"ಸೌತ್ ಇಂಡಿಯನ್ಸ್ ಆರ್ ರಫ್ ಇನ್ ಸ್ಪೀಕಿಂಗ್ " ನಾರ್ತಿ ತಾತನ ಉವಾಚ

"ಸೌತ್ ಇಂಡಿಯನ್ಸ್ ಆರ್ ರಫ್ ಇನ್ ಸ್ಪೀಕಿಂಗ್ " ನಾರ್ತಿ ತಾತನ ಉವಾಚ

ನೆನ್ನೆ ಒಬ್ಬರು ಫೋನ್ ಮಾಡಿದ್ದರು. ಫೋನ್ ನಲ್ಲಿ ಮಾತಾಡುತ್ತಲೆ ಅದು ಯಾವುದೋ ನಾರ್ತ್ ಇಂಡಿಯಾದಿರಬಹುದೆಂದಕೊಂಡೆ.
ತಮ್ಮ ಹೆಂಡತಿಗೆ ಇಂಗ್ಲೀಷ್ ಕಲಿಸಬೇಕೆಂದು ಕೋರಿದರು.
ದ್ವನಿಯಲ್ಲಿಯೇ ಸಾಕಷ್ಟು ದರ್ಪವಿರುವುದು ತಿಳಿಯಿತು.ಕೆಲವರ ಮಾತೆ ಈ ರೀತಿ ಇರುತ್ತದೆ. ನಾನೇನು ಬೇಸರಿಸಿಕೊಳ್ಳಲಿಲ್ಲ.
ನೆನ್ನೆ ಸಾಯಂಕಾಲ ಬಂದರು
ವಯಸ್ಸಾದವರು.
ನೋಡಿದೊಡನೆ ಅತೀವ ಅಹಂಕಾರವಿರುವುದು ತಿಳಿಯಿತು.
"ಸೀ ಮೈ ವೈಫ್ ನೀಡ್ ನಾಟ್ ವರ್ಕ್ ಅನಿ ವೇ ವಾಟ್ ಐ ವಾಂಟ್ ಈಸ್ ಶಿ ಶುಡ್ ಲರ್ನ್ ಇಂಗ್ಲೀಷ್" ಎಂದರು.
ನಾನು ನಮ್ಮ ನಾರ್ಮ್ಸ್ ಮತ್ತು ಕಂಡೀಶನ್ಸ್ ಹೇಳಿದೆ
"ಹೂ ಇಸ್ ದ ಫಾಕಲ್ಟಿ?" ಎಂದು ಕೇಳಿದರು
ನಾನು ಹೆಸರು ಹೇಳಿದೆ
"ಈಸ್ ಹಿ ಫ್ರಮ್ ನಾರ್ತ್ ಇಂಡಿಯಾ?" ಮತ್ಗ್ತೊಮ್ಮೆ ಪ್ರಶ್ನೆ
"ನೋ ಹಿ ಈಸ್ ಫ್ರಮ್ ಕರ್ನಾಟಕ," ನಾನು
" ದೆನ್ ಐ ಕಾಂಟ್ ಸೆಂಡ್ ಮೈವೈಫ್ .ಇಫ್ ಯು ಹ್ಯಾವ್ ಸಮ್ ಬಡಿ ಫ್ರಮ್ ನಾರ್ತ್ ಐ ಕ್ಯಾನ್ ಅಡ್ಮಿಟ್ ಹರ್" ತಾತನ ಮಾತು ಕೆರಳಿಸಿತು
"ಸೀ ವಿ ಹ್ಯಾವ್ ಡಿಫ್ರೆಂಟ್ ಸ್ಟುಡೆಂಟ್ಸ್ . ವಿ ಕಾಂಟ್ ಅರೇಂಜ್ ಪರ್ಟಿಕ್ಯುಲರ್ ಫ್ಯಾಕಲ್ಟಿ ಫಾರ್ ಈಚ್ ಅಂಡ್ ಎವೆರಿಬಡಿ. ಆಫ್ಟರ್ ಆಲ್ ಶಿ ಹ್ಯಾಸ್ ಟು ಸ್ಪೀಕ್ ಇಂಗ್ಲೀಷ್ ಲೆಟ್ ಇಟ್
ಬಿ ಅನಿ ಬಡಿ. ದಟ್ ಶುಡ್ ನಾಟ್ ಬಾದರ್ ಯು"
" ಐ ಹ್ಯಾವ್ ಟು ಬಿ ಬಾದರ್ಡ್. ಯು ಸೌತ್ ಇಂಡಿಯನ್ಸ್ ಆರ್ ರಫ್ ಇನ್ ಸ್ಪೀಕಿಂಗ್. ಪ್ರಾಬಬಲಿ ದೆ ಡೋಂಟ್ ನೊ ಮ್ಯಾನರ್ಸ್"
ಪಿತ್ತ ಕೆರಳಿತು, ನಮ್ಮಲ್ಲಿಗೇ ಬಂದು ಎಲ್ಲರನ್ನು ಒಂದೇ ತಕ್ಕಡಿಯಲ್ಲಿ ನೂಕುತ್ತಿದ್ದರಲ್ಲ ಎಂದು. ಇನ್ಯಾರಾದರೂ ಆಗಿದ್ದಲ್ಲಿ ಬೇರೆ ರೀತಿಯಲ್ಲಿ ಹೇಳುತ್ತಿದ್ದೆ.
ವಯಸ್ಸಾದವರು ಎಂಬ ಕಾರಣಕ್ಕೆ ಸಮಾಧಾನದಿಂದ ಮಾತಾಡಿದೆ
"ಸೀ ಅಯಾಮ್ ಆಲ್ಸೊ ಫ್ರಮ್ ಕರ್ನಾಟಕ್ , ಡು ಯು ಫೀಲ್ that ಐ ಸ್ಪೀಕ್ ಹಾರ್ಶ್ಲಿ?"
"ಒಕೆ ಇಫ್ ಯು ಆರ್ ಟೇಕಿಂಗ್ ದ ಕ್ಲಾಸ್ ಐಯಾಮ್ ರೆಡಿ ಟು ಸೆಂಡ್. ಯು ಆರ್ ಓಕೆ"(ಅದೂ ಓಕೆ ಅಂತೆ, )
"ಬಟ್ ಐ ಡೋಂಟ್ ಟೇಕ್ ಅನಿ ಕ್ಲಾಸ್. ಐ ಹ್ಯಾವ್ ಸ್ಟಾಪ್ಪ್ಡ್ ಟೇಕಿಂಗ್ ಕ್ಲಾಸ್"
"ಡೋಂಟ್ ವರಿ ಅಬೌಟ್ ಮನಿ, ಐ ಕ್ಯಾನ್ ಪೇ ವಾಟೆವರ್ ಈಸ್ ಯುವರ್ ಚಾರ್ಜಸ್"
ಹೀಗೆ ಕೊಂಚ ಹೊತ್ತು ಮಾತಾಡಿದ ನಂತರ , ಹಣದ ದರ್ಪ ಸ್ವಲ್ಪ ಜಾಸ್ತಿಯೇ ಇರುವುದು ತಿಳಿಯಿತು. ಅಲ್ಲದೇ ಸೌತ್ ಇಂಡಿಯನ್ಸ್ ಬಗ್ಗೆ ಅಂತಹ
ಉತ್ತಮ ಅಭಿಪ್ರಾಯ ಹೊಂದಿಲ್ಲವೆಂಬುದೂ ತಿಳಿಯಿತು. ಮಾತು ಮಾತಿಗೆ ತಾನು ತನ್ನ ಅನುಭವವನ್ನು ಕೊಚ್ಚಿಕೊಳ್ಳುತ್ತಿದ್ದರು. ಪಾಪ ಅವರ ಹೆಂಡತಿ ಸುಮ್ಮನೆ
ಕುಳಿತಿದ್ದರು. ಅವರ ಜೊತೆ ಮಾತಾಡಲೂ ಬಿಡಲಿಲ್ಲ.
ಈ ತಾತನಿಗೆ ಬುದ್ದಿ ಕಲಿಸಲೇ ಬೇಕೆಂದು ನಿರ್ಧರಿಸಿದೆ
" ಐ ಟೇಕ್ 15,000/ per student ಆನ್ ರಿಕ್ವೆಸ್ಟ್ ಬೇಸಿಸ್ "
"ಇಟ್ ಈಸ್ ಟೂ ಹೈ ಹೌ ಕ್ಯಾನ್ ಯು ಆಸ್ಕ್ ದಟ್ ಮಚ್"
"ಹೌ ಕ್ಯಾನ್ ಯು ಕ್ವಾಲಿಫೈ ಸೌತ್ ಇಂಡಿಯನ್ಸ್ ಇನ್ ಒನ್ ಸಂಟೆನ್ಸ್ ."
"ದಟ್ ಈಸ್ ನನ್ ಆಫ್ ಯುರ್ ಬಿಸಿನೆಸ್. ಯು ವಾಂಟ್ ಬಿಸಿನೆಸ್ . ಸ್ಪೀಕ್ ಪ್ರಾಪರ್ಲಿ"
"ಯು ಆರ್ ಬ್ಲೇಮಿಂಗ್ ಅಸ್. ಹೌ ಕ್ಯಾನ್ ನಾಟ್ ಇಟ್ ಬಿ ಮೈ ಬಿಸಿನೆಸ್. ಈವನ್ ಇಫ್ ಯು ಪೇ ಐ ಡೋಂಟ್ ವಾಂಟ್ ಟು ಟೇಕ್ ಕ್ಲಾಸ್ ಫಾರ್ ಯುವರ್ ವೈಫ್"
"ದಿಸ್ ಈಸ್ ನಾಟ್ ರೈಟ್. ಯು ಆರ್ ಇನ್ಸಲ್ಟಿಂಗ್ ಯುವರ್ ಕಸ್ಟಮರ್"
"ಯು ಆರ್ ನಾಟ್ ಮೈ ಕಸ್ಟಮರ್, ಯುವರ್ ವೈಫ್ ಮೇ ಬಿ prospective ಸ್ಟೂಡೆಂಟ್, ಯು ಕ್ಯಾನ್ ಮೂವ್ ನೌ"ಅಂದೆ
"ದಿಸ್ ಈಸ್ ನಾಟ್ ಕರೆಕ್ಟ್. ಯು ಡೋಂಟ್ ನೋ ಮೈ ಸನ್ ಈಸ್ ವರ್ಕಿಂಗ್ ಇನ್ ಇನ್ಫೋಸಿಸ್. ಐ ವಿಲ್ ಬುಕ್ ಅ ಕಂಪ್ಲೈಂಟ್ ಆನ್ ಯು. ಐ ಕಾಂಟ್
ಟಾಲರೇಟ್ ಇಟ್"
ಹಾ ಹೂಂ ಎಂದು ಹಾರಾಡಿದರು
ಎಲ್ಲಾ ,ಮಾಡುವುದು ಹಣಕ್ಕಾಗಿ, ಮೂರುತಿಂಗಳಲ್ಲಿ ಇಂಗ್ಲೀಷ್ ಕಲಿಸಲು ಆಗುವುದಿಲ್ಲ. ನನ್ನಅನುಭವದಷ್ಟು ನಿನ್ನ ವಯಸ್ಸಿಲ್ಲ. ವಿನಯವಿಲ್ಲ ಅದೂ ಇದೂ ಎಂದರು
ನಾನು ಅದಕ್ಕೆ ಸರಿಯಾಗಿ ತಿರುಗೇಟು ಕೊಟ್ಟೆ
ಹಣ ಮಾಡಬೇಕೆಂದು ಇಲ್ಲಿಗೆ ಬಂದಿರೋದು ನೀವು. ನಾವಲ್ಲ , ನಮ್ಮಲ್ಲಿಗೆ ಬನ್ನಿ ಎಂದು ನಿಮ್ಮನ್ನು ಯಾರು ಕರೆದಿಲ್ಲ.ನಿಮಗೆ ಬೇಕಿದೆ ಅದಕ್ಕೆ ಹುಡುಕಿಕೊಂಡು ಬಂದಿರಿ
ನಾನು ಕ್ಲಾಸ್ ತೆಗೆದುಕೊಂಡ ವಿದ್ಯಾರ್ಥಿಗಳ ಸಂಖ್ಯೆ ನಿಮ್ಮ ಅನುಭವಕ್ಕಿಂತ ನೂರು ಪಟ್ಟು ಜಾಸ್ತಿ ವಿನಯದ ಬಗ್ಗೆ ಹೇಳಿಕೊಡಲು ನಮ್ಮಲ್ಲಿಯೇ ಹಿರಿಯರಿದ್ದಾರೆ,
ನಿಮ್ಮ ಅಗತ್ಯವಿಲ್ಲ
ಆತನೇನೋ ನನ್ನನ್ನು ಬಿಡುವುದಿಲ್ಲ ಎಂದು ದಮಕಿ ಹಾಕಿ ಹೋದರು
ನಂತರ ಸಂಜೆ ಅವರ ಮಗನ ಫೋನ್ ಬಂದಿತ್ತು
ಮೊದ ಮೊದಲು ನನ್ನ ಮೇಲೆ ಎಗರಾಡಿದ
ನಂತರ ಈ ಪರಿಸ್ಥಿತಿ ಕಾರಣವಾದ ಅವರ ಮಾತನ್ನು ಹೇಳಿದೆ
ಎಲ್ಲಿ ಇರುತ್ತೀರೋ ಅಲ್ಲಿ ಗೌರವ ಕೊಡದಿದ್ದರೂ ಪರವಾಗಿಲ್ಲ , ಕೀಳಾಗಿ ಮಾತಾಡಬಾರದೆಂದೆ
ಕೊನೆಗೆ ಒಪ್ಪಿದ
ಅಲ್ಲಿಗೆ ರಾಜಿಯಾಯಿತು.
ಅವರು ಕ್ಲಾಸಿಗೆ ಬರಲಿಲ್ಲ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ ಅಲ್ಲವೇ

Rating
No votes yet

Comments