ಶಾಸ್ತ್ರ ಓಕೆ 'ಶಾಸ್ತ್ರ ಜಡತ್ವ' ಯಾಕೆ?
http://sampada.net/blog/%E0%B2%B9%E0%B3%87%E0%B2%AE-%E0%B2%AA%E0%B2%B5%E0%B2%BE%E0%B2%B0%E0%B3%8D/24/01/2011/30133
ಈ ಬರಹದ ನಂತರದ ಚರ್ಚೆ ಓದಿದಾಗ ಒಂದು Zen ಕಥೆ ನೆನಾಪಯ್ತು. ಬರೆದು ಹಾಕೋಣ ಅಂತ ಅನ್ಕೊತಾ ಇದ್ರೂ ಅದ್ಯಾಕೋ ಬರಿಯೋಕೆ ಆಗೇ ಇರಲಿಲ್ಲ. ಈ ಕಥೆ ಇಂಟರ್ನೆಟ್ನಲ್ಲಿ ಈಗಾಗಲೇ ಇರಬಹುದು. ಹುಡ್ಕೊದ್ಕಿಂತ ಬರಿಯೋದೆ ವಾಸಿ ಅಂತ ಬರೀತಾ ಇದ್ದೀನಿ!
ಸರಿ, ಓವರ್ ಟು ಕಥೆ!!
.......................
ಇಬ್ರು ಯುವ ಸನ್ಯಾಸಿಗಳು ಎಂದಿನಂತೆ walking ಮುಗಿಸಿಕೊಂಡು ತಮ್ಮ ಆಶ್ರಮಕ್ಕೆ ವಾಪಸಾಗ್ತಾ ಇದ್ರು.
( ಸ್ವಲ್ಪ offline talk
..... ಸನ್ಯಾಸಿಗಳು ಅಂದ್ರೆ ಗೊತ್ತಲ್ಲವ?! (ಅನೇಕ ಮತ ಧರ್ಮಗಳಲ್ಲಿ) ಬ್ರಹ್ಮಚರ್ಯವೂ ಸನ್ಯಾಸದ ಭಾಗವೇ. ಇನ್ನು ಬ್ರಹ್ಮ ಚರ್ಯದ definition ಅಂತೂ ನಿಮಗೆ ಗೊತ್ತೇ ಇದೆ ಆಲ್ವಾ!! ;) )
ವಾಪಾಸ್ ಬರ್ಬೇಕಿದ್ರೆ ಒಂದು, ಹಳ್ಳನೋ ಕೊಳ್ಳನೋ ಏನೋ ಒಂದು!! ದಾಟಿ ಬರಬೇಕಿತ್ತು. ಅಲ್ಲಿ ನೋಡಿದರೆ ಸಕತ್ತಾಗವ್ಳೆ!, ಸುಮ್ನೆ ನಗ್ತವ್ಳೆ!!,ಅಂತ ಊರ್ ತುಂಬಾ ಬಯ್ಮಾತಗಿರೋ, ಚಲುವಾಂತ ಚನ್ನಿ ಒಬ್ಳು, ಇವರಿಗೆ ಕಾಯ್ತಾ ಇರ್ತಾಳೆ. ಹೊಳೆ ದಾಟೋಕೆ ನಮ್ಮ ಬ್ರಹ್ಮಚಾರಿಗಳ ಹೆಲ್ಪ್ ನೂ ಕೇಳ್ಬಿಡ್ತಾಳೆ!
ಸಹಾಯ ಕೇಳಿದ್ರೆ ಯಾರ್ ಸುಮ್ನಿರ್ತಾರೆ? ಹೇಳಿ. ಅದೂ ಚಲುವಾಂತ ಚನ್ನಿ ಕೇಳಿದ್ರೆ!!!. ...ಸರಿ ಒಬ್ಬ ಸನ್ಯಾಸಿ ಆಕೆಯ ಕೈ ಹಿಡಿದು ಹೊಳೆ ದಾಟುಸ್ತಾನೆ.
ನಂತರ ಇಬ್ರೂ ಆಶ್ರಮಕ್ಕೆ ವಾಪಾಸಗ್ತಾರೆ.
ಇಲ್ಲಿಗೆ ವಿರಾಮ! ಮುಂದೆ ಆಶ್ರಮದಲ್ಲಿ ಸಿಗೋಣ! ;)
.
.
.
.
.
.
ವಿರಾಮದ ನಂತರ ಸ್ವಾಗತ..... ನಮ್ಮಾಶ್ರಮಕ್ಕೆ !
ಎರಡನೆಯವ ಮೊದಲನೆ ಸನ್ಯಾಸಿನ ಕೇಳ್ತಾನೆ...."ಅಲ್ವೋ ನಮ್ಮ ಗುರುಗಳು ಏನು ಹೇಳಿ ಕೊಟ್ಟಿದ್ದಾರೆ, XX ಶಾಸ್ತ್ರ ಏನು ಹೇಳುತ್ತೆ, XXX ಪುರಾಣ ಏನು ಹೇಳುತ್ತೆ. ನಿನಗೇನೂ ಬುದ್ದಿ ಇಲ್ವಾ.. ಒಬ್ಳು ಯುವತಿಯ ಕೈಮುಟ್ಟಿ ನದಿ ದಾಟಿಸಲು!!!" ಅಂತ ತನ್ನ ಶಾಸ್ತ್ರ ಪಾಂಡಿತ್ಯವನ್ನು ಪ್ರದರ್ಶಿಸಿದ್ದೇ ಪ್ರದರ್ಶಿಸಿದ್ದು!!!
*ಬನ್ನಿ ಸ್ವಲ್ಪ offline ನಲ್ಲಿ ಮಾತಾಡೋಣ!
ನೋಡಿ ನಾವು ಎಲೆಕ್ಟ್ರಾನಿಕ್ಸ್ ಮಂದಿ, ಅದರಲ್ಲೂ DiGital ಎಲೆಕ್ಟ್ರಾನಿಕ್ಸ್ ಪ್ರಿಯರು. ಇಲ್ಲಿ k map ಬಳಸ್ಬೇಕಿದ್ರೆ dont care condition ಗೆ X ಅಂತಾನೆ ಬಳಸೋದು ಹಾಗಾಗಿ X ಬಳಕೆ...ಕಾಮಾಲೆ ಕಣ್ಣು ಜಾಗೃತ ಆಗೋದು ಬೇಡ! ;) ಮತ್ತೆ online ಗೆ ಗ ಹೋಗೋಣ ಸಿದ್ದರಾಗಿ.
.
.
.
.
.
welcome back, online!!!
ಅದಕ್ಕೆ ಮೊದಲ ಸನ್ಯಾಸಿ ಕೇಳ್ತಾನೆ "ನಾ ಆಕೆನ ಹೊಳೆ ಬದೀಲೆ ಬಿಟ್ಟು ಬಂದೆ, ನೀನಿನ್ನೂ ಆಕೆಯನ್ನು ಹೊತ್ಕೊಂಡು ಇಲ್ಲಿವರ್ಗೂ ಕರ್ಕೊಂಡು ಬನ್ದಿದಿಯಾ?!"
ಆಗ ಗುರುಗಳು ಅಲ್ಲಿ ಪ್ರತ್ಯಕ್ಶರಾಗಿ... "ಶಾಸ್ತ್ರ ಓಕೆ 'ಶಾಸ್ತ್ರ ಜಡತ್ವ' ಯಾಕೆ?" ಕಣ್ತೆರೆಸುತ್ತಾರೆ !
ಇಲ್ಲಿಗೀ ಕಥೆ ಮುಗಿಯಿತು. :(
Comments
ಉ: ಶಾಸ್ತ್ರ ಓಕೆ 'ಶಾಸ್ತ್ರ ಜಡತ್ವ' ಯಾಕೆ?
ಉ: ಶಾಸ್ತ್ರ ಓಕೆ 'ಶಾಸ್ತ್ರ ಜಡತ್ವ' ಯಾಕೆ?
In reply to ಉ: ಶಾಸ್ತ್ರ ಓಕೆ 'ಶಾಸ್ತ್ರ ಜಡತ್ವ' ಯಾಕೆ? by mpneerkaje
ಉ: ಶಾಸ್ತ್ರ ಓಕೆ 'ಶಾಸ್ತ್ರ ಜಡತ್ವ' ಯಾಕೆ?
In reply to ಉ: ಶಾಸ್ತ್ರ ಓಕೆ 'ಶಾಸ್ತ್ರ ಜಡತ್ವ' ಯಾಕೆ? by narabhangi
ಉ: ಶಾಸ್ತ್ರ ಓಕೆ 'ಶಾಸ್ತ್ರ ಜಡತ್ವ' ಯಾಕೆ?
ಉ: ಶಾಸ್ತ್ರ ಓಕೆ 'ಶಾಸ್ತ್ರ ಜಡತ್ವ' ಯಾಕೆ?
In reply to ಉ: ಶಾಸ್ತ್ರ ಓಕೆ 'ಶಾಸ್ತ್ರ ಜಡತ್ವ' ಯಾಕೆ? by ಆರ್ ಕೆ ದಿವಾಕರ
ಉ: ಶಾಸ್ತ್ರ ಓಕೆ 'ಶಾಸ್ತ್ರ ಜಡತ್ವ' ಯಾಕೆ?
In reply to ಉ: ಶಾಸ್ತ್ರ ಓಕೆ 'ಶಾಸ್ತ್ರ ಜಡತ್ವ' ಯಾಕೆ? by narabhangi
ಉ: ಶಾಸ್ತ್ರ ಓಕೆ 'ಶಾಸ್ತ್ರ ಜಡತ್ವ' ಯಾಕೆ?
ಉ: ಶಾಸ್ತ್ರ ಓಕೆ 'ಶಾಸ್ತ್ರ ಜಡತ್ವ' ಯಾಕೆ?