ಸನ್, ೨೦೧೨ ರ ಸಾಲಿನ ದತ್ತಿ ಉಪನ್ಯಾಸಕಾರರು ಡಾ. ಎಂ. ಚಿದಾನಂದ ಮೂರ್ತಿಯವರು !

ಸನ್, ೨೦೧೨ ರ ಸಾಲಿನ ದತ್ತಿ ಉಪನ್ಯಾಸಕಾರರು ಡಾ. ಎಂ. ಚಿದಾನಂದ ಮೂರ್ತಿಯವರು !

ಚಿತ್ರ

ಎಲ್ಲರಿಗೂ ತಿಳಿದಂತೆ ಸುಮಾರು ಎರಡೂವರೆ ದಶಕದಿಂದ ಮುಂಬೈನ ಅತಿಹಳೆಯ ಪ್ರತಿಷ್ಠಿತ ಕನ್ನಡ ಸಂಸ್ಥೆ, ಮೈಸೂರ್ ಅಸೋಸಿಯೇಷನ್,  ನ   ಬಂಗಾರದ ಹಬ್ಬದಿಂದ ಆರಂಭಗೊಂಡ ದತ್ತಿ ಉಪನ್ಯಾಸ ಮಾಲಿಕೆಯ ಸಹಭಾಗಿತ್ವವನ್ನು ಮುಂಬೈವಿಶ್ವವಿದ್ಯಾಲಯದ ಕನ್ನಡವಿಭಾಗವೂ ವಹಿಸಿಕೊಳ್ಳುತ್ತಾ  ಬಂದಿದೆ.  ಹೀಗೆ, ಇವೆರಡು ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ನಡೆದುಕೊಂಡು ಬರುತ್ತಿರುವ ದತ್ತಿ ಉಪನ್ಯಾಸ  ಮಾಲಿಕೆಯಲ್ಲಿ ಉಪನ್ಯಾಸ ಕೊಟ್ಟವರಲ್ಲಿ ಶ್ರೇಷ್ಠ ಕವಿಗಳು,  ಸಂಶೋಧಕರು, ಪ್ರಾಧ್ಯಾಪಕರು, ಪುಸ್ತಕ ಸಂಪಾದಕರೂ, ಶತಾವಧಾನಿಗಳು, ವಾಗ್ಮಿಗಳು,  ಮೇಧಾವಿಗಳು  ಸೇರಿದ್ದಾರೆ. '೨೦೧೨ ರ ಸಾಲಿನ ಆಹ್ವಾನಿತ ಭಾಷಣಕಾರ'ರಾಗಿ ನಡೆಸಿಕೊಟ್ಟವರು, ಖ್ಯಾತ ಸಂಶೋಧಕ, ಹಿರಿಯಕವಿ, 'ಡಾ. ಎಂ. ಚಿದಾನಂದ ಮೂರ್ತಿಯವರು.'
ಶನಿವಾರ ೨೮ ರ ಜನವರಿ, ೨೦೧೨ ರ ಸಂಜೆ, ಚಿದಾನಂದ ಮೂರ್ತಿಯವರು  ಬಳಸಿಕೊಂಡ ವಿಷಯ :
'ಹಂಪಿ; ಏಳುಬೀಳಿನ ಕಥೆ'
ಮೊದಲಿಗೆ 'ಶ್ರೀ ದಿನೇಶ್' ರವರ  'ಪ್ರಾರ್ಥನಾ ಗೀತೆ' ಯಿಂದ  ಆರಂಭಗೊಂಡ ಕಾರ್ಯಕ್ರಮವನ್ನು 'ಕುಮಾರಿ ಜ್ಯೋತಿ ದೇವಾಡಿಗ' ನಿರೂಪಿದರು.  ಪ್ರಾಸಂಗಿಕವಾಗಿ 'ನಾರಾಯಣ ನವಿಲೇಕರ್' ಆಹ್ವಾನಿತ ಗಣ್ಯ ಉಪನ್ಯಾಸಕರನ್ನು ಪುಷ್ಪಗುಚ್ಛದಿಂದ ಗೌರವಿಸಿ ಆಹ್ವಾನಿಸಿದರು,  ಹಾಗೂ ಸಭಿಕರೆಲ್ಲಾ ಸ್ವಾಗತಿಸಿದರು.  ನಂತರ,  ಮುಂಬೈ ವಿಶ್ವವಿದ್ಯಾಲಯದ  ಕನ್ನಡ  ವಿಭಾಗದ ಮುಖ್ಯಸ್ಥ, 'ಡಾ. ಜಿ .ಏನ್. ಉಪಾಧ್ಯೆ' ಉಪನ್ಯಾಸದ ಬಗ್ಗೆ, ಮತ್ತು ಡಾ. ಮೂರ್ತಿಯವರ ಬಗ್ಗೆ ಮಾತನಾಡುತ್ತ  ಮುಖ್ಯ  ಅತಿಥಿಯವರನ್ನು ಮತ್ತು  ಆಹ್ವಾನಿತ ಶ್ರೋತೃಗಳನ್ನು ಸ್ವಾಗತಿಸಿದರು.  ಬರೆದುಕೊಂಡು ಬಂದ ಪ್ರಬಂಧವನ್ನು ಸುಮಾರು  ಒಂದುವರೆ ಗಂಟೆಗಳ ಕಾಲ ಓದಿದ ಡಾ ಚಿದಾನಂದ ಮೂರ್ತಿಯವರು,  ತಮ್ಮ ಉಪನ್ಯಾಸವನ್ನು ಅತ್ಯಂತ ಸಮರ್ಥವಾಗಿ ಮಂಡಿಸಿದರು.  ಅವರ ಮಾತುಗಳಲ್ಲಿ ವೈಚಾರಿಕತೆ ಮತ್ತು ಅನುಸಂಧಾನಗಳೇ ಮೇಳೈಸಿದ್ದವು. ಕಾರ್ಯಕ್ರಮದ ಕೊನೆಯಲ್ಲಿ 'ಮಂಜು ದೇವಾಡಿಗ' ವಂದನಾರ್ಪನೆಯನ್ನು ಅರ್ಪಿಸಿದರು.
 
ಶನಿವಾರದ ದಿನ  ಮೂರ್ತಿಯವರು, ಕೊಟ್ಟ ಭಾಷಣ  ಕನ್ನಡ ಭಾಷೆಯ ವ್ಯಾಪ್ತಿಯನ್ನು ಕುರಿತಾಗಿದ್ದದ್ದು. ಗೋದಾವರಿಯಿಂದ ಮುಂದೆ ಹೋಗಿ ನೇಪಾಳ, ಬಂಗಾಳದವರೆಗೆ ಪಸರಿಸಿತ್ತು. ಪಕ್ಕದ ರಾಜ್ಯ ಮಹಾರಾಷ್ಟ್ರದಲ್ಲಿ ಬಳಸುವ ಮರಾಠಿ ಭಾಷೆಯಲ್ಲಿ ಸುಮಾರು ೪೦% ಪ್ರತಿಶತ್ ಶಬ್ದಗಳು ಕನ್ನಡವೆಂಬುದನ್ನು ಉದಾಹರಣೆಗಳ ಮೂಲಕ ಪ್ರತಿಪಾದಿಸಿದರು.  ವಿಕ್ಟರ್ ಡಿಸೊಝ, ಪಿ.ಸಿ.ಸರ್ಕಾರ್, ದೇಸಾಯ್,  ಮುಂತಾದ ಸಂಶೋಧಕರ  ಕನ್ನಡಪರ  ಕಾರ್ಯಗಳನ್ನು ತಮ್ಮ ಭಾಷಣದಲ್ಲಿ ಸಮರ್ಥವಾಗಿ ಉಪಯೋಗಿಸಿಕೊಳ್ಳುತ್ತಾ  ಕೊಟ್ಟ ವಿವರಣೆಗಳು ಅತ್ಯಂತ ಮಹತ್ವದ್ದಾಗಿದ್ದವು. ಹಂಪೆಯ ಅಧಿದೇವತೆ ವಿರೂಪಾಕ್ಷನಾದರು, ಊರಿನ ಹೆಸರು ಬರಲು ಕಾರಣವಾದ ಪಂಪ ಸರೋವರ, ಪಂಪ,  ಮುಂತಾದ ಪದಗಳ ಒಳ ಅರ್ಥಗಳನ್ನೂ ಅತ್ಯಂತ ವಿವರವಾಗಿ ತಿಳಿಸಿದರು. ಹಂಪೆಯ ಉಚ್ಚ್ರಾಯ ಸ್ಥಿತಿಯಿಂದ ಅಚ್ಯುತರಾಯನ ಸಮಯದ 'ಹಂಪೆಯ ಅದಃ ಪತನದ ವರೆಗೆ, ಮತ್ತು ಆಸಮಯದಲ್ಲಿ ಪ್ರಚಲಿತದಲ್ಲಿದ್ದ ಶಿವ, ವೈಷ್ಣವ ಮತಗಳ ಮಧ್ಯೆ ಇದ್ದ ಒಳ-ವೈಷಮ್ಯಗಳ ಒಳನೋಟಗಳನ್ನು ಅರ್ಥವತ್ತಾಗಿ ವಿವರಿಸಿದರು.  ಎಲ್ಲಕ್ಕಿಂತ ಹೆಚ್ಚಾಗಿ ಇಸ್ಲಾಂ ಧರ್ಮದ  ಅಂಧ-ಮತಾನುಯಾಯಿಗಳ  ದೌರ್ಜ್ಯನ್ಯಗಳನ್ನು ಕುರಿತು ತಮ್ಮ ಅನಿಸಿಕೆಗಳನ್ನು ಸಭೆಯ ಗಮನಕ್ಕೆ ತಂದರು. ಶನಿವಾರದಂದು ಹೆಚ್ಚು ಜನರು ಸಭೆಗೆ ಆಗಮಿಸಿದ್ದರು.
ಮಾರನೆಯ ದಿನ ರವಿವಾರ, ಜನವರಿ, ೨೯ ರಂದು, ಮೂರ್ತಿಯವರು ಕೊಟ್ಟ ಉಪನ್ಯಾಸದ ವಿಷಯ :

'ಬೃಹತ್ ಕರ್ನಾಟಕ '

 
'ಬೃಹತ್ ಕರ್ನಾಟಕ'  ವೆಂಬ ವಿಷಯವನ್ನು ಕುರಿತು ಉಪನ್ಯಾಸ ಕೊಟ್ಟರು. 
'ಬ್ರಿಟಿಷರ ಕಾಲದ ಬೆಳಗಾವಿ ಎನ್ನುವ ವಿವರಣಾ ಪತ್ರಿಕೆ' :
 
'ಮುಂಬಾಯಿನ ಗ್ರಾಮದೇವತೆ, ಮುಂಬಾದೇವಿ' ಯಿಂದ ಆರಂಭವಾದ ಮೂರ್ತಿಯವರ  ಮಾತಿನ ಝರಿ, ಕನ್ನಡ ಪದಗಳಾದ ಕಾನಡಿ, ಹಡಪ, 'ನಮ್ಮ ಮೈಲಾರಲಿಂಗನೇ,  ಮರಾಠಿಗರ ಖಂಡೋಬ' ಎನ್ನುವ ಮಾತುಗಳನ್ನೂ ಎಲ್ಲರ ಗಮನಕ್ಕೆ ತಂದರು.  ತಮ್ಮ ಜೀವನದುದ್ದಕ್ಕೂ ನಿರಂತರ ಅಧ್ಯಯನಶೀಲರಾಗಿರುವ  ಮೂರ್ತಿಯವರು, ಇತ್ತೀಚಿನ ದಿನಗಳಲ್ಲೂ ಒಮ್ಮೆ ಹಂಪೆಗೆ ಹೋಗಿ ಬಂದಿದ್ದರಂತೆ !
 
ಡಾ. ಮೂರ್ತಿಯವರೇ ತಮ್ಮ ಜೊತೆಯಲ್ಲಿ  ತಂದ,  'ಬ್ರಿಟಿಷರ ಕಾಲದ ಬೆಳಗಾವಿ ಎನ್ನುವ ವಿವರಣಾ ಪತ್ರಿಕೆ'ಯಲ್ಲಿ ಮಹತ್ವದ ವಿಷಯಗಳು ಅಡಕವಾಗಿವೆ. ಕಾವೇರಿಯಿಂದ ಗೋದಾ ವ ರಿಯವರೆಗೆ ಕನ್ನದ ನಾಡು ಹಬ್ಬಿತ್ತು ಎನ್ನುವ 'ಕವಿರಾಜಮಾರ್ಗ ಕಾರ'ನ ಸಮರ್ಥನಾ ವಾಕ್ಯಗಳು, ಮತ್ತು ಸೇನ್ ಎಂಬ ಬುಡಕಟ್ಟಿನ ಜನ ಬಂಗಾಳದಲ್ಲಿ ಹೋಗಿ ನೆಲೆಸಿದ್ದು ಇತ್ಯಾದಿಗಳನ್ನು, ಈಗಿನ ನಾಸಿಕ್ ನಗರದ ಗೋದಾವರಿ ನದಿ ತೀರದ 'ಹಟ್ಕಾರ್ ಕಾನಡಿ' ಎಂಬ ಅಲೆಮಾರಿ ಕನ್ನಡ ಜನಾಂಗದವರು ಬಳಸುವ ಕನ್ನಡದ ಪದಗಳನ್ನು ಗಮನಕ್ಕೆ ತಂದರು.
 
ಮಿಸ್ಟರ್. ಜೆ.ಎಫ್. ಪ್ಲೀಟ್, ಸರ್ ವಿಲಿಯಂ ವಿಲ್ಸನ್ ಹಂಟರ್,  ಜನರಲ್ ಮುನ್ರೋ, ಮುಂತಾದವರು ಬರೆದ ಪುಸ್ತಕಗಳ ದಾಖಲಾತಿಯ ಬಗ್ಗೆ ಬೆಳಕುಚೆಲ್ಲಿದರು.  ಸನ್. ೧೮೧೮ ರಲ್ಲಿ ಅಂದಿನ ಬೊಂಬಾಯಿನ ಗವರ್ನರ್.  'ಎಲ್ಫಿನ್ ಸ್ಟನ್ ಸಾಹೇಬ'ರಿಗೆ ಒಪ್ಪಿಸಿದ ಕನ್ನಡ ಮಾನಪತ್ರವನ್ನು ಹಾಗೆಯೇ ಕನ್ನಡ ಭಾಷೆಯಲ್ಲಿ  ಓದಲಾಗಿತ್ತಂತೆ. ಮಿ. ಪ್ಲೀಟ್  ರವರು ಅದನ್ನು ಇಂಗ್ಲೀಷ್ ಭಾಷೆಗೆ ಅನುವಾದಿಸಿದರು. ಸನ್, ೧೮೭೧ ರಲ್ಲಿ ಪ್ರಕಟಿತವಾದ ಗೆಝೆಟ್ ಕನ್ನಡ ಭಾಷೆಯಲ್ಲಿದೆ. 'ಗುಜರಾತಿನ ಸೋಳಂಕಿ' ಯವರು ಬಾದಾಮಿಯ ಚಾಲುಕ್ಯರ ವಂಶದ ಕನ್ನಡನಾಡಿನಿಂದ ವಲಸೆ ಹೋದವರು.
 
ಕನ್ನಡನಾಡಿನ ಅತ್ಯಂತ ಕನ್ನಡ ಭಾಷಾಪ್ರೇಮಿಗಳಲ್ಲೊಬ್ಬರಾದ ಡಾ. ಚಿದಾನಂದ ಮೂರ್ತಿಯವರು, ದಿನನಿತ್ಯದ  ಆಗುಹೊಗುಗಳನ್ನು ತಮ್ಮ ಬೆರಗುಕಣ್ಣುಗಳಿಂದ  ಒಂದು ಸಂಶೋಧನೆಯ ಅಂಗವೆನ್ನುವಂತೆ ಕಾಣುತ್ತಾರೆ.  ಹಂಪೆಯ ಬಗ್ಗೆ ಅವರಿಗೆ ಎಲ್ಲಿಲ್ಲದ ಆದರ !  ಪ್ರತಿಯೊಬ್ಬ ಕನ್ನಡಿಗನೂ ಅಲ್ಲಿಗೆ  ತಪ್ಪದೆ ಹೋಗಬೇಕು. ಹೋಗಿನೋಡಿದವರು ಮತ್ತೊಮ್ಮೆ ಹೋಗಬೇಕೆನ್ನುವುದು  ಅವರ  ಕಳಕಳಿಯ ನಿವೇದನೆ !
 
ಇಂತಹ ಕಾರ್ಯಕ್ರಮಗಳಿಗೆ ಬರುವ  ಸಭಿಕರಲ್ಲಿ ಮುಂಬೈನ ಹೆಸರಾಂತ ವಿಶ್ರಾಂತ  ಪ್ರಾಧ್ಯಾಪಕಿ  'ಡಾ. ಸುನಿತ ಶೆಟ್ಟಿ'ಯವರು ಪ್ರಮುಖರು.  ಅವರು ಕೇಳಿದ ಪ್ರಶ್ನೆಗಳಿಗೆ ಮೂರ್ತಿಯವರು  ಸಮರ್ಪಕವಾಗಿ ಉತ್ತರಿಸಿದರು. 'ನೇಪಾಳದ ಪಶುಪತಿನಾಥ ದೇವಾಲಯದ ಅರ್ಚಕ'ರು, ದಕ್ಷಿಣಣ ಭಾರತದಿಂದ ಬಂದವರು. ಪ್ರಮುಖವಾಗಿ 'ಶೃಂಗೇರಿ ಶ್ರೀ ಕ್ಷೇತ್ರದವರು'.  ನೇಪಾಳದಲ್ಲಿ ನೆಲೆಸಿರುವ ಕನ್ನಡದ ಜಂಗಮ ಪರಿವಾರಗಳು, ಮತ್ತು ಇನ್ನಿತರ ಕನ್ನಡಿಗರ ಬಗ್ಗೆ ಸವಿಸ್ತಾರವಾಗಿ ಮಾತಾಡಿದರು.
 
'ಮೈಸೂರು ಅಸೋಸಿಯೇಷನ್ ನ,   ನೇಸರು ಪತ್ರಿಕೆಯ ಗೌರವ ಸಂಪಾದಕಿ, ' ಡಾ. ಗಿರಿಜಾ ಶಾಸ್ತ್ರಿಯವರು ಡಾ.  ಚಿದಾನಂದ ಮೂರ್ತಿಯವರ  ಗೌರವಾರ್ಥವಾಗಿ ಹೊರಡಿಸಿದ  'ವಿಶೇಷ ಸಂಚಿಕೆಯ ಪ್ರತಿ'ಯೊಂದನ್ನು ಅವರಿಗೆ  ಸಮರ್ಪಿಸಿದರು.  ಜೀವನದ ಹಾದಿಯಲ್ಲಿ ಬಹಳ ಮುಂದೆ ಸಾಗಿರುವ  ಚಿದಾನಂದ ಮೂರ್ತಿಯವರ  ಅಂತಃಸತ್ವ ಅಧ್ಬುತವಾಗಿದೆ.
 
"ನಿರಂತರ ಅಧ್ಯಯನ, ಹೊಸತಿಳುವಳಿಕೆ ಅರಿವಾದಾಗ ಹಳೆಯ ತಪ್ಪು ಮಾಹಿತಿಗಳನ್ನು ಸರಿಪಡಿಸಿಕೊಳ್ಳುತ್ತಾ ಮತ್ತೆ ಅಧ್ಯಯನಶೀಲತೆಗೆ ತಾವೂ ತಮ್ಮನ್ನು ಒಪ್ಪಿಸಿಕೊಂಡು, ಹೊಸ ಮನಸ್ಸುಗಳಿಗೆ  ಅವಕಾಶಗಳನ್ನು  ಎಡೆಮಾಡಿಕೊಡುವ ಅವರ ವಿಚಾರಗಳು ಅನುಕರಣೀಯವಾಗಿವೆ."

ಕೊನೆಯ ದಿನದ ಸಭಿಕರ ಸಂಖ್ಯೆ ಕಡಿಮೆಯಾಗಿತ್ತು.  ಪಕ್ಕದ 'ಕರ್ನಾಟಕ ಸಂಘ'ದಲ್ಲಿ 'ಕುವೆಂಪು ನಾಟಕ ಸ್ಪರ್ಧೆಯ ಹಲವಾರು ನಾಟಕಗಳನ್ನು ನೋಡಲು ಹಲವರು ಉತ್ಸುಕರಾಗಿದ್ದದ್ದು  ಇದಕ್ಕೆ ಕಾರಣವಾಗಿತ್ತು ಎನ್ನುವುದು ಸ್ಪಷ್ಟವಾಗಿದೆ !

ಉಪನ್ಯಾಸದ ನಂತರ,  ಉಟದ ವ್ಯವಸ್ಥೆ ಇತ್ತು.
 
 
 
 

 

Rating
No votes yet