ಸೆಕೆಂಡ್ ಸ್ಯಾಟರ್ ಡೇ
ಐ ಟಿ ಗೆ ಸೇರಿದ ಮೇಲೆ ನಮಗೆಲ್ಲ ಶನಿವಾರ ಅಂದ್ರೆ - ಎಂಟು ಘಂಟೆಯವರಗೆ ನಿದ್ರೆ, ತಿಂಡಿ ಸ್ನಾನ ಎಲ್ಲ ಲೇಟ್ ಅಥವ ನಮಗೆ ಬೇಕಾದಂಗೆ. ಬ್ಯಾಂಕ್ ಅಥವಾ ಸರ್ಕಾರಿ ಕೆಲಸಗಳು ಏನಾದ್ರು ಇದ್ದರೆ, ನಂಗೆ ಶನಿವಾರ ಕೆಲಸದ ದಿನದ ತರ ಇರುತ್ತೆ. ಶನಿವಾರ ಹಾಫ್ ಡೇ ಬೇರೆ ಅದಕ್ಕೆ ಮಾಮೂಲಿ ಬೇಗ ಎಳೋಹಾಗೆ ಎದ್ದು ರೆಡಿಯಾಗಿ ಹೋದ್ರೆ ಬರುವಷ್ಟರಲ್ಲಿ ಸಂಜೆ ಸುಸ್ತಾಗಿ ಇರುತ್ತೆ. ಸರ್ಕಾರಿ ಸಂಪ್ರದಾಯಗಳು ಸುಲಭ ಇಲ್ಲ ಅನ್ಸುತ್ತೆ.
ಬರಿ ವೀಕೆಂಡ್ ಗಳಲ್ಲಿ ಬ್ಯಾಂಕ್, ಸರ್ಕಾರಿ ಕೆಲಸಗಳನ್ನು ಮಾಡೋಣ ಅಂತ ನಾವು ಗುರುತಾಕೊಂಡಿದ್ದ್ರೆ - ಅದಕ್ಕೆ ಕತ್ತರಿ ಹಾಕುತ್ತೆ ಈ ಸೆಕೆಂಡ್ ಸ್ಯಾಟರ್ ಡೇ. ಮೊದಮೊದಲು ಸುಮ್ನೆ ಕೆಲಸದ ಯೋಜನೆ ಮಾಡಿ ಹೋಗ್ತಾ ಇದ್ದೆ ಆದರೆ ಸೆಕೆಂಡ್ ಸ್ಯಾಟರ್ ಡೇ ಅಂತ ರಜ ಹಾಕಿರೋ ಬೋರ್ಡ್ ನೋಡಿ ವಾಪಾಸ್ ಬರ್ತಾ ಇದ್ದೆ ( ಅಯ್ಯೋ ಮೊದಲೇ ಗೊತ್ತಿದ್ದರೆ ಅಂದ್ಕೊಂಡು). ಯಾಕೆ ಸೆಕೆಂಡ್ ಸ್ಯಾಟರ್ ಡೇ ರಜ ಅಂತ ಗೂಗಲ್ ಮಾಡ್ದೆ ಕಾರಣ ಇಲ್ಲಿದೆ ನೋಡಿ - http://www.studentvoice.in/2011/02/reson-about-holiday-on-second-saturday.html
ಇವಾಗ ಏನಾದ್ರು ಬ್ಯಾಂಕ್ ಅಥವಾ ಸರ್ಕಾರಿ ಕೆಲಸ ಇದ್ದರೆ ಮೊದ್ಲು ಸೆಕೆಂಡ್ ಸ್ಯಾಟರ್ ಡೇ ಚೆಕ್ ಮಾಡಿ ಸರಿಯಾಗಿ ಯೋಜನೆ ಮಾಡ್ತೀನಿ. ಅಂದಾಗೆ ನಾಳೆ ಸೆಕೆಂಡ್ ಸ್ಯಾಟರ್ ಡೇ ನೆನಪಿಡಿ.
Rating
Comments
ಉ: ಸೆಕೆಂಡ್ ಸ್ಯಾಟರ್ ಡೇ
ಉ: ಸೆಕೆಂಡ್ ಸ್ಯಾಟರ್ ಡೇ
ಉ: ಸೆಕೆಂಡ್ ಸ್ಯಾಟರ್ ಡೇ
In reply to ಉ: ಸೆಕೆಂಡ್ ಸ್ಯಾಟರ್ ಡೇ by makara
ಉ: ಸೆಕೆಂಡ್ ಸ್ಯಾಟರ್ ಡೇ