ಸೊಸೆ(ತಂದ) ಸೌಭಾಗ್ಯ - ಕೊನೆಯಾಗುವ ಮುನ್ನ
ಎಷ್ಟು ಬೇಗ ಸಾದ್ಯವೊ ಅಷ್ಟು ಬೇಗ ಬೇಂಗಳೂರು ಸೇರಿ ಹನುಮಂತನಗರದಲ್ಲಿ ಅವರ ಅಣ್ಣನನ್ನು ಭೇಟಿ ಮಾಡಬೇಕೆಂದು ವೇಗವಾಗಿ ಕಾರನ್ನು ಓಡಿಸಿದರೂ, ನಿರ್ಧಿಷ್ಟ ಸ್ಥಳ ತಲುಪುವ ಹೊತ್ತಿಗೆ ಆಗಲೇ ೧೦ ಗಂಟೆಯಾಗಿತ್ತು.
ಸೌಭಾಗ್ಯಳ ಅಣ್ಣ ಶ್ರೀನಿವಾಸ ಆಫ಼ೀಸ್ಗೆ ಹೊರಡುವುದೆ ೧೦ ಗಂಟೆಗೆ ಅಷ್ಟರೊಳಗೆ ಅವರನ್ನು ಹಿಡಿಯಬೇಕೆಂಬ ಪ್ರಯತ್ನ ನರಸಿಂಹನದು. ಮನೆ ಬಾಗಿಲಿಗೆ ಬಂದ ಅತಿಥಿಗಳಿಗೆ ನಿರಾಸೆಯಾಯ್ತು, ಕಾರಣ ಮನೆ ಬಾಗಿಲಿಗೆ ಬೀಗ ಹಾಕಿದೆ.
ಛೇ... ಎಂದು ಕೊಂಡು ಹೊರಬಂದ ನರಸಿಂಹ, ಅಷ್ಟರಲ್ಲಿ ಕಾರ್ ಪಾರ್ಕ್ ಮಾಡಿದ್ದ ಚಂದ್ರಶೇಖರ ಸಪ್ಪೆ ಮುಖದ ನರಸಿಂಹನನ್ನು ನೋಡಿ ‘ಏಕೆ ಏನಾಯ್ತು, ಸಿಗ್ಲಿಲ್ವಾ‘ - ಅಂದ. ನಕಾರಾತ್ಮಕವಾಗಿ ತಲೆ ಅಲ್ಲಾಡಿಸಿದ ನರಸಿಂಹ.
ಅಷ್ಟರಲ್ಲಿ ಪಕ್ಕದ ಮನೆಯ ಕಾಂಪೌಂಡಿನಲ್ಲಿ ನಿಂತು, ಇಡಿ ರಸ್ತೆಯ ಉಸ್ತುವಾರಿ ಎಲ್ಲಾ ತನ್ನದೆ ಎನ್ನುವಂತೆ ನೋಡುತ್ತಿದ್ದ ಯಜಮಾನರು - ‘ಯಾರು ನೀವು ಏನ್ಬೇಕಾಗಿತ್ತು?‘ - ಅಂದ್ರು. ‘ನಾವು, ಇಲ್ಲಿ ಶ್ರೀನಿವಾಸ್ ಅಂತ ಇದ್ರಲ್ಲ ಅವರ ಭಾ..‘ - ಅಷ್ಟರಲ್ಲಿ ಚಂದ್ರಶೇಖರ, ನರಸಿಂಹನ ಕೈ ಹಿಡಿದು ತಡೆದು, ‘ಅವರ ದೂರದ ಬಂಧುಗಳು, ಹೀಗೆ ಬೆಂಗಳೂರಿಗೆ ಬಂದಿದ್ವು ನೋಡ್ಕೊಂಡು ಹೋಗೋಣ ಅಂಥ..‘ - ‘ಓ.. ಆ ಅಣ್ಣ ತಂಗಿ ಇದ್ರಲ್ಲ ಆ ಶ್ರೀನಿವಾಸಾ... ಅವ್ರು ಈಗ ಇಲ್ಲಿಲ್ಲ, ಅವರ ತಂಗಿ ಮದುವೆ ಆದ್ಮೇಲೆ ಬೇರೆ ಯಾವ್ದೋ ಕೆಲಸ ಸಿಗ್ತು, ಇಲ್ಲಿಂದ ಓಡಾಡೋದು ದೂರ ಅಲ್ಲಿಗೆ ಶಿಫ಼್ಟ್ ಆಗ್ತೀನಿ ಅಂತ ಮನೆ ಖಾಲಿ ಮಾಡ್ಬಿಟ್ರು‘ - ಅಂದ್ರು ಯಜಮಾನರು. ನರಸಿಂಹ, ಚಂದ್ರಶೇಖರ ಒಬ್ಬರನ್ನೊಬ್ಬರು ಮುಖ ಮುಖ ನೋಡಿಕೊಂಡ್ರು. ಮುಂದೇನು ಅನ್ನುವಂತಿತ್ತು ಪರಸ್ಪರ ಅವರ ನೋಟ. - ‘ಹೌದು ಯಾವ ಹೊಸ ಕಂಪನಿ ಏನು ಕೆಲ್ಸ ಅಂತ ಏನಾದ್ರೂ ಹೇಳಿದ್ರಾ?‘ - ‘ಅದೇನೊ ಪವರ್ ಸಿಸ್ಟಂ ಕಂಪನಿ ಅಂತಿದ್ರು ನಂಗೆ ಸರಿಯಾಗಿ ಗೊತ್ತಿಲ್ರಪ್ಪ, ಯಾಕೆ ಅವರ ಮೊಬೈಲ್ಗೆ ಕಾಲ್ ಮಾಡಿ‘ - ಅಂತ ಸಲಹೆ ಕೊಟ್ರು ಯಜ್ಮಾನ್ರು. - ‘ಅದೆ ಕಷ್ಟ ಆಗಿರೋದು ಅವರ ಹತ್ರ ಮೊಬೈಲ್ ಇಲ್ಲ‘ - ‘ಏನು ಈ ಕಾಲ್ದಲ್ಲೂ ಮೊಬೈಲ್ ಇಲ್ದಿದ್ದೋರು ಇದಾರಾ?, ನನ್ನ ಕೈಲಿ ನೋಡಿ ನನ್ನ ಮಗ ಕೊಡ್ಸಿರೋದು ಒಂದು, ಮೊಮ್ಮಗ ಕೊಡ್ಸಿರೋದು ಇನ್ನೊಂದು, ಇದು ಇದ್ಯಲ್ಲ ಅಮೇರಿಕಾಯಿಂದ ನನ್ನ.. ‘ - ಇನ್ನು ಏನೇನೊ ಹೇಳ್ಬೇಕಂತ ಇದ್ರೊ ಯಜಮಾನ್ರು, ಕೇಳುವ ವ್ಯವದಾನವಿಲ್ಲದ ಚಂದ್ರಶೇಖರ - ‘ಅಲ್ಲ ಯಾವ ಕಂಪನಿ ನಿಮಗೆ ಹೆಸರು ಜ್ನಾಪಕ ಇಲ್ವಾ ಸಾರ್‘ - ‘ಅದೆಂತದೊ ಆವೆನ್ಸೊ ಪವೆನ್ಸೊ ಏನೊ ಒಟ್ನಲ್ಲಿ ಪವರ್ ಸಿಸ್ಟೆಮ್ ಅಂತ ಗೊತ್ತಪ್ಪ, ನೀವು ಒಂದು ಕೆಲಸ ಮಾಡಿ ಪೀಣ್ಯಾ ಇಂಡಸ್ಟ್ರಿಯಲ್ ಏರಿಯಾಗೊ ಅಥವ ಬೊಮ್ಮಸಂದ್ರ ಇಂಡಸ್ಟ್ರಿಯಲ್ ಏರಿಯಾಗೋ ಹೋಗಿ ಅಲ್ಲಿ ಸ್ವಲ್ಪ ವಿಚಾರ್ಸಿದ್ರೆ ಸಿಗ್ತಾರೆ ಅನ್ಸುತ್ತೆ‘- ‘ಆಯ್ತು ಸಾರ್ ತುಂಬ ಉಪ್ಕಾರ ಆಯ್ತು ಬರ್ತೀವಿ‘ ಅಂದೋರೆ ಅಲ್ಲಿಂದ ಹೊರಡುವುದರಲ್ಲಿದ್ದರು, ಹಿಂತಿರುಗಿದ ನರಸಿಂಹ - ‘ ಏನ್ಸಾರ್ ಎಷ್ಟು ದಿನ ಆಯ್ತು ಮನೆ ಖಾಲಿ ಮಾಡಿ‘ - ‘ಮ್...... ಈಗ ಒಂದೊಂದೂವರೆ ತಿಂಗ್ಳು ಆಗಿರ್ಬೇಕು ಅಂನ್ಕೋತಿನಿ‘- ‘ಸರಿ ಸಾರ್ ತ್ಯಾನ್ಕ್ಸ್‘ -
‘ಈಗೇನ್ ಮಾಡೋದೊ ನರಸಿಂಹ ಆಸಾಮಿ ಪತ್ತೇನೆ ಇದ್ದ ಹಾಗೆ ಇಲ್ಲ‘ - ‘ಒಂದು ಕೆಲ್ಸ ಮಾಡೋಣ ಅಪ್ಪಂಗೆ ಫ಼ೋನ್ ಮಾಡಿ ಆ ಭ್ರೋಕರ್ ವರದರಾಜು ಕಡೆಯಿಂದ ಏನಾದ್ರೂ ಲಿಂಕ್ ಸಿಗುತ್ತಾ ಅಂತ ನೋಡೋಣ‘ - ಅಂದವನೆ ಊರಿನ ಮನೆ ನಂಬರ್ಗೆ ಫ಼ೋನಾಯಿಸಿದ. ಆ ಕಡೆಯಿಂದ ಸುಬ್ರಾಯ ಭಟ್ರು ‘ಯಾರದು‘ - ‘ಅಪ್ಪ ನಾನು ನರಸಿಂಹ, ಇಲ್ಲಿ ಅವಳಣ್ಣ ಇದ್ದ ಮನೆ ಖಾಲಿ ಮಾಡಿದ್ದಾರೆ, ಮೊದಲಿದ್ದ ಕೆಲ್ಸವನ್ನು ಬಿಟ್ಟಿದ್ದಾರಂತೆ, ಏನೋ ವಿಚಿತ್ರವಾಗಿದೆ, ಏನೂ ತೋಚ್ತಾ ಇಲ್ಲ, ಅದಕ್ಕೆ ಆ ವರದರಾಜು ನಂಬರ್ ಇದ್ರೆ ಅವರನ್ನಾದರೂ ಕೇಳಿ ನೋಡೋಣ ಅಂತ‘ - ‘ಹೌದಾ, ಬದಲಾವಣೆ ಮಾಡಿದ್ರೆ ಮಾಡ್ಕೊಳ್ಲಿ ನಮಗೆ ವಿಷ್ಯ ತಿಳಿಸ್ಬೇಕು ಅಂತಾನೂ ಗೊತ್ತಾಗೊಲ್ವಾ ಈ ಮನುಷ್ಯನಿಗೆ,
ಆ ವರದರಾಜು ನಂಬರ್ ಮಾಡಿದ್ರೂ ಏನೂ ಉಪಯೋಗ ಇಲ್ಲಪ್ಪ, ನಾನು ನೆನ್ನೆನೇ ಮಾಡಿದ್ದೆ, ನಂಬರ್ ಚಾಲ್ತಿಯಲಿಲ್ಲ ಅನ್ನುತ್ತೆ., ದೇವರ ಮೇಲೆ ಭರವಸೆ ಇಡು ಮಗು, ಒಮ್ಮೆ ಆ ಪಕ್ಕದಮನೆಯವರು ಹೇಳಿದ ಹಾಗೆ ಪೀಣ್ಯಾ ಹತ್ರ ಹೋಗಿ ಸ್ವಲ್ಪ ಸೌಭಾಗ್ಯಳ ಅಣ್ಣನ ಬಗ್ಗೆ ವಿಚಾರ್ಸಿ ನೋಡಿ, ಇವತ್ತು ಸಂಜೆಯವರಗೂ ಯಾವುದೆ ಮಾಹಿತಿ ಸಿಗದಿದ್ದರೆ, ಮುಂದಿನ ದಾರಿ ಯೋಚಿಸೋಣ‘. - ಇಷ್ಟು ಹೇಳಿ ಫ಼ೋನ್ ಕೆಳಗಿಟ್ಟ ಸುಬ್ಬರಾಯರಿಗೂ ಕ್ಷಣಕಾಲ ಮನಸ್ಸಿನಲ್ಲಿದ್ದ ದೈರ್ಯ ಅಲುಗಾಡಿತು. ನರಸಿಂಹ ದೇವರ ರಕ್ಷಾ ಕವಚವನ್ನು ಮನಸ್ಸಿನಲ್ಲೇ ಪಠಿಸಲು ಪ್ರಾರಂಭಿಸಿದರು.
ಇಬ್ಬರೂ ಪೀಣ್ಯಾ ಕಡೆ ಮೊದಲು ಹೋಗಿ ನೋಡೋಣ ಅಂತ ನಿರ್ಧಾರ ಮಾಡಿದವರು, ಬೆಳಿಗ್ಗೆಯಿಂದ ಹೊಟ್ಟೆಗಿಲ್ಲ ಮೊದಲು ಸ್ವಲ್ಪ ಆಹಾರ ಸೇವಿಸೋಣ, ಇಲ್ಲದಿದ್ದರೆ ಯೋಚಿಸಲೂ ಶಕ್ತಿ ಇರುವುದಿಲ್ಲ ಎಂದು ಹೋಟೆಲ್ ಹೊಕ್ಕು ಆತ್ಮಾರಾಮನನ್ನು ಸಂತೈಸಿದರು.ಪರಿಸ್ಠಿತಿ ಹೇಗಾಗುತ್ತದೊ ಇರಲಿ ಎಂದು ಮನದಲ್ಲಿ ಆಲೋಚಿಸಿ ಅಲ್ಲಿಯೆ ಪಕ್ಕದಲ್ಲಿದ್ದ ಅಂಗಡಿಯಿಂದ ಬಾಳೆ ಹಣ್ಣನ್ನೂ ಒಂದೆರಡು ಬಾಟೆಲ್ ನೀರನ್ನೂ ತೆಗೆದು ಕೊಂಡ ಚಂದ್ರಶೇಖರ.
ಸುಮಾರು ಕಡೆ ವಿಚಾರಿಸಿ ಕೊನೆಗೆ ಪೀಣ್ಯಾ ೨ ನೆ ಘಟ್ಟದಲ್ಲಿದ್ದ ಅವೆನ್ಸ್ ಯುನಿವರ್ಸೆಲ್ ಪವರ್ ಸಿಸ್ಟೆಮ್ ಅನ್ನುವ ದೊಡ್ಡ ಕಟ್ಟಡದ ಮುಂದೆ ಬಂದು ನಿಂತಾಗ ಆಗಲೆ ಮದ್ಯಾಹ್ನ ೩-೩೦ ಗಂಟೆಯಾಗಿತ್ತು. ಮುಂಬಾಗಿಲಿನ ಗೇಟಿನ ಬಳಿ ಇದ್ದ ಸೆಕ್ಯುರಿಟಿ ಗಾರ್ಡ್ - ‘ ಕೌನ್ ಚಾಹಿಯೆ ಆಪ್ಕು, ಸಾಬ್ ಗಾಡಿ ಜ಼ರ ಉದರ್ ಡಾಲಿಯೆ ಯಹಾ ಪಾರ್ಕಿಂಗ್ ನಹಿ ಹೈ‘ - ಅಂದ. ಸರಿಯಾದ ಕಡೆ ಕಾರ್ ನಿಲ್ಲಿಸಿ ಇಬ್ಬರೂ ಇಳಿದು ಬಂದರು, ‘ಹಾ ಬೋಲಿಯೆ ಸಾಬ್‘- ‘ಸೀ ಒನ್ ಮಿಸ್ಟರ್ ಶೀನಿವಾಸ್, ನಿವ್ಲೀ ಜಾಯಿಂಡ್, ಜೆಸ್ಟ ಬಿಫ಼ೋರ್ ಒನ್ ಮನ್ತ್, ವಿ ಹ್ಯಾವ್ ಟು ಮೀಟ್ ಹಿಮ್, ಅಂಡ್ ವಿ ಆರ್ ಕಮಿಂಗ್ ಫ಼್ರಂ ಹಿಸ್ ನೇಟೀವ್.‘ - ನರಸಿಂಹ ಉತ್ತರಿಸಿದ. - ‘ಶ್ರಿನಿವಾಸ್ ನಿವ್ಲಿ ಜಯಿಂಡ್, ಕೌನ್ಸಿ ಡಿಪಾರ್ಟ್ಮೇಮ್ಟ್‘ - ‘ಐ ಥಿಂಕ್ ಮ್ಯಕಾನಿಕಲ್ ಡಿಪಾರ್ಟ್ಮೆಂಟ್‘ - ‘ಆಪ್ ಉದರ್ ಬೈಟಿಯೆ ಮೈ ದೇಕ್ತಾವು, ಆಪ್ಕಾ ನಾಮ್ ಔರ್ ಪತಾ ಬತಾಯಿಯೆ‘ - ‘ಇವ್ನು ಏನ್ ದೇಕ್ತಾನೊ ಏನೊ ನಂಗಂತು ತಲೆ ಕೆಟ್ಟು ಹೋಗಿದೆ ಅನ್ಕೊಂಡ ನರಸಿಂಹ. ಸುಮಾರು ಒಂದೂವರೆ ಗಂಟೆ ಕಳೆದ ಮೇಲೆ ಒಳಗಿನಿಂದ ಮತ್ತೊಬ್ಬ ಸೆಕ್ಯುರಿಟಿ ಬಂದವನೆ, - ‘ಹೂ ಇಜ಼್ ಮಿಸ್ಟರ್ ನರಸಿಂಹ,‘ - ‘ಯೆಸ್ ಮೈ ಸೆಲ್ಫ಼್‘ - ‘ಸಾರ್ ಆಕ್ಚುಯಲಿ ಬೈ ನೇಮ್ ಮಿಸ್ಟರ್ ಶ್ರೀನಿವಾಸ್ ನಾಟ್ ಫ಼ೌಂಡ್ ಹಿಯರ್ ಇನ್ ದ ಸೈಟ್, ಎನಿ ಹೌ ವಿ ವಿಲ್ಲ್ ಹ್ಯಾವ್ ಯುವರ್ ಕಾಂಟಾಕ್ಟ್ ನಂಬರ್ ಇಫ಼್ ವಿ ಲೋಕೇಟ್ ಹಿಂ ಎನಿವೇರ್ ಇನ್ ಅವರ್ ಬ್ರಾಂಚ್ ಆಫ಼ೀಸಸ್ ಆಫ಼್ ದ ವರ್ಲ್ಡ್, ಇಟ್ ವಿಲ್ ಬಿ ಇಂಟಿಮೇಟೆಡ್, ಅಂಡ್ ಹಿ ವಿಲ್ ಕಾಲ್ ಯು ಬ್ಯಾಕ್ ವಿತಿನ್ ೨೪ ಹವರ್ಸ್ ಸಾರ್ ಪ್ಲೀಸ್ ಲೀವ್ ಯುವರ್ ಕಾನ್ಟಾಕ್ಟ್ ನಂಬರ್ ಸಾರ್‘ - ‘ಕೆನ್ ಯು ಗೀವ್ ಹಿಸ್ ಮೊಬೈಲ್ ನಂಬರ್ ಪ್ಲೀಸ್‘ - ‘ಸಾರಿ ಸಾರ್ ವಿ ಕೆನಾಟ್ ಗೀವ್, ಸೆಕ್ಯುರಿಟಿ ರೀಸನ್ಸ್‘ - ‘ಒಳ್ಳೆ ಕರ್ಮ ಆಯ್ತು, ಸರಿ ತಗೋಳಿ, ಒಕೆ ಪ್ಲೀಸ್ ನೋಟ್ ದ ನಂಬರ್‘ ಎಂದವನೆ ತನ್ನ ಮೊಬೈಲ್ ಹಾಗು ಮನೆಯ ನಂಬರ್ ಕೊಟ್ಟ ನರಸಿಂಹ.
ಆವರಣದಿಂದ ಹೊರ ಬಂದವರಿಗೆ ಮುಂದೇನು ಅನ್ನುವದು ದೊಡ್ಡ ಪ್ರಶ್ನಾರ್ಥಕ ಚಿನ್ಹೆಯಾಗಿತ್ತು. ಬೆಳಿಗ್ಗೆಯಿಂದ ಒಂದೇ ಸಮನೆ ಅಲೆಯುತ್ತಿದ್ದರೂ ಗುರಿ ತೋರುವ ಯಾವ ದಾರಿಯೂ ಕಾಣಿಸುತ್ತಿಲ್ಲ. ಅರಸಿ ಹೋದ ಕಡೆಯೆಲ್ಲ ಹೊಡೆದ ಬಾಣ ಮರಳಿ ಬರುತಿದೆ. ಏನು ಮಾಡುವುದು?...... ಏನು ಮಾಡುವುದು?..... ಮತ್ತದೇ ಮಾನಸಿಕ ಹಿಂಸೆ. ಒಬ್ಬರ ಮುಖ ಒಬ್ಬರು ನೋಡಿಕೊಂಡರು.
ಚಂದ್ರಶೇಖರ ಕಾರಿನ ಚಾಲಕನ ಸ್ಥಾನದಲ್ಲಿ ಆಸೀನನಾಗಿ ದೀರ್ಘವಾದ ನಿಟ್ಟುಸಿರು ಬಿಟ್ಟ. ‘ಮಹಾಲಕ್ಷ್ಮಿ ಲೇಔಟ್ನಲ್ಲಿ ನಮ್ಮಪ್ಪನ ಸ್ನೇಹಿತರ ಮನೆ ಇದೆ, ಅದೆ ಅವರ ಮಗನ ಮದುವೆಗೆ ಬಂದಾಗ ಆ ವರದಾರಾಜು ಭ್ರೋಕರ್ ಪರಿಚಯವಾಗಿತ್ತಲ್ಲ, ಅವರ ಮನೆಗೆ ಹೋಗಿ ನೋಡೋಣ, ಅವರ ಬಳಿ ವರದರಾಜುದು ಬೇರೆ ಏನಾದ್ರೂ ಕಾಂಟ್ಯಾಕ್ಟ್ ಸಿಗಿತ್ತಾ ಅಂತ‘- ‘ಅಲಪ್ಪ ನರಸಿಂಹ ಈಗ ಅವರು ಸಿಕ್ರುತಾನೆ ಏನು ಉಪಯೋಗ?‘ - ‘ಗೊತ್ತಿಲ್ಲ, ಏನಾದ್ರೂ ಸಿಗ್ಬಹುದೇನೊ ಅಂತ ಆಸೆ‘ - ‘ಸರಿ ಅದೂ ಆಗ್ಲಿ‘ - ಅಂದವನೆ ಎಂಜಿನ್ ಸ್ಟಾರ್ಟ್ ಮಾಡಿದ ಚಂದ್ರಶೇಖರ.
ಜಾಲಹಳ್ಳಿ ಕ್ರಾಸ್ ದಾಟಿ ಗೊರಗೊಂಟೆಪಾಳ್ಯದ ಬಳಿ ಬಲ ತಿರುವು ಪಡೆದು ಅಲ್ಲಿಂದ ಮಹಾಲಕ್ಷ್ಮಿ ಲೇಔಟ್ ತಲುಪಲು ಕಾರು ಪ್ರಯಾಣಿಸುತ್ತಿದೆ ಅಷ್ಟೆ, ಇಬ್ಬರ ಮನಸ್ಸೂ ಆ ಕಾಯಗಳಲ್ಲಿಲ್ಲ, ಮಂದಗತಿಯ ಚಾಲನೆ ಮಾಡುತ್ತಿದ್ದಾನೆ ಚಂದ್ರಶೇಖರ. ಇಬ್ಬರೂ ದೀರ್ಘಾಲೋಚನೆಯಲ್ಲಿ ಮುಳುಗಿದ್ದಾರೆ. ಕಾರು ಗೊರಗೊಂಟೆ ಪಾಳ್ಯದ ಬಳಿ ಬಲತಿರುವು ಪಡೆದು ಮುಂದೆ ಹೊರಟಿತು.
ನಿಟ್ಟುಸಿರುಬಿಟ್ಟು ಮತ್ತೊಂದು ದೀರ್ಘ ಉಸಿರು ತೆಗೆದುಕೊಂಡ ನರಸಿಂಹ, ಆಯಾಸಕ್ಕೊ ಏನೊ ಕುಳಿತ್ತಿದ್ದ ಆಸನದ ಹಿಂದಕ್ಕೆ ತಲೆ ಒರಗಿಸಿ ಕಣ್ಣು ಮುಚ್ಚಿದ.
ಎರಡು ಮೂರು ನಿಮಿಷ ಕಳೆದಿರಬೇಕು, ನಿದಾನವಾಗಿ ಕಣ್ಣು ಬಿಟ್ಟ ನರಸಿಂಹ, ಮುಂದೆ ಒಂದು ಕಾರು ಚಲಿಸುತ್ತಿದೆ. ಹಾಗೆ ಸುಮ್ಮನೆ ಆ ಕಾರನ್ನು ಗಮನಿಸುತ್ತಿದ್ದ, ಹೋಂಡಾಸಿಟಿ ಕಾರು, ನಿಧಾನವಾಗಿ ಕಾರಿನ ನಂಬರ್ ಗಮನಿಸಿದ, ಮನಸ್ಸಿನಲ್ಲೇ ಓದಿದ ಸಿ-೦೧೦೨.. ಮತ್ತೊಮ್ಮೆ ಸಿ-೦೧೦೨, ನರಸಿಂಹನ ಮೆದುಳಿನಲ್ಲಿ ಮಿಂಚಿನ ವಿದ್ಯುತ್ ಸಂಚಾರವಾಯ್ತು - ‘ಎಸ್ ಎಸ್ ಎಸ್ ಸಿ-೦೧೦೨ ಅದೇ ನಂಬರ್‘ - ಎಂದು ಜೋರಾಗಿ ಹೇಳುತ್ತಾ ತನ್ನ ಪ್ಯಾಂಟಿನ ಎಡಗಡೆ ಜೇಬಿನಿಂದ ಹರಿದ ಕಾಗದದ ತುಂಡೊಂದನ್ನು ತೆಗೆದು - ‘ಕರೆಕ್ಟ್ ಅದೇ ನಂಬರ್, ಚಂದ್ರು ಮುಂದೆ ಹೋಗುತ್ತಿರುವ ಆ ಹೋಂಡಾಸಿಟಿ ಕಾರನ್ನು ಫ಼ಾಲೋ ಮಾಡು‘ - ಅಂದ ನರಸಿಂಹ - ‘ಏಕೆ ಅದರೊಳಗೆ ಏನಿದೆ? ಆ ನಂಬರ್ ನೋಡಿದ್ರೆ ಅದು ಹಾಸನ ರಿಜಿಸ್ಟ್ರೇಷನ್ ಇದ್ದಹಾಗಿದೆ, ಅದರ ಹಿಂದೆ ಹೋಗಿ ಏನು ಮಾಡೋದು, ಮಹಾಲಕ್ಷ್ಮಿ ಲೇಔಟ್ಗೆ ಹೋಗೋಣ ಅಂತಿದ್ಯಲ್ಲ,.‘ - ‘ಬೇಡ ಈ ಕಾರನ್ನು ಹಿಂಬಾಲಿಸೋಣ‘ - ‘ಅಲ್ಲಪ್ಪ ಅದಕ್ಕೆ ಏನಾದರೂ ಸರಿಯಾದ ಕಾರಣ ಇರಬೇಕಲ್ಲ ಸುಮ್ಮನೆ ಯಾವುದೊ ನಂಬರ್ ನೋಡಿ ನಂಬರ್ ಗೇಮ್ ಆಡುವ ಹಾಗೆ ಅದರ ಹಿಂದೆ ಹೋಗೋಣ ಅಂದ್ರೆ, ನಿಂಗೆಲ್ಲೊ ತಲೆ ಕೆಟ್ಟಿದೆ ಅಷ್ಟೆ ಏನೇನೊ ಯೋಚನೆ ಮಾಡ್ತಿದ್ದೀಯ‘ - ‘ಇಲ್ಲ ಚಂದ್ರು ನಿನಗೆ ಗೊತ್ತಿಲ್ಲ, ನೆನ್ನೆ ಮನೆಯಲ್ಲಿ ಮಾತನಾಡಿ ನೀನು ಹೊರಟ ಮೇಲೆ ನಾನು ನಮ್ಮ ಮನೆಯ ಹಿತ್ತಲಿಗೆ ಹೋಗಿ ಅಲ್ಲಿ ಏನಾದ್ರೂ ಕ್ಲೂ ಸಿಗುತ್ತಾ ಅಂತ ಹುಡುಕ್ತಿದ್ದೆ, ನಿನಗೆ ಗೊತ್ತಲ್ಲ ನಂಮನೆ ಹಿತ್ತಲು ತುಂಬ ದೊಡ್ಡದು, ಬಾಗಿಲಿನಿಂದ ಸುಮಾರು ದೂರ ನಡೆದರೆ ಅಲ್ಲಿ ಕಾಂಪೌಂಡಿನ ಕೊನೆ, ಅಲ್ಲಿರುವ ಮರದ ಗೇಟನ್ನು ತೆಗೆದು ಹೊರಗೆ ಹೋದರೆ ಅಲ್ಲಿರುವ ಸಣ್ಣ ಕೂಡು ರಸ್ತೆ, ಆ ಮರದ ಗೇಟಿನಿಂದ ಹೊರಗೆ ಹೋಗಿ ನೋಡುತ್ತಿದ್ದಾಗ, ಅಲ್ಲಿಗೆ ಯಾವುದೋ ಕಾರು ಬಂದು ನಿಂತು, ಹಾಗೆ ಹಿಂದಕ್ಕೆ ಹೋಗಿದ್ದ ಗುರುತುಗಳು ಕಾಣಿಸಿತು, ಟಯರ್ಗಳ ಗುರುತು ನೋಡಿ ಯಾವುದೊ ದೊಡ್ಡಕಾರೆ, ಯಾವುದಿದು ಅಂದುಕೊಂಡೆ, ಅಲ್ಲಿಯೆ ಬೇಲಿಯ ಗಿಡದ ಕೆಳಗೆ ಹರಿದ ಕಾಗದದ ಚೂರುಗಳನ್ನು ಗಮನಿಸಿದೆ, ಅಲಿದ್ದ ಎಲ್ಲ ಚೂರುಳನ್ನು ಸೇರಿ ಓದಲೂ ಪ್ರಯತ್ನಿಸಿದೆ, ಆದರೆ ಏನೂ ಗೊತ್ತಾಗಲಿಲ್ಲ, ಆದರೆ ಈ ಒಂದು ತುಂಡಿನಲ್ಲಿ ಕೇವಲ ಸಿ-೦೧೦೨ ಮಾತ್ರ ಸಿಗ್ತು, ಏನೂ ಅರ್ಥವಾಗಲಿಲ್ಲ, ನೋಡಿದರೆ ಸೌಭಾಗ್ಯಳ ಹ್ಯಾಂಡ್ ರೈಟಿಂಗ್ ಇದ್ದ ಹಾಗಿತ್ತು ಹಾಗಾಗಿ ತೆಗೆದಿಟ್ಟು ಕೊಂಡಿದ್ದೆ, ಈಗ ಅದೇ ನಂಬರ್ನ ಕಾರು, ನನಗನ್ನಿಸುತ್ತೆ ಏನಾದರೂ ಕ್ಲೂ ಸಿಗಬಹುದು, ನಿನು ಸುಮ್ಮನೆ ನನ್ನ ಮಾತು ಕೇಳು‘ - ‘ಹೌದಾ ನೀನು ನನಗೆ ಈ ವಿಷಯ ಹೇಳಿರಲೇ ಇಲ್ಲ‘ - ‘ಬರಿ ಗೊಂದಲದಗೂಡಾಗಿರುವ ಈ ಸಮಸ್ಯೆಯಲ್ಲಿ ಯವುದನ್ನು ಯಾರಿಗೆ ಹೇಳುವುದು ಏನೂ ತೋಚಲ್ಲ ಅಲ್ವೇನೂ?‘ - ‘ಸರಿ ಇದ್ದಿದ್ದರಲಿ ಇಲ್ಲಿ ಏನೋ ಒಂದು ಸಣ್ಣ ಬೆಳಕು ಕಾಣುತ್ತಿದೆ, ನೋಡೋಣ ಇದೇನು ಬೆಳಗುವ ಸೂರ್ಯ ಕಿರಣವೊ ಇಲ್ಲ ಇದೂ ಆಕಾಶ ಬುಟ್ಟಿಯೊ‘ - ಅಂದ ಚಂದ್ರಶೇಖರ.
Comments
ಉ: ಸೊಸೆ(ತಂದ) ಸೌಭಾಗ್ಯ - ಕೊನೆಯಾಗುವ ಮುನ್ನ
In reply to ಉ: ಸೊಸೆ(ತಂದ) ಸೌಭಾಗ್ಯ - ಕೊನೆಯಾಗುವ ಮುನ್ನ by Chikku123
ಉ: ಸೊಸೆ(ತಂದ) ಸೌಭಾಗ್ಯ - ಕೊನೆಯಾಗುವ ಮುನ್ನ
ಉ: ಸೊಸೆ(ತಂದ) ಸೌಭಾಗ್ಯ - ಕೊನೆಯಾಗುವ ಮುನ್ನ
In reply to ಉ: ಸೊಸೆ(ತಂದ) ಸೌಭಾಗ್ಯ - ಕೊನೆಯಾಗುವ ಮುನ್ನ by kavinagaraj
ಉ: ಸೊಸೆ(ತಂದ) ಸೌಭಾಗ್ಯ - ಕೊನೆಯಾಗುವ ಮುನ್ನ
ಉ: ಸೊಸೆ(ತಂದ) ಸೌಭಾಗ್ಯ - ಕೊನೆಯಾಗುವ ಮುನ್ನ
In reply to ಉ: ಸೊಸೆ(ತಂದ) ಸೌಭಾಗ್ಯ - ಕೊನೆಯಾಗುವ ಮುನ್ನ by krishnarajb
ಉ: ಸೊಸೆ(ತಂದ) ಸೌಭಾಗ್ಯ - ಕೊನೆಯಾಗುವ ಮುನ್ನ
ಉ: ಸೊಸೆ(ತಂದ) ಸೌಭಾಗ್ಯ - ಕೊನೆಯಾಗುವ ಮುನ್ನ
ಉ: ಸೊಸೆ(ತಂದ) ಸೌಭಾಗ್ಯ - ಕೊನೆಯಾಗುವ ಮುನ್ನ
In reply to ಉ: ಸೊಸೆ(ತಂದ) ಸೌಭಾಗ್ಯ - ಕೊನೆಯಾಗುವ ಮುನ್ನ by gowri parthasarathy
ಉ: ಸೊಸೆ(ತಂದ) ಸೌಭಾಗ್ಯ - ಕೊನೆಯಾಗುವ ಮುನ್ನ
In reply to ಉ: ಸೊಸೆ(ತಂದ) ಸೌಭಾಗ್ಯ - ಕೊನೆಯಾಗುವ ಮುನ್ನ by ಗಣೇಶ
ಉ: ಸೊಸೆ(ತಂದ) ಸೌಭಾಗ್ಯ - ಕೊನೆಯಾಗುವ ಮುನ್ನ