ಶಾಲಾ ಮಕ್ಕಳ ದಿನಚರಿ

ಶಾಲಾ ಮಕ್ಕಳ ದಿನಚರಿ

ಚುಮುಚುಮು ಚಳಿಯಲಿ

ಹೊದ್ದಿಗೆ-ಶಾಲು ಚೀಲ ಕೈಯಲಿ,

ಕುರುಕುಲು ಇರಲು ಬಾಯಲಿ...

 

ಮುಂಜಾನೆಯ ಮಂಜಲಿ,

ಬೆಚ್ಚಗೆ ಹೊರಟರು ಭರದಲಿ

ಪಾಠವ ಕಲಿತರು ಶಾಲೆಯಲಿ....

 

ಬಿಡುವಿನ ಅಂತರ ವೇಳೆಯಲಿ

ಆಟಿಕೆ ಗೆಳೆಯರ ಜೊತೆಯಲಿ

ನೋಟವ ಸವಿದರು ಬಯಲಲಿ....

 

ಸಂಜೆಗೆ ಮರಳುವ ದಾರಿಯಲಿ

ಸ್ನೇಹಿತರೊಂದಿಗೆ ಹರಟೆಯಲಿ,

ಮನೆಯ ತಲುಪಿ ದಣಿವಿನಲಿ....

 

ಚಕ್ಕುಲಿ ತಿಂದರು ಹಸಿವಿನಲಿ,

ಸಲುಗೆ ಸಹೋದರರಲಿ,

ಕಾಲವ ಕಳೆದರು ಹರುಷದಲಿ.....

 

-OK

Rating
Average: 4 (1 vote)