ಸೊಳ್ಳೆ ಬತ್ತಿಗೂ ಬಿಡಲಿಲ್ವಲ್ಲ ಸಿವಾ..!!

ಸೊಳ್ಳೆ ಬತ್ತಿಗೂ ಬಿಡಲಿಲ್ವಲ್ಲ ಸಿವಾ..!!

ನೆನ್ನೆ ಬೈಕ್ ಅ೦ಗಡಿಗೆ ಹೋದಾಗ ನನಗೆ ಪರಿಚಯ ಇರುವ ಕನ್ನಡದವನೇ ನನಗೆ "ಕ್ಯಾ ಹುವಾಹೆ ಸಾಬ್" ಅ೦ತಾನೆ. ಅವನನ್ನು ತರಾಟೆಗೆ ತೊಗೊ೦ಡು ಕನ್ನಡದಲ್ಲೇ ಮಾತನಾಡಿಸಿದೆ. ಸ೦ಜೆ ಮಾಲ್ ನಲ್ಲಿ ನಾನು ನನ್ನ ಆಕೆ ಹೋದಾಗ ಅಲ್ಲಿಯೂ ಹಿ೦ದಿಯ ಕರ್ಕಷ ಧ್ವನಿ ಮೊಳಗುತ್ತಿದೆ.

ಜೀನ್ಸ್ ಅ೦ಗಡಿಗೆ ನುಗ್ಗಿ ಕನ್ನಡವನ್ನು ಪ್ರಯತ್ನಿಸೋಣ ಅ೦ತ ಹೋದ್ರೆ, "ಹಿ೦ದಿ ಆರ್ ಇ೦ಗ್ಲಿಷ್ ಸಾಬ್" ಅ೦ತ ನನಗೇ ಆಯ್ಕೆ ಕೊಡುತ್ತಾನೆ ಅ೦ಗಡಿಯವ. ಇವತ್ತಿನ ದಿನ ಜಾಹೀರಾತುಗಳನ್ನು ಗಮನಿಸಿ, ಎಲ್ಲವೂ ಹಿ೦ದಿಮಯ, ಕನ್ನಡದಲ್ಲಿ ತರ್ಜುಮೆ ಮಾಡಿದರೂ ಅದರ ಭಾವ ವ್ಯಕ್ತವಾಗಲ್ಲ.

ಹಿ೦ದಿ ತುರುಕಿ ತುರುಕಿ ಕನ್ನಡಿಗನ ಮನಸ್ಸಿನ ಮೇಲೆ ಸಾಕಷ್ಟು ಕೆಟ್ಟ ಪ್ರಭಾವಗಳಾಗುತ್ತಿವೆ. ಲಗತ್ತಿಸಿರುವ ಚಿತ್ರದಲ್ಲಿ ಸೊಳ್ಳೆ ಬತ್ತಿಯ ಹಿ೦ದೆ "ಇದು ವಿಷ" ಅನ್ನೋದನ್ನೂ ಸಹ ಕನ್ನಡದಲ್ಲಿ ಬರೆದಿಲ್ಲ.

ಈ ರೀತಿ ಹಿಂದಿ ಹೇರಿಕೆಯ ಬಗ್ಗೆ ನಾವು ಸುಮ್ಮನಿದ್ದರೆ ಏನಾಗತ್ತೆ ಅಂತ ಯೋಚ್ನೆ ಮಾಡಿದ್ರೆ ದಿಗಿಲಾಗತ್ತೆ! ಬೆಳಿಗ್ಗೆ ಎದ್ದಾಂಗಿದ ರಾತ್ರಿ ಮಲ್ಗೋ ವರೆಗೆ ಈ ರೀತಿ ಹಿಂದಿ ಹೇರಿಕೆಗೆ ತುತ್ತಾಗ್ತಿರೋ ಕನ್ನಡಿಗನ ಮನಸ್ಥಿತಿ ಹೇಗೆ ಕೂಗುತ್ತಾ ಇದೆ ಗೊತ್ತಾ?

೧) ಕನ್ನಡಿಗನಿಗೆ ತನ್ನ ಬಗ್ಗೆ , ಹಿಂದಿಯಲ್ಲದ ತನ್ನ ಭಾಷೆ ಬಗ್ಗೆ , ಹಿಂದಿಯನ್ನು ಕಲಿಯದಿದ್ದ ಬಗ್ಗೆ ಕೀಳರಿಮೆ ಮೂಡ್ತಾ ಇದೆ.
೨) ತಾನು ತನ್ನ ನುಡಿ ತನ್ನ ನಾಡು ಯಾವುದೂ ಉಪಯೋಗವಿಲ್ಲದ್ದು ಅನ್ನೋ ಆತ್ಮಹತ್ಯಾ ಮನೋಭಾವ ನಿಧಾನವಾಗಿ ಕನ್ನಡಿಗನಿಗೆ ಮೂಡ್ತಾ ಇದೆ.
೩) ಕನ್ನಡದಲ್ಲಿ ವ್ಯವಹರಿಸಿದ್ರೆ ತನ್ನನ್ನು ಮಕ ಮಕ ನೋಡಿ, ಹಳ್ಳಿ ಗಮಾರ ಅಂತ ನಗಾಡ್ತಾರೆ ಅಂತ ಯೋಚ್ನೆ ಮಾಡಕ್ಕೆ ಶುರು ಮಾಡ್ತಿದಾನೆ.
೪) ತನ್ನ ಸುತ್ತ ಮುತ್ತಲಿನವರನ್ನು ಮೆಚ್ಸಕ್ಕೆ, ಕನ್ನಡದ ಬಗ್ಗೆ ತಾನೇ ತಮಾಷಿ ಮಾಡಕ್ಕೆ ಕನ್ನಡಿಗ ಶುರು ಮಾಡ್ಕೊಂಡಿದಾನೆ. ಕನ್ನಡ ಮಾತಾಡೋದು, ಕನ್ನಡದವರನ್ನ ಮಾತಾಡ್ಸೋದು ಅವಮಾನ ಅನ್ಕೊಳ್ತಿದಾನೆ.
೫) ಹುಸಿ ಗೌರವಕ್ಕೆ ಮನರಂಜನೆ ಇಂದ ಹಿಡ್ದು ಎಲ್ಲಾ ಕಡೆ ಹಿಂದಿ ಬೇಕು ಅಂತಿದಾನೆ. ಕನ್ನಡದ ಜಾಹೀರಾತು ಉದ್ದಿಮೆ ಕುಸೀತಿದೆ

ದೀರ್ಘಾವದಿಯಲ್ಲಿ ಇದು ಸಂಪೂರ್ಣವಾಗಿ ಒಂದು ನಡೆ-ನುಡಿ-ಆಚಾರ-ವಿಚಾರವನ್ನು ಛಿದ್ರ ಛಿದ್ರ ಮಾಡಿಬಿಡುವ ಸಾಧ್ಯತೆ ಇದೆ. ಶಾಸ್ತ್ರೀಯ ಭಾಷೆ ಪಟ್ಟ ಪಡೆದು 7 ಜ್ಘಾನಪೀಠ ಪ್ರಶಸ್ತಿಯೆ೦ಬ ಗರಿಕೆಯನ್ನು ಮುಡಿದುಕೊ೦ಡು ಏನು ಸಾಧಿಸಿದಹಾಗಾಯಿತು? ಗ್ರಾಹಕ ಸೇವೆಯಲ್ಲಿ ಕನ್ನಡವನ್ನು ಆಗ್ರಹಿಸದೆ, ಹಿ೦ದಿ ಮತ್ತು ಇ೦ಗ್ಲಿಷನ್ನು ಅಗತ್ಯಕ್ಕಿ೦ತ ಹೆಚ್ಹು ತಲೆಮೇಲೆ ಎಳುದುಕೊಳ್ಳುತ್ತಿದ್ದೇವೆ. ನಮ್ಮ ಬದುಕಿನ ಎಲ್ಲಾ ರೀತಿಯ ಕೆಲಸಗಳಲ್ಲಿ ನಮಗೆ ಕನ್ನಡ ಕಾಣಿಸ್ತಿರಬೇಕು. ಆಗ್ಲೇ ಕನ್ನಡ ಭಾಷೆಗೆ ಮುನ್ನಡೆ ಮತ್ತು ಮನ್ನಣೆ. ಇಲ್ಲದಿದ್ರೆ ಈ ಹಿಂದಿ ಭೂತ ನಮ್ಮೆಲ್ಲರನ್ನೂ ತಿಂದು ತೇಗ್ಬಿಡತ್ತೆ, ಇದರಿಂದ ಕನ್ನಡಿಗ ಮಾನಸಿಕವಾಗಿ ಕುಸಿದು ನಶಿಸಿ ಹೋಗ್ತಾನೆ. ಇದನ್ನು ತಡೆಗಟ್ಟಲು ಇವತ್ತು ಕನ್ನಡಿಗ ಕೆಲಸ ಮಾಡಬೇಕಾಗಿದೆ.

ಅದಕ್ಕೆ ನನ್ನ ಕನ್ನಡದ ಬ೦ಧುಗಳೇ, ಇ೦ದೇ ಪಣತೊಡೋಣ.....
೧) ತಳ್ಳೋ ತರಕಾರಿ ಗಾಡಿಯೋರಿಂದ ಹಿಡ್ದು ಅಪಾರ್ಟ್ಮೆಂಟ್ ಮಾರೋರ ತನಕ ಎಲ್ಲಾರ್ ಜೊತೆ ನಾವು ಗ್ರಾಹಕರಾಗಿ ನಮಗಿರೋ ಹಕ್ಕನ್ನು ತಪ್ಪದೇ ಚಲಾಯಿಸೋಣ. ಅಂದ್ರೆ ಎಲ್ಲೆಡೆ ಕನ್ನಡದಲ್ಲೇ ವ್ಯವಹರಿಸೋಣ. ಕನ್ನಡ ಮಾತಾಡಲ್ಲ ಅಂದ್ರೆ ’ಹೋಗ್ರೀ ಸ್ವಾಮಿ, ನೀವೂ ಬೇಡ, ನಿಮ್ ಅಂಗಡೀನೂ ಬೇಡ’ ಅಂತ ಎದ್ ಬರೋಣ.
೨) ನಿಮ್ಮ ಫೋನಿಗೆ ಬರೋ ಎಲ್ಲಾ ಗ್ರಾಹಕಸೇವೆ ಕರೆಗಳಿಗೆ ಕನ್ನಡದಲ್ಲೇ ಉತ್ತರ ಕೊಡಿ. ನಿಮಗೆ ಇ೦ಗ್ಲಿಷ್ / ಹಿ೦ದಿ / ತಮಿಳು / ತೆಲುಗು ಚೆನ್ನಾಗಿಯೇ ಬರತ್ತೆ ಅ೦ತ ತೋರಿಸಿಕೊಳ್ಳಿ ಆದರೆ ಕನ್ನಡದಲ್ಲೆ ವ್ಯವಹರಿಸಲು ಒತ್ತಾಯಿಸಿ.

ನನ್ನಿಯೊ೦ದಿಗೆ,
ಕಿಶೋರ್!

ಬರಹಕ್ಕೆ ಪ್ರೇರೇಪಣೆ: http://enguru.blogspot.com/

Rating
No votes yet

Comments