ಸುಂದರ ಸಮ್ಮಿಲನ

ಸುಂದರ ಸಮ್ಮಿಲನ

     ಆಹಾ ಎಂತಹ ಸಂಜೆ.ಸಂಪದ ಸಮ್ಮಿಲನ ೪ ರ ಸಂಭ್ರಮ.೨೧ ರಿಂದ ೭೪ ರವಯಸ್ಸಿನ ಸಂಪದದ  ಕನ್ನಡದ ಸ್ಪೂರ್ತಿಗಳೆಲ್ಲವೂ ಒಂದೆಡೆ ಸೇರಿದ ಕ್ಷಣ.ಬೆಂಗಳೂರಿನ ಬೇರೆಡೆ ಇಂದ ಸಂಪದ ಸಮುದಾಯದ ಕಡೆಗೆ ಬಿಡುವಿನ ಸಮಯದಲ್ಲಿ ಸೇರಿಕೊಂಡು ಒಂದಷ್ಟು  ಸಲಹೆ ಒಂದಷ್ಟು ಮಾತು ಒಂದಷ್ಟು ಪ್ರಶ್ನೆ  ಒಂದಷ್ಟು ಆ ಪ್ರಶ್ನೆಗಳಿಗೆ ಹರಿಪ್ರಸಾದರಿಂದ ಉತ್ತರ,ಉತ್ತಮ ಸಲಹೆ.ಎಲ್ಲ ಕ್ರಿಯಾಶೀಲ ಸಂಪದಿಗರಿಗೆ ಕಾರ್ಯಕ್ರಮ ಅಂದಗಾಣಿಸಿಕೊಟ್ಟಿದ್ದಕ್ಕೆ  ಧನ್ಯವಾದಗಳು. 

       ಕಾರ್ಯಕ್ರಮಕ್ಕೆ ೭೫ ಜನರ ನೋಂದಣಿ.೨೫ ಜನರ ಕೂಟ ಕೊನೆಗೆ ಯಶಸ್ವಿ ಆಗಿ ನಡೆಯಿತೆಂದರೆ ತಪ್ಪಾಗಲಾರದು.ಮೂಲ ಉದ್ದೇಶ್ಯ ವನ್ನು ಸಮಯದ ಅಭಾವದಿಂದ ತಲುಪಲಾಗದಿದ್ದರೂ ಅದರ ಬೀಜವಂತೂ ಬಿತ್ತಿದ ಹಾಗೆಯೆ ಕಂಡು ಬರುತ್ತದೆ.ಮುಂದಿನ ದಿನಗಳಲ್ಲಿ ಸಂಪದ ವಿಭಿನ್ನ ರೀತಿಯಲ್ಲಿ ರೂಪುಗೊಳ್ಳುತ್ತದೆ ಎಂಬುದು ಸತ್ಯ.

       ಸಂಪದಕ್ಕೆ ನಾನು ಹೊಸಬನಾದರೂ ಸಮುದಾಯದ ನಿನ್ನೆ ನಡೆದ ಸಮ್ಮಿಲನದ ಒಂದು ವೈಶಿಷ್ಟ್ಯ ವೇನೆಂದರೆ ಕರ್ನಾಟಕದ ಬಾಗಲಕೋಟೆ,ಧಾರವಾಡ,ಮಂಡ್ಯ,ತುಮಕೂರು,ಚಿತ್ರದುರ್ಗ,ಶಿವಮೊಗ್ಗ,ಉಡುಪಿ,ದಕ್ಷಿಣ ಕನ್ನಡದ ಜನರು ಬೆಂಗಳೂರಿಗೆ ತಮ್ಮ ಕೆಲಸದಸಲುವಾಗಿಯೂ ,ಇನ್ನು ಕೆಲವರು ವಿದ್ಯಾರ್ಥಿಗಳೂ,ಇನ್ನೂ ಕೆಲವರು ಬೆಂಗಳೂರಿನವರೇ ಈ ಸಂಜೆಯಲ್ಲಿ ಭಾಗವಹಿಸಿದ್ದು ನಿಜಕ್ಕೂ ಹೆಮ್ಮೆಯ ವಿಷಯ.ಇದರಲ್ಲಿ ಕೆಲವರ ಆಸಕ್ತಿ ಕಥೆ,ಸಾಹಿತ್ಯ,ಕವನ,ನಾಟಕ,ತಂತ್ರಜ್ಞಾನ,ಫೋಟೋಗ್ರಫಿ,ಸಾಗರ ತೀರದಾಚೆಗೆ ಕನ್ನಡ ಬೆಳೆಸಿದವರು,ಸಂಪದದ ರೂವಾರಿ ಹರಿಪ್ರಸಾದರು,ಎಲ್ಲ ಸಂಪದಿಗರಿಗೆ ಸ್ಪೂರ್ತಿ ಎಂದೇ ಹೇಳಬಹುದಾದ ೭೪ ರ ಕನ್ನಡದ ತರುಣ ವೈ .ಎಲ್.ಏನ್.,ಮಿಲಿಟರಿ ಇಂದ ಬಂದು ಇಲ್ಲೇ ಬೆಂಗಳೂರಲ್ಲೇ ಕೆಲಸ ಮಾಡುತ್ತಿರುವ ಗೋಪಿನಾಥರು,ಫೋಟೋಗ್ರಫಿಯ ಗುರುರಾಜರು,ಸಂಪದದ ಜೊತೆಗೆ ಗೂಗಲ್ ಆಪ್ಸ್ ಬಗ್ಗೆ ಹೇಳಿದ ಸತ್ಯ ಚರಣರು,ಸಾಗರದಾಚೆಗೆ ಮಾಡಿದ ಕನ್ನಡದ ಕೆಲಸವನ್ನು ಇಲ್ಲೂ ಮುಂದುವರೆಸುವ ಆಶಾಕಿರಣ ಹೊತ್ತ ಪ್ರಭುಮೂರ್ತಿಅವರು ,ಎಲ್ಲರಿಂದ ಪ್ರಶಂಸೆಗೊಳಗಾದ  ಸಂಪದದ ಸಕ್ರಿಯ  ಸುಪ್ರೀತ್ ಹಾಗೂ ಪ್ರಸನ್ನ,ಇನ್ನು ಕೆಲವರು ಮಾಹಿತಿ ,ಸಿವಿಲ್ ತಂತ್ರಜ್ಞಾನಿಗಳು ಇತ್ಯಾದಿ .....

     ನೋಡಿ ಇದೆಲ್ಲದರಿಂದ ಆಗುತ್ತಿರೋದು ಇಂಟರ್ನೆಟ್ ನಲ್ಲಿ ಕನ್ನಡಕ್ಕೆ ಜಯ ಎಂದರೆ ತಪ್ಪಾಗಲಾರದು.ಕಾರ್ಯವ್ಯಾಪಿ ಬೇರೆಬೇರೆ ವರ್ಗದವರು ,ಅವರ ಆಸಕ್ತಿ ಕೂಡ ಕನ್ನಡದ ವಿಭಿನ್ನ ವರ್ಗಗಳು ಆದರೆ ಕೊನೆಗೆ ಸಂಗಮವಾಗುತ್ತಿರುವುದು ಸಂಪದದಲ್ಲಿ. 

 

    ಸಂಪದ ಹುಟ್ಟು ಹಾಕಿದವರಿಗೂ,ಸಮ್ಮಿಲನಕ್ಕೆ ಬಂದವರಿಗೂ,ಸಕ್ರಿಯ ಸಂಪದ ಬಂಧುಗಳಿಗೂ ಧನ್ಯವಾದ.

Rating
No votes yet

Comments