ಶಿವನ ಪೂಜೆಯ ಹೂ

ಶಿವನ ಪೂಜೆಯ ಹೂ

ಚಿತ್ರ
ಒಳಗೆ ನುಗ್ಗುತ ದಟ್ಟ ಕಾಡಿನ ಕೊಳಗಳೊಳಗಡೆ ಮುಳುಗಿ ಪರ್ವತ ಗಳನು ಏರುತ ಹುಡುಕುತಿರುವರು ಹೂವ ಕೊಯ್ಯಲಿಕೆ; ತಿಳಿವೆ ಕಾಣದ ಜಡಮತಿಗಳಿವು ತಿಳಿಯರಯ್ಯೋ ಮನದ ಕೊಳದಲ- ರಳಿಹ ಕಮಲವ ಮುಡಿಸೆ ಶಿವನಿಗೆ ಬಹಳ ಮೆಚ್ಚಿಗೆಯು! ಸಂಸ್ಕೃತ ಮೂಲ (ಆದಿಶಂಕರಾಚಾರ್ಯರ ಶಿವಾನಂದಲಹರಿ, ಶ್ಲೋಕ ೯): ಗಭೀರೇ ಕಾಸಾರೇ ವಿಶತಿ ವಿಜನೇ ಘೋರವಿಪಿನೇ ವಿಶಾಲೇ ಶೈಲೇ ಚ ಭ್ರಮತಿ ಕುಸುಮಾರ್ಥಂ ಜಡಮತಿಃ ಸಮರ್ಪ್ಯೈಕಂ ಚೇತಃ ಸರಸಿಜಮುಮಾನಾಥ ಭವತೇ ಸುಖೇನಾವಸ್ಥಾತುಂ ಜನ ಇಹ ನ ಜಾನಾತಿ ಕಿಮಿಹೋ || -ಹಂಸಾನಂದಿ ಕೊ: ಹಿಂದೆ ಈ ಪದ್ಯವನ್ನೊಮ್ಮೆ ಅನುವಾದಿಸಿದ್ದೆ. ಆದರೆ ಈ ವಾರದ ಪದ್ಯಪಾನಕ್ಕೆಂದು ಅದೇ ಅನುವಾದವನ್ನು ಬದಲಾಯಿಸಿ ಭಾಮಿನೀ ಷಟ್ಪದಿಗೆ ಅಳವಡಿಸಿದ್ದೇನೆ - ಶಿವರಾತ್ರಿಯ ಈ ದಿನದಂದು. ಚಿತ್ರ: http://en.wikipedia…
Rating
No votes yet

Comments