ಸಾವು!

ಸಾವು!

ಕರೆಯುತ್ತಿದೆ, ಅದೋ ಆ ಸಾವು
ಕರೆವೆಣ್ಣಿನ ರೂಪದಲಿ
ಕೂಗುತ್ತಿದೆ, ಸನ್ನೆ ಮಾಡುತ್ತಿದೆ…
ಕೊಡುವುದಿಲ್ಲ, ನಾನು ಗಮನವ!

ನಾನು ಗಮನ ಕೊಡುವುದಿಲ್ಲ
ಏಕೆಂದರೆ ಹೆದರಿಕೆ ನನಗಿಲ್ಲ
ಪ್ರೀತಿ ಅಂತಹ ಲೌಕಿಕ ವಸ್ತುವೇ ಅಲ್ಲ!

ಕರೆಯುತ್ತಿದೆ ಆ ಸಾವು ವಾತ್ಸಲ್ಯಭರಿತ ಅಜ್ಜನ ಪೋಷಾಕಿನಲ್ಲಿ
ದೂರ, ದೂರ ದೂಡಲು ಈ ಜಗವನು

ಹೌದು, ಸಾವೇ ಹೌದು, ಇರಬಹುದು
ಜಗವೊಂದು ನಿನಗೆ ಕೇವಲ ಭ್ರಮೆ
ಆದರೆ ನನಗಲ್ಲ
ಆ ಭ್ರಮೆಯಂತೆ ಈ ಜಗವ ನಾ ನಂಬುವುದೂ ಇಲ್ಲ
ಎಣಿಸುವುದೂ ಇಲ್ಲ ಒಂದೊಂದು ಕ್ಷಣಗಳನು
ಜೀವೆನವೆಂಬ ಜಪಸರದ ಮೇಲೆ

ಸಾವು ಮೂಸುತ್ತಿದೆ,
ಬೆನ್ನಟ್ಟಿದೆ ಬೇಟೆ ನಾಯಂತೆ

ಇಚ್ಚಿಸುತ್ತೇನೆ, ನಾನು ಸಾಯಲು
ಆದರೆ ಆ ನಾಯಿಗಳ ಕಾಲಬುಡದಲ್ಲಿ ಅಲ್ಲ
ನಾನೊಬ್ಬ ಕವಿ , ಕವಿಯಂತೆ , ಕವಿ ಮರಣವ!

ಸ್ವಪ್ನಲೋಕದಲ್ಲಿ ವಿಹರಿಸುತ್ತಾ
ಮಾತನಾಡುತ್ತಾ ಅಂತರಾಳದ ಮೌನದೊಂದಿಗೆ
ಅಥವಾ ನನ್ನ ಪ್ರೀತಿಯೊಂದಿಗೆ
ಅವಳ ಪ್ರೀತಿಸುತ್ತ ಅವಳ ಪ್ರೀತಿಸುವಾಗ !

………………………….
ಬರೆದಿದ್ದು ೨೫ ಅಕ್ಟೋಬರ್ ೨೦೦೦

ಅರ್ಥ ಕೇಳ್ಬ್ಯಾಡಿ... ಸುಮಾರು ವರ್ಷಗಳ ಹಿಂದೆ ಬರೆದಿದ್ದು... ಇದಕ್ಕೆ ಅರ್ಥ ಇದೆಯೋ ಇಲ್ವೋ...ಇದ್ರೆ ಅದೇನು ಅಂತ ನನಗೆ ಮರ್ತು ಹೋಗಿದೆ. :)

Rating
No votes yet

Comments