ಶ್ರೀ ಸುಧಾಕರ ಶರ್ಮರೊಡನೆ ಮುಕ್ತ ಸಂವಾದ
ಸಂಪದದ ಮಿತ್ರರೇ, ಸಂಪದಿಗರಾದ ಕವಿನಾಗರಾಜ್,ಹೆಚ್.ಎಸ್.ಪ್ರಭಾಕರ್ ಮತ್ತು ನಾನು ಒಟ್ಟಾಗಿ ಹಾಸನದಲ್ಲಿ ಆರಂಭಿಸಿರುವ" ವೇದ ಭಾರತೀ " ಆಶ್ರಯದಲ್ಲಿ ಒಂದು ಉತ್ತಮವಾದ ವೈಚಾರಿಕ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ಸ್ಥಳ: ಶ್ರೀ ರಾಮಕೃಷ್ಣ ವಿದ್ಯಾಲಯ, ರವೀಂದ್ರನಗರ, ಹಾಸನ ದಿನಾಂಕ: 30.09.2012 ಭಾನುವಾರ ಬೆಳಿಗ್ಗೆ 9.00 ರಿಂದ ಸಂಜೆ 5.00 ನಮ್ಮ ಆಚರಣೆಗಳು, ನಮ್ಮ ಸಂಪ್ರದಾಯಗಳು, ಹಬ್ಬ ಹರಿದಿನಗಳು, ನಾವು ನಡೆಸುತ್ತಿರುವ ವಿವಾಹ-ಉಪನಯನಗಳು ವೇದೋಕ್ತ ವಾಗಿವೆಯೇ? ಈ ಬಗ್ಗೆ ವೇದಾಧ್ಯಾಯೀ ಶ್ರೀ ಸುಧಾಕರ ಶರ್ಮರೊಡನೆ ಸಂವಾದ ಮಾಡೋಣ. ಬನ್ನಿ. ಹಾಸನದಲ್ಲಿ ನಿಮಗೆ ಅಗತ್ಯ ವ್ಯವಸ್ಥೆ ನಮ್ಮ ಪಾಲಿಗಿರಲಿ. ಬನ್ನಿ, ಒಟ್ಟಾಗಿ ಕುಳಿತು ಚರ್ಚಿಸೋಣ.
ಸಂಪರ್ಕಿಸಲು ಕವಿನಾಗರಾಜ್: 9448501804 ,ಹರಿಹರಪುರಶ್ರೀಧರ್ 9663572406
ದಿನಾಂಕ 30-09-2012ರಂದು ಹಾಸನದಲ್ಲಿ ಒಂದು ಒಳ್ಳೆಯ ವಿಚಾರ ಪ್ರಚೋದಕ ಕಾರ್ಯಕ್ರಮವಿದೆ. ಆಹ್ವಾನ ಪತ್ರಿಕೆ ಇದೋ ಇಲ್ಲಿದೆ. ಬಿಡುವು ಮಾಡಿಕೊಂಡು ಭಾಗವಹಿಸಿ. ಬರುವ ಕುರಿತು ಪೂರ್ವಭಾವಿಯಾಗಿ ತಿಳಿಸಬಹುದೇ?