ಸಮಸ್ಯಾ ಪರಿಹಾರ ಯೋಜನೆ

ಸಮಸ್ಯಾ ಪರಿಹಾರ ಯೋಜನೆ

ಪ್ರಸ್ತುತ ನಮ್ಮ ದೇಶದಲ್ಲಿ ಬಡವರಿಗೆ, ರೈತರಿಗೆ, ನೌಕರರಿಗೆ, ಅಧಿಕಾರಿಗಳಿಗೆ, ಸಮಾಜ ಶೇವಕರಿಗೆ, ಜನಪ್ರತಿನಿಧಿಗಳಿಗೆ,  ವಯಸ್ಸಾದವರಿಗೆ, ಅವರಿಗೆ ಇವರಿಗೆ ಎಲ್ಲರಿಗೂ ಇರುವಷ್ಟು ಸೌಲಭ್ಯಗಳು ಬೇರೆ ಎಲ್ಲಿಯೂ ಇಲ್ಲವೇನೋ ಎನ್ನುವುದು ನನ್ನ .ಅನಿಸಿಕೆ. ಇಷ್ಟಾದರೂ ನಮ್ಮ ಜನ ನಮ್ಮ ದೇಶದಲ್ಲಿ ಬೇರೆಯವರಿಗಿಂತ ತುಂಬಾ ಕಷ್ಟದಲ್ಲಿದ್ದಾರೆ. ಹಾಗೆ ಜನಪ್ರತಿನಿಧಿಗಳ ಬಗ್ಗೆ ಹೇಳುವುದೇ ಬೇಡ. ಹಾಗೆ  ಪುಡಿಗಾಸಿನ ಸಾಲ ಮನ್ನಾ, ಸಬ್ಸಿಡಿ, ಪರಿಹಾರ ಇತ್ಯಾದಿಗಳಿಗೆ ಬಾಯಿಬಿಡುವ ರೈತಾಪಿ ವರ್ಗ. (ತಮ್ಮ ಬೆಳೆಗೆ ಯೋಗ್ಯ ಬೆಲೆ ನೀಡದಿದ್ದರೂ ಅದರ ಬಗ್ಗೆ ಗಮನ ಇಲ್ಲ ಎನ್ನುವುದು ಬೇರೆ ಮಾತು) ಸರ್ಕಾರಿ ನೌಕರರಿಗೆ ಸಂಬಳ ಕೊಟ್ಟಿರೂ, ಮನೆ ಬಾಡಿಗೆ ಭತ್ಯೆ, ಪ್ರಯಾಣ ಭತ್ತೆ , ತುಟ್ಟಿ ಭತ್ಯೆ ಹೀಗೆ ಏನೇ ನೀಡಿದರೂ ತೃಪ್ತಿ ಇಲ್ಲ. (ಎಲ್ಲ ವರ್ಗಗಳಲ್ಲಿಯೂ ಅಪವಾದಗಳಿವೆ ಎಂಬುದನ್ನು ಒಪ್ಪಿಕೊಳ್ಳುತ್ತಾ)  ತಮ್ಮ ಬಳಿ  ಬರುವವರ ಬಾಯಿಗೆ ಕೈ ಹಾಕಿಯಾದರೂ ಎಂಜಲನ್ನ ಕಸಿಯುವರು. ಕೂಲಿ ಕಾರ್ಮಿಕರೂ ಮಾಡುವ ಕೆಲಸಕ್ಕೆ (ಉದ್ಯೋಗ ಖಾತ್ರಿ ಉಧಾಹರಣೆ: 2-3 ತಾಸು ಕೆಲಸಕ್ಕೆ 100 ಸಂಬಳ ದಿಂದಾಗಿ ಅವರ ಅಭಾವ ಪ್ರಾರಂಭ ಆಗಿದೆ) ಎಷ್ಟು ಸಂಬಳ ಹೇಳಬೇಕೆಂಬುದೇ ಅರಿಯರಾಗಿದ್ದಾರೆ.

ಇಷ್ಟಿದ್ದೂ ತೃಪ್ತಿ ಇಲ್ಲ. ಕಾರಣ ನನಗೆ ಅನಿಸಿದ್ದು ನಾವೇ ದುಡಿಯಬೇಕು. ಬೇಯಿಸಿ ತಿನ್ನಬೇಕು, ತಿಂದಿದ್ದನ್ನ ಜೀರ್ಣಿಸಿ ಉಳಿದದ್ದನ್ನು ನಾವೇ ಚೆಲ್ಲಬೇಕು. ಇದೆಲ್ಲ ನಮಗೆ ಕಷ್ಟದ ಕೆಲಸವೇ ಸರಿ. ಇದರ ಪರಿಹಾರಕ್ಕಾಗಿ ನಾನೊಂದು ಸವಾಲನ್ನು ತಂತ್ರಜ್ಷರಿಗೆ ಇಟ್ಟಿದ್ದೇನೆ. ಅದೇ ಹೊಸ ಯೋಜನೆ "ಉಣ್ಣೊ ಮಷಿನ್" ಎಂದರೆ ನಮಗದು ಊಟ ಮಾಡಿಸುವುದು ಬೇಡ. ನಮಗೆ ಹಸಿವಾಗದಂತೆ ಸ್ವಯಂ ಚಾಲಿತವಾಗಿ ಯಂತ್ರವೇ ಉಂಡು ತಿಂದು ಬರಬೇಕು. ಅದು ಏನನ್ನಾದರೂ ತಿನ್ನಲಿ, ಏನನ್ನಾದರೂ ಉಣ್ಣಲಿ.ಏನನ್ನಾದರೂ ಕುಡಿಯಲಿ  ನಮಗೆ ಮಾತ್ರಾ ಹಸಿವಿರಬಾರದು. 

ಇದರಿಂದ ದೇಶದಲ್ಲಿ ಅಷ್ಟೇ ಏಕೆ ಪ್ರಪಂಚದ ಎಲ್ಲಾ ಸಮಸ್ಯೆಗಳು ಪರಿಹಾರ! ಊಟಕ್ಕಾಗಿ ದುಡಿಮೆ. ದುಡಿಮೆಗಾಗಿ ಅಲೆದಾಟ, ಅಲೆದಾಟಕ್ಕಾಗಿ ವಸನ, ಊಟದ ಹಂಗಿಲ್ಲದವನಿಗಿನ್ನೇತರ ಹಂಗಿದೆ ಹೇಳಿ?

ಅಂದಮೇಲೆ ಇದಕ್ಕೆ ಸಂಬಂಧಿಸಿದಂತೆ ಯಾವ ತಾಪತ್ರಯವೂ ಇಲ್ಲ. ಅದಕ್ಕಾಗಿ ನಾನು ಕಂಡುಕೊಂಡಂತೆ ಪ್ರಪಂಚದ ಸುಭಿಕ್ಷೆ - ಸುರಕ್ಷೆಗೆ ಇಂತಹದೊಂದು ಯಂತ್ರ ಅತ್ಯವಶ್ಯ. ಅದನ್ನು ಕಂಡು ಹಿಡಿದವರಿಗೆ ಪ್ರಪಂಚದಲ್ಲಿ ಕೊಡಮಾಡುವ ಎಲ್ಲ ಬಹುಮಾನ.

ನನ್ನ ಕಲ್ಪನೆಯನ್ನು ಸರಿಯಾಗಿ ಅಕ್ಷರಕ್ಕಿಳಿಸಲು ಸೋತಿದ್ದೇನೆ. ಆದರೂ ಇಂತಹ ಐಡಿಯಾ ಕೊಟ್ಟ ನನ್ನ ತಲೆಗೆ, ಒಮ್ಮೆ ಕಂಡು ಹಿಡಿದರೆ ಅವರ ತಲೆಗೆ ಏನು ಕೊಡಬಹುದು ಹೇಳಿ?

 

Rating
No votes yet

Comments