ಸರ್ಕಾರಗಳ ಒಳ್ಳೆಯ ಮತ್ತು ಕೆಟ್ಟ ಕೆಲಸಗಳು!

ಸರ್ಕಾರಗಳ ಒಳ್ಳೆಯ ಮತ್ತು ಕೆಟ್ಟ ಕೆಲಸಗಳು!

 

ನಮ್ಮ ಸರಕಾರಗಳು ಮಾಡಿದ
ಬಹುಮೂಲ್ಯ ಕೆಲಸವೆಂದರೆ
ಮಹಾತ್ಮ ಗಾಂಧಿಗೆ
ಭಾರತ ರತ್ನ ಪ್ರಶಸ್ತಿ
ಪ್ರದಾನ ಮಾಡದೇ ಇದ್ದುದು,
ಇಲ್ಲವಾಗಿದ್ದಲ್ಲಿ, ನೆಹರೂ,
ಇಂದಿರಾ, ಮಂಡೇಲಾ,
ಎಂಜಿಆರ್, ರಾಜೀವ ಗಾಂಧಿ,
ಲತಾರಿಗೆ, ಸರಿಸಮಾನರಾಗಿಯೇ,
ಮಹಾತ್ಮರು ಉಳಿದುಬಿಡುತ್ತಿದ್ದರು;

ನಮ್ಮ ಸರ್ಕಾರಗಳು ಮಾಡಿದ
ಅತೀ ಕೆಟ್ಟ ಕೆಲಸವೆಂದರೆ
ಹೆಚ್ಚಿನೆಲ್ಲಾ ನಗರಗಳಲ್ಲೂ
ರಸ್ತೆಗಳಿಗೆ ಮಹಾತ್ಮ ಗಾಂಧಿ ರಸ್ತೆ
ಎಂಬ ನಾಮಕರಣ ಮಾಡಿದುದು,
ಗಾಂಧಿ ತೋರಿದ ಹಾದಿಯಲ್ಲಿ
ನಡೆಯಬೇಕಾದ ಮಂದಿ ಈ
ರಸ್ತೆಗಳಲೇ ಬೇಕಾದುದನ್ನೆಲ್ಲಾ
ಮಾಡಿ ಅದರಿಂದಲೇ ಒಳಗೊಳಗೇ
ತೃಪ್ತರಾಗಿ ಉಳಿಯುತಿಹರು!
********************
ಆತ್ರಾಡಿ ಸುರೇಶ ಹೆಗ್ಡೆ

Rating
No votes yet

Comments