ಸದ್ಯ , ಕೃಷ್ಣ ಪರಮಾತ್ಮ ದುರ್ಯೋಧನನ ಮನೆಯ ಚಹಾ ಕುಡಿದಿರಲಿಲ್ಲ !
ಲೇಖಕರ ಮನೆಗೆ ಒಬ್ಬ ಹಳ್ಳಿಯವನು ಬಂದಿರ್ತಾನೆ. ಆಗ ಟೀವಿಯಲ್ಲಿ ಮಹಾಭಾರತದ ಧಾರಾವಾಹಿ ನಡೆದಿರುತ್ತದೆ.
ದ್ರೌಪದೀ ವಸ್ತ್ರಾಪಹರಣದ ಪ್ರಸಂಗ . ಹಳ್ಳಿಯವನ ಕಣ್ಣಲ್ಲಿ ನೀರು ಬರುತ್ತದೆ.
( ನಾವು ವಿದ್ಯಾವಂತರಾದ್ದರಿಂದ ಸುಮ್ಮನೆ ನೋಡುತ್ತಿದ್ದೆವು - ಅಂತ ಲೇಖಕರು ಹೇಳುತ್ತಾರೆ ! )
’ ಪಾಪ , ಆ ಹೆಣ್ಮಗಳಿಗೆ ಎಷ್ಟು ತ್ರಾಸರೀ? ’ . ಅಂದವನು ’ ಅಲ್ಲರೀ , ಅಲ್ಲೆ ಎಷ್ಟೆಲ್ಲಾ ಹಿರೇರು ಇದ್ರಲ್ರಿ? ಭೀಷ್ಮಾ , ದ್ರೋಣ , ಸುಮ್ಮನ ಹ್ಯಾಂಗ ಇದ್ರರೀ ? ದುರ್ಯೋದನಗ ಬೈದು ಬುದ್ದೀ ಹೇಳಬಾರದೇನ್ರಿ ?’ ಅಂತ ಸರಳ ಬುದ್ಧಿಯಿಂದ ಕೇಳುತ್ತಾನೆ.
’ಅವರು ದುರ್ಯೋಧನನ ಋಣದಾಗ ಇದ್ರಲ್ಲೋ ’ ಅಂತ ಲೇಖಕರು ಹೇಳ್ತಾರೆ ...
’ ಅದೆಂತಾ ರಿಣರೀ ’ ಎಂಬ ಮರುಪ್ರಶ್ನೆಗೆ ಲೇಖಕರು ಅವನಿಗೆ ಉದಾಹರಣೆ ಸಮೇತ ತಿಳಿಸಿ ಹೇಳುತ್ತಾರೆ . ಸರಕಾರೀ ಅಫೀಸಿನಾಗ ಕಾರಕೂನರನ್ನೂ ಅದಕ್ಕS ಮಂದಿ ಚಹಾಕ್ಕ ಕರಿಯೋದು , ತಿಳೀತಾ ’ ಅಂದಾಗ
ಆ ಹಳ್ಳಿಯಾಂವ
’ ಸದ್ಯ , ಸ್ರೀ ಕ್ರಿಶ್ಣ ಪರಮಾತ್ಮ ದುರ್ಯೋಧನನ ಮನಿಗೆ ಹೋಗ್ಲಿಲ್ಲ ’ ಅಂತಾನೆ.
’ಯಾಕೋ ?’
ಅಂದದ್ದಕ್ಕೆ
’ ಅಂವಾ ಏನರ ದುರ್ಯೋಧನ ಕೊಟ್ಟ ಚಹಾ ಕುಡಿದಿದ್ದರ , ದ್ರೌಪದೀ ಗತಿ ಏನಿತ್ತರೀ?’ ಅಂತ ಕೇಳ್ತಾನೆ.
..
..
..
..
..
ಈ ಓದು ನಿಮಗೆ ಸುಖಕರ ಎನಿಸಿದ್ದರೆ ... ಇನ್ನಷ್ಟು ಇಂತಹ ಬಹಳ ಬಹಳ ಓದಿಗಾಗಿ - ಶ್ರೀನಿವಾಸ ವೈದ್ಯರ ಪುಸ್ತಕಗಳನ್ನು ಹುಡುಕಿ ಕೊಂಡು ಓದಿ...
Comments
ಎಲಾ ಇವನ!!! ಎನ್ ಮಸ್ತ ಬರದಾರ್ರೀ...
In reply to ಎಲಾ ಇವನ!!! ಎನ್ ಮಸ್ತ ಬರದಾರ್ರೀ... by Khavi
Re: ಎಲ್ಲಿ ಸಿಕ್ತದರಿ ಶ್ರೀನಿವಾಸ ವೈದ್ಯರ ಪುಸ್ತಕ?