ಸರ್ವರಿಗೂ ಸರ್ವಧಾರಿ ಸಂವತ್ಸರದ ಶುಭಾಶಯಗಳು
ಪರಿಭ್ರಮಣ
---------------
ಕಾಲಚಕ್ರಕ್ಕೊಂದು
ಪರಿಭ್ರಮಣ
ತಂದಿದೆ ನವ ಸಂವತ್ಸರದ
ಉಷಾಕಿರಣ
ಬಂದಿಹುದಿದೋ
ಬಂದಿಹುದು ಸರ್ವಧಾರಿನಾಮ
ಕಟ್ಟಿಹುದಿದೋ
ಹೊಸ ಕನಸ ತೋರಣ
ಹೊಂಗೆಯ ತಳಿರು
ಮಾವಿನ ಚಿಗುರು
ಜೊತೆಜೊತೆಯಲೆ
ಬೇವಿನ ಹಸಿರು
ದುಂಬಿಗಳ ಝೇಂಕಾರ
ಕೋಗಿಲೆಗಳ ಇಂಚರ
ನಡುನಡುವೆ ಕೇಳಿದೆ
ಕಾಕರಾಜನ ಸ್ವರ
ನಗೆ ತುಂಬಿದೆ
ಹೊಗೆ ತಂದಿದೆ
ಸಿಹಿಯಾಗಿದೆ
ಕಹಿ ಸೇರಿದೆ
ಎಲ್ಲೆಡೆ ಸೃಷ್ಠಿಯ
ಸಮತೋಲನ...
ನೋವುನಲಿವುಗಳ
ಸಮ್ಮೇಳನ
ಈ ಜೀವನ...
Rating