ಸಂಕ್ರಾಂತಿ

ಸಂಕ್ರಾಂತಿ

ಸಂಕ್ರಾಂತಿ ಸಂಕ್ರಾಂತಿ

ಸಂಕ್ರಾಂತಿ ಸಂಕ್ರಾಂತಿ
ಕೊಡುವೆಯೊ ನಾಡಿಗೆ ಶಾಂತಿ
  ಬಿಡುಗಡೆಯಾಗಲಿ ಬ್ರಾಂತಿ 

ಸೊಕ್ಕಿನ ಮಾಯಾ ಪಾಶವ ಹರಿದು
ಅಕ್ಕರೆ ಸಕ್ಕರೆಯಂತಿರು ನೀ
ನಕ್ಕರೆ ಬಾಳಿನ ಶುಭ ಪರ್ವೋದಯ
ಸಂಕ್ರಾಂತಿಯೊಳೆಲ್ಲರಿಗಿರಲಿ

ಬೆಳಕದು ತೋರಲಿ ಕತ್ತಲೆ ಕಳೆದು
ಹೊಳೆಯಲಿ ನವ ಮುಂಗನಸು
ಕೊಳೆಜಾರಲಿ ಜನ ಮನ ಸಂಪದದೊಳು
ಬಲವಾಗಲಿ ಎಲ್ಲರ ಕನಸು

 

 

 

 

ಎಲ್ಲರಿಗು ಸಂಕ್ರಾಂತಿಯ ಶುಭಾಷಯಗಳು
                                                                           -   ಸದಾನಂದ

Rating
No votes yet