ಶೀಮ ಶಾಲೆಗೆ ಹೋದ ... ಇನ್ನಷ್ಟು ...
ಶೀಮ ಶಾಲೆ ಹೋದ ... ಇನ್ನಷ್ಟು ...
೧] ಅಕ್ಕೋರು: ಶೀಮಾ, ನಿನ್ನ ಕಾಲು ಚೀಲದ ಜೋಡಿ ವಿಚಿತ್ರವಾಗಿದೆ (ಶೀಮ ಒಂದು ಕಾಲಿಗೆ ನೀಲಿ ಬಣ್ಣದ ಕಾಲು ಚೀಲ, ಇನ್ನೊಂದು ಕಾಲಿಗೆ ಕೆಂಪು ಬಣ್ಣದ ಕಾಲುಚೀಲ ಹಾಕಿ ಕೊಂಡಿದ್ದ).
ಶೀಮ: ಹ್ಞೂ ... ಅಕ್ಕೋರೇ, ಮನೇಲಿ ಕೂಡ ಇನ್ನೊಂದು ಇದೇ ಥರದ ಜೋಡಿ ಇದೆ.
೨] ಅಕ್ಕೋರು: ಶೀಮಾ, ನೀನು ಇವತ್ತು ಬರ್ಕೊಂಡು ಬಂದಿರೋ 'ನಮ್ಮ ಮನೆ ನಾಯಿ' ನಿಬಂಧ, ಎರಡು ವರ್ಷದ ಹಿಂದೆ ನಿನ್ನಣ್ಣ ಬರೆದುಕೊಂಡು ಬಂದಿದ್ದ ನಿಬಂಧದ ನಕಲು ಇದ್ದ ಹಾಗೆ ಇದೆ.
ಶೀಮ: ನಕಲಲ್ಲ, ಅಕ್ಕೋರೇ. ನಮ್ಮನೇಲಿ ಇನ್ನೂ ಅದೇ ನಾಯಿ ಇರೋದಲ್ವಾ? ಅದಿಕ್ಕೆ ಹಾಗೆ.
೩] ಅಕ್ಕೋರು: ನಮ್ಮ ಕೈಗಳನ್ನು ಸಾಬೂನು ಉಪಯೋಗಿಸಿ ತೊಳೆಯುವುದರಿಂದ ಭೇದಿ ಮುಂತಾದ ರೋಗಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತಡೆಗಟ್ಟಬಹುದು. ಈಗ ಹೇಳಿ, ಸೊಳ್ಳೆ ಕಡಿಯೋದ್ರಿಂದ ಹರಡೋ ರೋಗಗಳನ್ನು ಹೇಗೆ ನಿಯಂತ್ರಿಸಬಹುದು?
ಶೀಮ: ಜನರಿಗೆ ಸೊಳ್ಳೆಗಳನ್ನು ಕಡೀಬೇಡಿ ಅಂತ ತಿಳುವಳಿಕೆ ನೀಡಬೇಕು.
೪] ಅಕ್ಕೋರು: ಮಮ್ಮಿಗಳು ಈಜಿಪ್ಟಿನಲ್ಲಿ ಇರುತ್ತವೆ. ನಾಳೆ ನಿಮಗೆ ಅದರ ಬಗ್ಗೆ ಪಾಠ ಮಾಡುವೆ.
ಮನೆಗೆ ಬಂದ ಶೀಮ: ಅಪ್ಪಾ, ನೀನ್ಯಾವತ್ತು ಈಜಿಪ್ಟಿಗೆ ಹೋಗಿದ್ದೆ?
ಅಪ್ಪ: ಯಾವತ್ತೂ ಇಲ್ಲವಲ್ಲ ...
ಶೀಮ: ಹಾಗಾದ್ರೆ ನೀನು ಅಮ್ಮನ್ನ ಎಲ್ಲಿಂದ ತಂದೆ?
೫] ಅಕ್ಕೋರು: ಶೀಮಾ, ನೀನ್ಯಾಕೆ ಯಾವತ್ತೂ ಮೈಯೆಲ್ಲಾ ಮಣ್ಣು ಮಾಡ್ಕೊತೀಯಾ? ನನ್ನನ್ನು ನೋಡು, ನಾನು ಹಾಗೆ ಮಾಡ್ಕೊತೀನಾ?
ಶೀಮ: ನಿಮಗಿಂತ ನಾನು ನೆಲಕ್ಕೆ ಹತ್ತಿರ ಇರ್ತೀನಲ್ವಾ, ಅದಕ್ಕೆ ಹಾಗಾಗುತ್ತೆ.
೬] ಶೀಮನ ಶಾಲೆಯ ತುಸು ದೂರ ಹೊಸ ಫಲಕವೊಂದನ್ನು ಹಾಕಿದರು. ಅವತ್ತು ಶೀಮ ಶಾಲೆಗೆ ತಡವಾಗಿ ಬಂದ.
ಅಕ್ಕೋರು: ಶೀಮಾ, ಏಕೆ ತಡ?
ಶೀಮ: ಫಲಕದಿಂದಾಗಿ.
ಅಕ್ಕೋರು: ಅಂದ್ರೆ?
ಶೀಮ: 'ಮುಂದೆ ಶಾಲೆ ಇದೆ, ನಿಧಾನಕ್ಕೆ ಚಲಿಸಿ' ಅಂತ ದೊಡ್ಡದಾಗಿ ಬರೆದಿದ್ದಾರೆ.
೭] ಅಕ್ಕೋರು: ಶೀಮಾ, ಮನೆಯಲ್ಲಿ ನೀನು ಊಟದ ಮೊದಲು ಪ್ರಾರ್ಥನೆ ಮಾಡ್ತೀಯೋ ಇಲ್ವೋ?
ಶೀಮ: ಮಾಡಲ್ಲ; ನೀವ್ಯಾಕೆ ಕೇಳ್ತೀದಿರೋ ಗೊತ್ತಾಗ್ತಿಲ್ಲ. ನಮ್ಮಮ್ಮ ಅಡಿಗೇನ ಚೆನ್ನಾಗೇ ಮಾಡ್ತಾರೆ.
೮] ಅಕ್ಕೋರು: ಇಂಗ್ಲೀಷಿನಲ್ಲಿ ಆಯ್ (I) ಉಪಯೋಗಿಸಿ ಒಂದು ವಾಕ್ಯ ಮಾಡು.
ಶೀಮ: ಆಯ್ ಇಸ್ (I is) ...
ಅಕ್ಕೋರು (ಶೀಮನನ್ನು ಅಷ್ಟಕ್ಕೇ ತಡೆದು): ಮೂರ್ಖ ಶಿಖಾಮಣಿ, ಆಯ್ ಆಮ್ ... (I am ...) ಎಂದು ಹೇಳಬೇಕು.
ಶೀಮ: ಸರಿ ಅಕ್ಕೋರೇ, ಆಯ್ ಆಮ್ ದ ನೈಂತ್ ಲೆಟರ್ ಆಫ್ ಇಂಗ್ಲೀಷ್ ಆಲ್ಫಾಬೆಟ್ (I am the ninth letter of English alphabet)
...
ಮುಂದಿನದು ಸುಮ್ನೆ ತಮಾಷೆಗೆ ...
ಸರಿ, ಸರಿ ... ಮೊದಲಿನದು ಎಲ್ಲಾನೂ ತಮಾಷೆಗೆನೇ :-)
೯] ಅಕ್ಕೋರು: ಶೀಮ, ನೀನು ತುಂಬಾ ಮಾತಾಡ್ತೀಯ.
ಶೀಮ: ಅದು ನಮ್ಮ ಪರಿವಾರದಲ್ಲೇ ಇದೆ.
ಅಕ್ಕೋರು: ಅಂದ್ರೆ?
ಶೀಮ: ನಮ್ಮಜ್ಜ ಮಾಸ್ಟ್ರಾಗಿದ್ರು, ನಮ್ಮಪ್ಪ ವಕೀಲ.
ಅಕ್ಕೋರು: ನಿಮ್ಮಮ್ಮ?
ಶೀಮ: ಅವಳು ಹೆಂಗಸು.
...
ಪ್ರತೀ ನಗೆಹನಿಗೂ ಒಂದರಿಂದ ಹತ್ರವರೆಗಿನ ಯವುದಾದರೂ ಒಂದು ಅಂಕ ನೀಡಿದರೆ ಚೆನ್ನಾಗಿರುತ್ತೇನೋ? (ಯಾವ ನಗೆಹನಿ ಹೆಚ್ಚು ಜನರಿಗೆ ಇಷ್ಟ ಅಂತ ತಿಳಿಯುತ್ತೆ) ಸರಿ. ಸೊನ್ನೆ ಕೂಡ ಕೊಡಬಹುದು, ಉಣಾ [ಮೈನಸ್] ಬೇಡ ದಯವಿಟ್ಟು :-)
Rating
Comments
ಉ: ಶೀಮ ಶಾಲೆಗೆ ಹೋದ ... ಇನ್ನಷ್ಟು ...