ಸಂಪದಕ್ಕೆ ಆರು ವರುಷ!
ಸಂಪದಕ್ಕೆ ಆರು ವರುಷ..2005 ರಲ್ಲೇ ಇಂತಹ ಒಂದು ಸಾಧ್ಯತೆಯ ಕನಸು ಕಂಡ ಹರಿಪ್ರಸಾದ ಮತ್ತು ತಂಡ ಅಭಿನಂದನೀಯರು. ಸಂಪದದ ಖಜಾನೆಯಿಂದ ಹಳೆಯ ಯಾವುದೇ ಲೇಖನ ತೆಗೆದರೂ ಸಾವಿರಕ್ಕೂ ಮಿಗಿಲು ಹಿಟ್ ಗಳು!. ಮೊನ್ನೆ ಒಂದು ಬ್ಲಾಗ್ ಬರಹ ನೋಡಿದೆ..'ನನ್ನ ಮಗುವಿಗೊಂದು ಹೆಸರು ಕೊಡಿ' ..ದಾಖಲಾದ ಹಿಟ್ ಗಳು 20726!
2005 ರಿಂದ 2009ರ ಅವಧಿಯ ವರೆಗಿನ ಲೇಖನ, ಲೇಖನಗಳಿಗಿಂತಲೂ ಮಿಗಿಲಾದ ಪ್ರತಿಕ್ರಿಯೆಗಳನ್ನು ಓದುವುದೇ ಖುಷಿ ಕೊಡುವಂತದ್ದು. Archive ಸಂಪದದ ಓದು ಹಳೆ ಚಂದಮಾಮ ಓದಿನಂತೆ.
ಸಂಪದದಲ್ಲಿ ನಿಯಮಿತವಾಗಿ ಬರೆಯುವವರು, ಪ್ರತಿಕ್ರಿಯೆ ಕೊಡುವವರು ಇದ್ದಾರೆ. ಅತ್ಯಪರೂಪಕ್ಕೆ ಬರೆದು, ಅಪರೂಪಕ್ಕೆ ಪ್ರತಿಕ್ರಿಯೆ ಕೊಡುವಂತಹ ಆದರೆ ನಿತ್ಯವೂ ಇಣುಕಿ ಹಾಕುವ ಪ್ರಕ್ರಿಯೆ ಕಾದುಕೊಂಡುವಿರುವ ನನ್ನಂತಹವರು ಇದ್ದಾರೆ. ಮೊದಲಿನ ಎರಡು ವರ್ಗದವರಿಗೆ ನನ್ನ ನಮನ..ಸಂಪದದಲ್ಲಿನ ಕಿಡಿ ಆರದ ಹಾಗೆ ನೋಡಿಕೊಂಡು, ಚಟುವಟಿಕೆ ಜೀವಂತವಾಗಿಟ್ಟದ್ದಕ್ಕೆ.
ಇನ್ನು ಸಂಪದದ ಆರನೆಯ ವರುಷದ ಸುಸಂದರ್ಭದಲ್ಲಿ ಹೊಸ ಲೋಗೊ ಇದ್ದರೆ ಹೇಗೆ ಎಂದು ಸಂಪದ ತಂಡದವರು ಯೋಚನೆ ಮಾಡಿದ್ದಾರೆ. ಹೊಸತೊಂದು ಲೋಗೊವನ್ನು ವಿನ್ಯಾಸಗೊಳಿಸಿ, ಸಂಪದಿಗರ ಅಭಿಪ್ರಾಯ ಕೇಳಿದ್ದಾರೆ. ನಾನಿಲ್ಲಿ ನನ್ನ ಅಭಿಪ್ರಾಯವನ್ನು ಹರಿಯಬಿಟ್ಟಿದ್ದೇನೆ..ವಿನ್ಯಾಸಗಳ ರೂಪದಲ್ಲಿ.
ಮತ್ತೊಮ್ಮೆ ಸಂಪದ ತಂಡಕ್ಕೆ ಅಭಿನಂದನೆಗಳು ನವಯುಗದ ಕನ್ನಡ ಸೇವೆಗೆ :)
Comments
ಉ: ಸಂಪದಕ್ಕೆ ಆರು ವರುಷ!
In reply to ಉ: ಸಂಪದಕ್ಕೆ ಆರು ವರುಷ! by ಸುಮ ನಾಡಿಗ್
ಉ: ಸಂಪದಕ್ಕೆ ಆರು ವರುಷ!
ಉ: ಸಂಪದಕ್ಕೆ ಆರು ವರುಷ!
In reply to ಉ: ಸಂಪದಕ್ಕೆ ಆರು ವರುಷ! by ಭಾಗ್ವತ
ಉ: ಸಂಪದಕ್ಕೆ ಆರು ವರುಷ!