ಶಿವರಾತ್ರಿಗೊಂದು ಶಿವಸ್ತುತಿ

ಶಿವರಾತ್ರಿಗೊಂದು ಶಿವಸ್ತುತಿ

ಹೋಗದಿರು ಇಲ್ಲಿಂದ ಕಾಲ್ದೆಗೆಯದೇ ಓ ಶಿವನೆ ನನ್ನಲ್ಲೆ ನೀ ನೆಲೆಸಿರು
ಹಿರಿಬೇಟೆಗಾರನೇ!  ಮನಸೆನ್ನುವೀ  ಕಗ್ಗಾಡಿನಲಿ ನಿನಗುಂಟು ಬಲು ಸುಗ್ಗಿಯು
ಮೋಹ ಮಚ್ಚರ ಸೊಕ್ಕು ಮೊದಲಾದ ಮಿಕಗಳು ಬಲು ತಿರುಗಾಡುತಿರಲು
ಅವುಗಳನು ಕೊಂದು ಬೇಟೆಯಾನಂದವನು ಹೊಂದುವುದೇ ನಿನಗೆ ಸರಿಯು

ಸಂಸ್ಕೃತ ಮೂಲ (ಶಿವಾನಂದ ಲಹರಿಯಿಂದ):

ಮಾಗಚ್ಛ ತ್ವಮಿತಸ್ತತೋ ಗಿರಿಶ ಭೋ ಮಯ್ಯೇ ವಾಸಂ ಕುರು
ಸ್ವಾಮಿನ್ನಾದಿಕಿರಾತ ಮಾಮಕಮನಃಕಾಂತಾರಸೀಮಾಂತರೇ |
ವರ್ತಂತೇ ಬಹುಶೋ ಮೃಗಾ ಮದಜುಷೋ ಮಾತ್ಸರ್ಯ ಮೋಹಾದಯಃ
ತಾನ್ ಹತ್ವಾ ಮೃಗಯಾವಿನೋದರುಚಿತಾಲಾಭಂ ಚ ಸಂಪ್ರಾಪ್ಸ್ಯಸಿ ||

-ಹಂಸಾನಂದಿ

ಕೊ: ಶಿವನು ಅರ್ಜುನನೊಂದಿಗೆ ಬೇಟೆಗಾರನಾಗಿ ನಡೆಸಿದ ’ಕಿರಾತಾರ್ಜುನೀಯ’ ಕಾಳಗವನ್ನು ನೆನೆಯಿರಿ

ಕೊ.ಕೊ: ಶಿವರಾತ್ರಿಯನ್ನು ನೆನಪಿಸಿದ ಸಂಪದಿಗ ಅನಂತೇಶರಿಗೆ ಧನ್ಯವಾದಗಳು.

 

 

 

 

Rating
No votes yet

Comments