ಶಿವರಾಜ ಪಾಟೀಲರಿಂದ ಚಿದಂಬರಂ ಕಲಿತ ಪಾಠ!

ಶಿವರಾಜ ಪಾಟೀಲರಿಂದ ಚಿದಂಬರಂ ಕಲಿತ ಪಾಠ!

ಅಂದಿನ ಗೃಹಮಂತ್ರಿ

ಶಿವರಾಜ ಪಾಟೀಲರನ್ನು

ಮನೆಗೆ ಕಳುಹಿಸಿದ್ದರು

ಬಾಂಬು ವಿಸ್ಫೋಟಿಸಿದಾಗ

ತನ್ನ ಬಟ್ಟೆ ಬದಲಾಯಿಸಿ

ಬಂದಿದ್ದರೆಂದು;

 

ಇಂದಿನ ಗೃಹಮಂತ್ರಿ

ಚಿದಂಬರಂ ಬಲುಜಾಣ

ಆತ ಸದಾ ತೊಡುವುದು

ಬರೀ ಬಿಳಿಯ ಉಡುಗೆ

ಬದಲಾಯಿಸಿದರೆ ಯಾರಿಗೂ

ಗೊತ್ತಾಗದೇ ಇರಲೆಂದು!

******

 

ಆತ್ರಾಡಿ ಸುರೇಶ ಹೆಗ್ಡೆ

Rating
No votes yet

Comments