ಸಪ್ತಸ್ವರ-೨, ಮಕ್ಕಳ ಸಂಗೀತ ಗಾನ
ಸಪ್ತಸ್ವರ-೨, ಮಕ್ಕಳ ಸಂಗೀತ ಗಾನ
ಕಸ್ತೂರಿ ವಾಹಿನಿ- ಕನ್ನಡಿಗರ ಹೆಮ್ಮೆಯ ಪ್ರತೀಕ. ಪ್ರಥಮ ಬಾರಿಗೆ ಕಸ್ತೂರಿ ವಾಹಿನಿಯಲ್ಲಿ ಮಕ್ಕಳಿಗಾಗಿ ಸಪ್ತಸ್ವರವೆಂಬ ಹಾಡಿನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದು ಸಪ್ತಸ್ವರದ ಎರಡನೇ ಭಾಗವಾಗಿದ್ದು ಈ ಕಾರ್ಯಕ್ರಮವು ಜುಲೈ ತಿಂಗಳ -೦೭, ಸೋಮವಾರದಿಂದ ಬುಧವಾರ ೮:೩೦ ರಿಂದ ೯:೩೦ವರೆಗೆ ಪ್ರಸಾರವಾಗಲಿದೆ. ಸಪ್ತಸ್ವರ ಭಾಗ-೧ ರಾಜ್ಯಾದ್ಯಂತ ಲಕ್ಷಾಂತರ ಜನರ ಮನ ಸೂರೆಗೊಂಡಿದೆ. ೭ರಿಂದ ೧೪ ವರುಷದ ಮಕ್ಕಳು ಕಾರ್ಯಕ್ರಮದಲ್ಲಿಭಾಗವಹಿಸಲ್ಲಿದ್ದಾರೆ. ಸೋಮವಾರ ಕೇವಲ ಮಕ್ಕಳಿಗೆ ಹಾಡಲು ಅವಕಾಶ ಮಾಡಿಕೊಡಲಾಗುವುದು. ಮಂಗಳವಾರ ಮತ್ತುಬುಧವಾರ ಮಕ್ಕಳಿಗೆ ಅಗ್ನಿಪರೀಕ್ಷೆ ಮುಖಾಂತರ ಇಬ್ಬರನ್ನು ಕಾರ್ಯಕ್ರಮದಿಂದ ಹೊರಹಾಕಲಾಗುವುದು.
ಈ ಕಾರ್ಯಕ್ರಮವು ಹಳೆಯ ಮತ್ತು ಹೊಸ ಗೀತೆಗಳ ಮಿಶ್ರಣವಾಗಿರುವುದು ಒಂದು ವಿಶೇಷ. ಈ ಕಾರ್ಯಕ್ರಮವು ಒಟ್ಟು ೫೧ ಕಂತುಗಳಲ್ಲಿ ಪ್ರಸಾರವಾಗಲಿದೆ. ಜುಲೈ ೭ರಿಂದ ಆರಂಭವಾಗುವ ಸಪ್ತಸ್ವರ-೨ ನವೆಂಬರ್ ತಿಂಗಳಲ್ಲಿ ಅಂತ್ಯವಾಗುವುದು. ಹಂತ ಹಂತವಾಗಿ ಚಲಿಸುವ ಈ ಕಾರ್ಯಕ್ರಮದಲ್ಲಿ ಎರಡು ಪುಟ್ಟ ಪ್ರತಿಭೆಗಳು ಅಂತಿಮ ಸ್ಪರ್ಧೆಯಲ್ಲಿ ಭಾಗವಹಿಸಲಿರುವರು.
ಇವರನ್ನು ಒಂದು ದೊಡ್ಡ ವೇದಿಕೆಯಲ್ಲಿ, ಜನರ ಎದುರೇ ವಿಜಯಶಾಲಿಗಳನ್ನಾಗಿ ಘೋಷಿಸಲಾಗುವುದು. ಈ ಕಾರ್ಯಕ್ರಮದ ನಿರೂಪಣೆಯನ್ನು ಖ್ಯಾತ ಗಾಯಕಿ ಶ್ರೀಮತಿ ಸುಪ್ರಿಯಾ ಆಚಾರ್ಯ ನಿರ್ವಹಿಸುವರು. ತೀರ್ಪುಗಾರರಾಗಿ ಶ್ರೀಮತಿ ಬಿ.ಕೆ. ಸುಮಿತ್ರ, ಶ್ರೀಮತಿ ಚಂದ್ರಿಕಾ ಗುರುರಾಜ್ ಹಾಗೂ ಶ್ರೀ ರಾಮ್‌ಪ್ರಸಾದ್ ಭಾಗವಹಿಸುವರು. ಮಕ್ಕಳಿಗೆ ಗುರುಗಳಾಗಿ ಶ್ರೀಮತಿ ಕಸ್ತೂರಿ ಶಂಕರ್ ಹಾಗೂ ಶ್ರೀ ಶಂಕರ್ ಶ್ಯಾನ್‌ಬೋಗ್ ತಮ್ಮ ಪ್ರತಿಭೆಯನ್ನು ಮಕ್ಕಳಿಗೆ ಧಾರೆಯೆರೆಯುವರು.