ಶ್ರೀಮಂತ ಮನಸ್ಸುಳ್ಳವರು!!

ಶ್ರೀಮಂತ ಮನಸ್ಸುಳ್ಳವರು!!

ಒಂದು ದಿನ ನಾನು ವಿಮಾನ ನಿಲ್ದಾಣಕ್ಕೆ ಹೋಗಲು taxiಯಲ್ಲಿ ಕುಳಿತುಕೊಂಡೆ. ೧೦ ನಿಮಿಷದ ನಂತರ ನಾವು ಬಲ ಲೇನ್ನಲ್ಲಿ ಹೊಗುತ್ತಿದ್ದೆವು, ಒಂದು ಕಪ್ಪು ಬಣ್ಣದ ಕಾರು ಹಟಾತ್ತಾಗಿ parking lot ಇಂದ ನಮ್ಮ ಮುಂದಕ್ಕೆ ಬಂದಿತು, ನಾನಿದ್ದ Taxi ಚಾಲಕ brakeಅನ್ನು ಗಟ್ಟಿಯಾಗಿ ತುಳಿದ. ಗಾಡಿ ಸ್ವಲ್ಪ ಮಿಸುಕಾಡಿ, ಪಕ್ಕದ ಕಾರ್‍ನಿಂದ ೨ ಇಂಚು ದೂರದಲ್ಲಿ ನಿಂತಿತು. ಎದುರು ಕಾರ್ ನಲ್ಲಿದ್ದವ ನಮ್ಮತ್ತ ತಿರುಗಿ ಸುಪ್ರಭಾತ ಶುರುಮಾಡಿದ್ದ. ನಮ್ಮ taxi ಚಾಲಕ ಮಾತ್ರ ಸ್ನೇಹಭಾವನೆ ಇಂದ ತನ್ನ ಕೈ ಎತ್ತಿಳಿಸಿದ. ಗಾಡಿಯ ಒಳಗಿದ್ದ ನಾನು ನನ್ನ ಸ್ನೇಹಿತರು ಆಶ್ಚರ್ಯದಿಂದ ಕೂತಿದ್ದೆವು. ತಪ್ಪು ಮಾಡಿದ ಕಾರ್‍ನವನಿಗೆ ನಮ್ಮ ಚಾಲಕ ಏನೂ ಅನ್ನಲಿಲ್ಲ. (He was friendly.)

ನನ್ನ ಸ್ನೇಹಿತನೊಬ್ಬ taxi ಚಾಲಕನನ್ನು ಕೇಳಿದ " ನೀನು ಏತಕ್ಕೆ ಆ ರೀತಿ ಮಾಡಿದೆ? ಅದರಲ್ಲಿ ನಿನ್ನ ತಪ್ಪೇನು ಇರಲಿಲ್ಲ ಆದರು ನೀನು ಅವನಿಗೆ ಏನೂ ಹೇಳಲಿಲ್ಲವೇಕೆ" ಎಂದಾಗ ಚಾಲಕ ನಮಗೆ ಒಂದು ಸಣ್ಣ ನೀತಿ ಹೇಳಿದ.

ಈ ಊರಿನ್ನಲ್ಲಿ ಸಾಕಷ್ಟು ಕಸದ ಗಾಡಿಗಳು ಇವೆ. ಅವು ಎಲ್ಲೆಂದರಲ್ಲಿ ಚಲಿಸುತ್ತಿರುತ್ತವೆ. ಅದರ ತುಂಬ ಕೋಪ, ಹತಾಶೆ ಮತ್ತು ಆಶಾಭಂಗದಿಂದಲೆ ತುಂಬಿರುತ್ತದೆ. ಯಾವಾಗ ಅದು ತುಂಬಿ ತುಳುಕುತ್ತದೋ, ಅವರು ಯಾರಮೇಲಾದರು ಅದನ್ನು ಚೆಲ್ಲಿ ಹೋಗುತ್ತಾರೆ, ಈಗ ನಡೆದ್ದದ್ದು ಅದೆ ಎಂದ. ಹಾಗೇ ಆದಾಗ "ಅದನ್ನು ಮನಸ್ಸಿಗೆ ತೆಗೆದುಕೊಳ್ಳದೆ, ಸುಮ್ಮನೆ ನಕ್ಕು ಅವ್ರಿಗೆ ಒಳ್ಳೆದಾಗಲಿ ಎಂದು ಕೇಳಿಕೊಂಡು ನಮ್ಮ ಪಾಡಿಗೆ ನಾವು ಹೋಗಬೆಕು ಎಂದ, ಯಾವಾಗಲೂ ಅವರ ಕಸವನ್ನು ( ಕೋಪ, ಹತಾಶೆ ) ಮನೆಗೆ ಅಥವ ಕೆಲಸಮಾಡುವ ಜಾಗಕ್ಕೆ ತೆಗೆದುಕೊಂಡು ಹೋಗಿ ಅಲ್ಲಿರುವವರಿಗೆ ಹರಡಬಾರದು ಎಂದ.

ಕಥೆಯ ನೀತಿ: ಜೀವನದಲ್ಲಿ ಯಶಸ್ವಿಯಾದ ಜನಗಳು ಈ ರೀತಿ ಕಸದ ಗಾಡಿಗಳಿಂದ ತಮ್ಮ ದಿನ ಹಾಳಾಗಲು ಬಿಡುವುದಿಲ್ಲ. ಜೀವನ ತುಂಬ ಕ್ಷಣಿಕ. ಬೆಳಗ್ಗೆ ಎದ್ದು ನೆನ್ನೆ ಹಾಗೆ ಮಡಬಾರದಾಗಿತ್ತು ಎಂದು ಕೊರಗುವ ಬದಲು " ಯಾರು ನಿಮ್ಮನು ಸ್ನೇಹಭಾವದಿಂದ ನೊಡುತ್ತಾರೋ ಅವರನ್ನು ಪ್ರೀತಿಸಿ, ಉಳಿದವರಿಗೆ ಒಳ್ಳೆಯದಾಗಲೆಂದು ಪ್ರಾರ್ಥಿಸಿ ".

ವಿವೇಕಾನಂದ : "ನನ್ನಲ್ಲೇ ಲೆಕ್ಕವಿಲ್ಲದಷ್ಟು ತಪ್ಪಿದ್ದರೂ ನನ್ನನ್ನು ಪ್ರೀತಿಸುತ್ತಿರುವ ನಾನು, ಬೇರೆಯವರ ಒಂದೆರಡು ತಪ್ಪುಗಳಿಗೆ ಅವರನ್ನು ಹೇಗೆ ದ್ವೇಷಿಸಲಿ".
Vivekannada " If i can forgive myself for my infinate faults, how can i hate someone for the glimpse of few"

ಮೂಲ: ಇ-ಮೇಯ್ಲ್

Rating
No votes yet

Comments