ನನ್ನ ಹೆಂಡತಿ
ಅವಳಿಂದಾಗಿಯೇ ಆಗಿದ್ದು ನಾ ಕುಡಿವ ಹೆಂಡ 'ಅತಿ'!!
- Vರ ( Venkatesha ರಂಗಯ್ಯ )

ಹೆಂಡ ಕುಡಿಯಬ್ಯಾಡಿ ಅತಿಯಾಗಿ
ಹೆಂಡ ಕುಡಿಯಬ್ಯಾಡಿ ಅತಿಯಾಗಿ
ಒಂದು ದಿನ ಹೋಗುತಿರಾ ಕೊನೆಯಾಗಿ
(ತಮಾಷೆಯಿಂದ ನಿಮ್ಮವ)
-ಮಧುಸೂದನ್ ಗೌಡ

ನಿಮ್ಮ ಹೆಂಡತಿ ಜಗಳಗಂಟಿ ಅಲ್ಲದೆ ಇದ್ದಾರೆ ದಢೂತಿ
ನಿಮ್ಮ ಹೆಂಡತಿ ಜಗಳಗಂಟಿ ಅಲ್ಲದೆ ಇದ್ದಾರೆ ದಢೂತಿ
ಆದರೂ ಕುಡೀತೀರ ಹೆಂಗ ಹೇಳಿ ನೀವು ಹೆಂಡ ಅತಿ?
-ಆಸು ಹೆಗ್ಡೆ

ಬೇಕಂತಲೇ ಏನು ಕುಡಿಯುವುದಿಲ್ಲ ಹೆಂಡ ಅತಿ
ಬೇಕಂತಲೇ ಏನು ಕುಡಿಯುವುದಿಲ್ಲ ಹೆಂಡ ಅತಿ
ತೋರಬೇಕೆಂದು ಅವಳ ಮೊಂಡುತನಕ್ಕೆ ಒಂದು ಗತಿ !!
-Vರ ( Venkatesha ರಂಗಯ್ಯ )

ಅವಳ ಮೊಂಡುತನಕೆ ತೋರಿಸಬೇಕೆಂದು ಒಂದು ಗತಿ
ಅವಳ ಮೊಂಡುತನಕೆ ತೋರಿಸಬೇಕೆಂದು ಒಂದು ಗತಿ
ಹಿಂಗೇ ಕುಡಿದರೆ ನೀನೇ ಅವಳಿಗಿಂತ ಮೊದಲು ಸಾಯ್ತಿ.
-ಆಸು ಹೆಗ್ಡೆ

ಕೆಲವರಿಗೆ ಇರುವುದೇ ಇಲ್ಲಾ ಜಗಳವಾಡಲು ಕಾರಣ
ಕೆಲವರಿಗೆ ಇರುವುದೇ ಇಲ್ಲಾ ಜಗಳವಾಡಲು ಕಾರಣ
ಆದರು ಜಗಳವಾಡಲು ಹುಡುಕುತ್ತಿರುತ್ತಾರೆ ಹೂರಣ
-Vರ ( Venkatesha ರಂಗಯ್ಯ )

ಬರಿದೆ ಜಗಳವಾಡುವುದು ನಿಜಕೂ ಕೆಲವರದು ಜಾಯಮಾನ
ಬರಿದೆ ಜಗಳವಾಡುವುದು ನಿಜಕೂ ಕೆಲವರದು ಜಾಯಮಾನ
ಜಗಳ ಆಡಿದ ಮೇಲಷ್ಟೆ ಸಿಗುವುದವರಿಗೆ ವಿಚಿತ್ರ ಸಮಾಧಾನ
-ಆಸು ಹೆಗ್ಡೆ

ಹೆಂಡತಿ ಇಲ್ಲದಿದ್ದರು ಬರೆಯುತ್ತಿರುವೆ ಶಾಯರಿ ಕವನ
ಹೆಂಡತಿ ಇಲ್ಲದಿದ್ದರು ಬರೆಯುತ್ತಿರುವೆ ಶಾಯರಿ ಕವನ
ಇಷ್ಟೆಲ್ಲಾ ಬರೆಯಲು ಸ್ಪೂರ್ತಿ ಕೊಟ್ಟವರೆಲ್ಲರಿಗೂ ಹೇಳಲೇಬೇಕು ನಮನ
-Vರ ( Venkatesha ರಂಗಯ್ಯ )

ಶಾಯರಿ ಬರೆಯಲು ಇರಲೇ ಬೇಕೆಂದೇನಿಲ್ಲ ಹೆಂಡತಿ ಹತ್ತಿರ
ಶಾಯರಿ ಬರೆಯಲು ಇರಲೇ ಬೇಕೆಂದೇನಿಲ್ಲ ಹೆಂಡತಿ ಹತ್ತಿರ
ಅಲ್ಲಾ, ನಿಮ್ಮ ಶಾಯರಿಗೆ ನಾನೇ ಯಾಕೆ ಕೊಡಬೇಕು ಉತ್ತರ?
-ಆಸು ಹೆಗ್ಡೆ

ನಿಮ್ಮಲ್ಲಿದೆ ಶಾಯರಿಗೆ ಉತ್ತರ ಕೊಡುವ ಜಾಣತನ
ನಿಮ್ಮ ಶಾಯರಿಗಳು ರಂಜಿಸುತಿವೆ ನಮ್ಮ ತನು ಮನ
ನಿಮಗೆ ಸಂಪದಿಗರೆಲ್ಲರ ಪರವಾಗಿ ಆತ್ಮೀಯ ನಮನ
-Vರ ( Venkatesha ರಂಗಯ್ಯ )

ಶಾಯರಿ ಎಂದರೆ ಇದು ಯುದ್ಧವೇನಲ್ಲ
ಶಾಯರಿ ಎಂದರೆ ಇದು ಯುದ್ಧವೇನಲ್ಲ
ಯಾರನ್ನೂ ಸೋಲಿಸುವ ಬಯಕೆ ಇಲ್ಲಿಲ್ಲ

ಮಾತಿಗೆ ಪ್ರತಿ ಮಾತು ನೀಡುತ್ತದೆ ಮನಕ್ಕೆ ಮುದ
ಮಾತಿಗೆ ಪ್ರತಿ ಮಾತು ನೀಡುತ್ತದೆ ಮನಕ್ಕೆ ಮುದ
ಒರೆಗೆ ಹಚ್ಚಿದರೆ ನಮ್ಮ ಬುದ್ಧಿಯೂ ಆಗುತ್ತದೆ ಹದ

ಮೆಚ್ಚುಗೆಯ ಮಾತುಗಳಿಗಾಗಿ ನಾ ಬರೆಯುವುದಲ್ಲ
ಮೆಚ್ಚುಗೆಯ ಮಾತುಗಳಿಗಾಗಿ ನಾ ಬರೆಯುವುದಲ್ಲ
ಆದರೆ ಜನರು ಮೆಚ್ಚಿದರೆ ನಾನೂ ಖುಷಿ ಪಡಬಹುದಲ್ಲ

ಮೆಚ್ಚುಗೆಯ ಮಾತುಗಳು ಕೇಳಿದರೆ ಅತ್ತಿತ್ತಲಿಂದ
ಮೆಚ್ಚುಗೆಯ ಮಾತುಗಳು ಕೇಳಿದರೆ ಅತ್ತಿತ್ತಲಿಂದ
ಮತ್ತೆ ಬರೆಯಬಹುದು ನಾ ಹೊಸ ಹುಮ್ಮಸ್ಸಿನಿಂದ
-ಆಸು ಹೆಗ್ಡೆ

Rating
No votes yet