ಸುಖೀ, ಸಂತೃಪ್ತ ಮತ್ತು ಸಾರ್ಥಕ ಬದುಕಿನ ಸೂತ್ರಗಳು

ಸುಖೀ, ಸಂತೃಪ್ತ ಮತ್ತು ಸಾರ್ಥಕ ಬದುಕಿನ ಸೂತ್ರಗಳು

೧) ಎಲ್ಲಾರೂ ನಮ್ಮವರೇ.
೨) ನಮ್ಮ ಬೆನ್ನು ನಮಗೆ ಕಾಣುವದಿಲ್ಲ.
೩) ಮನಸ್ಸು ಸ್ವಚ್ಚವಾಗಿರಬೇಕು.
೪) ಯಾರ ಜತೆಗೂ ಧ್ವೇಷ ಕಟ್ಟಿಕೋಬಾರದು.
೫) ಸಿಟ್ಟಿನ ಕೈಯಲ್ಲಿ ಬುದ್ದಿಯನ್ನು ಕೊಡಬಾರದು.
೬) ಯಾರ ಭಾಗ್ಯ ಹೇಗೋ ಯಾರು ಬಲ್ಲರು ? ತಿಪ್ಪೆ ಉಪ್ಪರಿಗೆ ಆಗಬಹುದು , ಉಪ್ಪರಿಗೆಯು ತಿಪ್ಪೆ ಆಗಬಹುದು
೭) ಯಾವಾಗಲೂ ಒಳ್ಳೆಯ ಮಾತಾಡಬೇಕು .
೮) ಕೈಲಾದ ಒಳ್ಳೆಯ ಕೆಲಸ ಮಾಡಬೇಕು.
೯) ದೇವರು ನನಗೆ ಏನೂ ಕಡಿಮೆ ಮಾಡಿಲ್ಲ , ಕೊರತೆ ಅನಿಸಿದರೆ ‍ನಾವು ಪಡೆದುಕೊಂಡು ಬಂದದ್ದು ಅಷ್ಟೇ ಇರುತ್ತದೆ.

ಇವು ನಾನು ಬಲ್ಲ ಒಂದು ಸಾರ್ಥಕ, ಸಂತೃಪ್ತ , ತುಂಬು ಬದುಕಿನ ಜೀವದ ಜೀವನದೃಷ್ಟಿ , ನಮ್ಮ ಪಾಲಿನ ದಾರಿದೀಪಗಳು ಅಂತ ನನಗೆ ಅನಿಸುತ್ತದೆ.

ಈ ಪಟ್ಟಿಗೆ ಮತ್ತೊಂದು ಸೇರಿಸಬಹುದು

೧೦)ನಗ್ ನಗ್ತಾ ಇರಬೇಕು , ನಗಿಸ್ತಾ ಇರಬೇಕು , ಖುಷಿಯಾಗಿ ಇರಬೇಕು

Rating
No votes yet

Comments