ಸೂರ್ಯನಿಗೆ ಚಂದ್ರನ ದೂರು

ಸೂರ್ಯನಿಗೆ ಚಂದ್ರನ ದೂರು

ನೀನು ನಿನ್ನ ಜವಾಬ್ದಾರಿಯ ನನಗೆ
ವಹಿಸಿ ನಿನ್ನ ಪಯಣವ ಬೆಳೆಸಿದೆ

ಗೊತ್ತಿಲ್ಲ ನಿನಗೆ ನಾನಿನ್ನು ಒಬ್ಬನೇ
ಇಲ್ಲೆಷ್ಟು ವೇದನೆ ಸಹಿಸಬೇಕಾಗಿದೆ

ನೀನು ಮರೆಯಾದರೆ ಸಾಕು ನನ್ನನ್ನು
ಮುತ್ತಿಕೊಳ್ಳುತ್ತವೆ ತಾರೆಗಳ ದಂಡು

ನಾನು ನಿನ್ನ ಹಂಗಿನಲ್ಲಿದ್ದೇನೆಂದು
ಹೀಗಳೆಯುತ್ತವೆ ನನ್ನನ್ನು ಕಂಡು

ಅವರಿಗೆಲ್ಲಾ ಸ್ವಂತದ ಬೆಳಕಿದೆ
ಎಂಬುದಕೆ ಇದ್ದರೇನಂತೆ ಹೆಮ್ಮೆ

ನನ್ನ ನಿನ್ನಂತೆ ಭೂಮಿಯ ಬೆಳಗಿ
ಅವರೆಲ್ಲಾ ತೋರಿಸಲಂತೆ ಒಮ್ಮೆ
******************
ಹರಿಯಯವರ ಕಾರ್ಕಳ ಚಿತ್ರಕ್ಕೆ ನನ್ನ ಕವನ.

Rating
No votes yet