ಸಾಕ್ಷಿಗಳು!
ಸಖೀ,
ನಿನ್ನ ಕೋಣೆಯ
ಬಾಗಿಲನು ನಾನು
ಬಡಿಯುತಿದ್ದೇನೆ
ಎಂದೆನಿಸುವುದು,
ಕಿಟಕಿಯ ಹಿಂದೆ
ನಾನು ನಿಂತಿದ್ದೇನೆ
ಎಂದೆನಿಸುವುದು,
ಗವಾಕ್ಷದ ಮೂಲಕ
ನಾನು ಇಣುಕುತಿದ್ದೇನೆ
ಎಂದೆನಿಸುವುದು,
ಇವೆಲ್ಲಾ ಮುನಿಸಿನಿಂದ,
ಇನ್ನು ಮನದ ಬಾಗಿಲನು
ನನಗಾಗಿ ತೆರೆಯಲಾರೆ
ಎನುತಿರುವ ನೀನು,
ನನ್ನನ್ನು,
ಇನ್ನೂ ಮರೆತಿಲ್ಲ
ಎನ್ನುವುದಕೆ
ಸಾಕ್ಷಿಗಳೇ ತಾನೆ?!
*-*-*-*-*-*-*
Rating
Comments
ಉ: ಸಾಕ್ಷಿಗಳು!
In reply to ಉ: ಸಾಕ್ಷಿಗಳು! by roopablrao
ಉ: ಸಾಕ್ಷಿಗಳು!