ಸತ್ಯ-ಮಿಥ್ಯದ ಮಾಯೆ -1

ಸತ್ಯ-ಮಿಥ್ಯದ ಮಾಯೆ -1


ಪ್ರಥಮದಲಿ ಗಣಪತಿಗೆ ವಂದಿಸುತ ನರಹರಿಯ

ಪ್ರೇರಣೆಯಂತೆ ಬರೆದಿಹೆನು ಈ ಸಾಲುಗಳನು

ಕನಸಲ್ಲಿ ನಡೆದುದದು

ಮನಸಿನ ಬ್ರಾಂತಿ

ಎಚ್ಚರದಲಿ ಕಂಡಿಹುದು

ದೇವನ ಮಾಯೆಯ ಸೃಷ್ಟಿ

 

ಕನಸಲ್ಲಿ ಕಂಡುದದು

ಎಚ್ಚರದಿ ಮಿಥ್ಯ

ಎಚ್ಚರದಿ ಕಾಣಿಪುದು

ದೇವನಮಾಯೆಯೆಂಬುದು ಸತ್ಯ

ಇದನರಿಯಲು ಶ್ರೀನರಸಿಂಹನ

ನೆನಯಬೇಕು ನಿತ್ಯ
Rating
No votes yet

Comments