ಸಾಹಿತ್ಯ
ಸಾಹಿತ್ಯ
ಗಾಳಿಯಂತೆ
ಮಳೆಯಂತೆ
ಕಾಮನಬಿಲ್ಲಿನಂತೆ
ಮದುವೆಗೆ ಮೊದಲು
ಹುಡುಗರನ್ನು ಕಣ್ಣೆತ್ತಿಯೂ ನೋಡಿರದ ಹುಡುಗಿ
ಹಳ್ಳಿ ಬಿಟ್ಟು ಹೊಲವನ್ನೂ ನೋಡಿರದ ಹುಡುಗಿ
ಮದುವೆಯಾಗಿ ಮಕ್ಕಳಾಗುತ್ತಿದ್ದಂತೆಯೇ
ಗಂಡನನ್ನು ಬಿಟ್ಟು
ಮುಕ್ತಳಾದಳು
ಊರು ಬಿಟ್ಟಳು
ಓಡಿದಳು
ಓದಿದಳು
ಹಾಡಿಗಳು
ಕುಣಿದಳು
ಎಲ್ಲ ಗಂಡಸರ
ಗಂಡಸ್ತಿಕೆಗೆ
ಇನ್ನೂ ಒಬ್ಬ ಪ್ರೇಮಿ
ನಿದ್ದೆಯಿಂದ ಏಳುವ ಮೊದಲೇ
ಇನ್ನೊಬ್ಬನನ್ನು ತೆಕ್ಕೆಗೆ
ಎಳೆದುಕೊಂಡಳು
Bloddy Bitch!
ಹಾದರಗಿತ್ತಿ!!
ಸೂಳೆ!!!
ಹಳೆಯ ಗಂಡ, ಹಳೆಯ ಪ್ರೇಮಿಗಳು
ಮಕ್ಕಳು, ಬಂಧುಗಳು, ಗೆಳೆಯರು
ಬೊಬ್ಬೆಹೊಡೆದರು
ಊಳಿಟ್ಟರು
ಅತ್ತರು
ಅವಳಿಗೆ ಇದನ್ನೆಲ್ಲ ಕೇಳಿಸಿಕೊಳ್ಳಲೂ
ಪುರುಸೊತ್ತಿರಲಿಲ್ಲ
ಹಾರಿದಳು
ಪುರುಷನಿಂದ ಪುರುಷನೆಡೆ
ಊರಿಂದ ಊರಿಗೆ
ದೇಶದಿಂದ ದೇಶಕ್ಕೆ
'Bookers'
ಹುಡುಕಿಕೊಂಡು ಬಂತು
ಅರವತ್ತರ ಹರೆಯದಲ್ಲಿ
ಹೊಸ ಪ್ರೇಮಿಯ ಜೊತೆ
ಮರಳಲ್ಲಿ ಮನೆ ಕಟ್ಟುತ್ತಿರುವಾಗ
Noble
ಧನ್ಯವಾಯಿತು
Rating