ಸ್ಕೂಲ್
ನಾನು ೮ನೇ ತರಗತಿಲಿ ಕಲಿತಿರುವಾಗ ನಡೆದ ಒಂದು ಘಟನೆ.
ಮಿಡ್ದ್ ಟರ್ಮ್ ಪರೀಕ್ಷೆ ಮುಗಿದ್ಮೇಲೆ ಸಹಜವಾಗಿ ನಮಗೆಲ್ಲ ದಸರಾ ರಜೆ,ದಸರಾ ರಜೆ ಸಿಕ್ಕಿದ್ಕೂಡ್ಲೆ ನನ್ನ ಅಜ್ಜಿ ಮನೆಗೆ ಹೋಗ್ತಾ ಇದ್ದೆ ಅಲ್ಲಿ ಮಕ್ಕ್ಲ ಗುಂಪು ಕಟ್ಟ್ಕೊಂಡು ಆಟ ಆಡೋಕೆ ಶುರು ಮಾಡುದ್ರೆ ಊಟ ತಿಂಡಿ ಏನು ಕೇಳಬೇಡಿ ಆ ಬಾಲ್ಯನೆ ಹಾಗೆ ಅಲ್ವ.ಸಂಜೆ ಆಗ್ತಾ ಇದ್ದಂತೆ ಮನೆ ಒಳಗಿನ ಆಟ ಶುರು, ಕಳ್ಳ ಪೋಲಿಸ್ ಆಟ ಕಣ್ಣ ಮುಚ್ಚಾಲೆ ಆಟ ಎಲ್ಲಾ ಮನೆ ಒಳುಗ್ಗೇನೆ ಆಡ್ತಾ ಇದ್ದ್ವಿ,ಮನೇಲಿ ಚಿಕ್ಕಪ್ಪನ್ ಮಕ್ಕ್ಲು ಮಾವನ್ ಮಕ್ಕಳು ಅಂತ ತುಂಬಾ ಜನ ಇದ್ದ್ರು.
ರಾತ್ರೆ ಮಲುಗ್ವಾಗ ಮಾಡ್ತಾ ಇದ್ದ ತಂಟೆಗಳು, ಹೀಗೆ ಆಡ್ತ ಕುಣಿತ ರಜಾ ದಿನ ಮುಗೀತಾ ಬಂತು ಅವಾಗ್ಲೇ ನಮ್ಮಮ್ಮ ಅಜ್ಜಿಮನೆಗೆ ಬಂದಿದ್ದ್ರು,ನಾನು ಅವಾಗ ೮ನೇ ಕ್ಲಾಸ್ಸಲ್ಲಿ ಇದ್ದ್ರು ನನ್ನಮ್ಮ ನನ್ನನ್ನಾ ಒಬ್ಬೊಬ್ಬನೇ ಬಸ್ಸಲ್ ಬಿಡ್ತಾ ಇರ್ಲಿಲ್ಲ,ಕೊನೆಗೆ ಮನಸಿಲ್ಲದ ಮನಸಿಂದ ಅಮ್ಮನ್ಜೊತೆ ಹೊರ್ಟೆ.
ಸ್ಕೂಲ್ ಶುರ್ವಾಗೋಕೆ ಇನ್ನೇನೋ ೨ ದಿನ ಇತ್ತು. ಯಾಕೋ ಗೊತ್ತಿಲ್ಲ ತುಂಬಾ ಭಯ ಆಗ್ತಾ ಇತ್ತು ಯಾಕಂದ್ರೆ ಗಣಿತ ಪರೀಕ್ಷೆ ಯಾಕೋ ಪಾಸಾಗೋದು ಡೌಟ್ ಅನ್ನ್ಸಿತ್ತು ಅದಲ್ಲ್ದೆ ಎಲ್ಲಾ ಪಾಠಗಳ ಪ್ರಶ್ನೆ ಪತ್ರಿಕೆಗೆ ಉತ್ತ್ರ ಬರ್ದು ತರ್ಬೇಕಂತ ಹೇಳಿದ್ದ್ರು, ಅದೆಲ್ಲ ನೆನಪಾಗಿ ಶಾಲೆಗೇ ಹೋಗೋ ದಿನ ಜೋರು ಜ್ವರ ಶುರುವಾಯ್ತು ಹೇಗೋ ಮೊದುಲ್ಲ್ನೆ ದಿನ ಶಾಲೆಗೆ ಹೋಗ್ಲಿಲ್ಲ ಆದ್ರೆ ಮರುದಿನ ನನ್ನ ಯಾವ ನಾಟ್ಕಾನು ಪಲಕಾರಿಯಾಗ್ಲಿಲ್ಲ,ಹೇಗೋ ಮುಖ ಬಾಡಿಸ್ಕೊಂಡು ಹೊರ್ಟೆ.
ಆ ದಿನ ನಾನು ಯಾವ್ದೋ ಜೈಲ್ಗೆ ಹೋಗ್ತಾ ಇದ್ದೇನೆ ಅನ್ನ್ಸ್ತು..ನಾನು ಕ್ಲಾಸ್ ಒಳಗಡೆ ಹೋಗ್ತಾ ಇದ್ದಾಗ್ಲೇ ನನ್ನ ಸ್ನೇಹಿತ್ತ್ರು ಶುರು ಮಾಡುದ್ದ್ರು ಯಾಕೋ ಬರ್ಲಿಲ್ಲ ನಿನ್ನೆ..? ಅದುಕ್ಕೆ ನಾನು.. ಜ್ವರ ಕಣ್ರೋ ಅಂದೇ...ಅದುಕ್ಕೆ ಅವ್ರೂ ಹೇ ಹೇ.....ಹ ಹಾ ಹ ಅಂತ ನಗೋಕೆ ಶುರು ಮಾಡುದ್ರು ನಂಗೆ ಸಿಟ್ಟು ಬಂತು ಆದ್ರು ಸುಮ್ನೆ ಹೋಗಿ ನನ್ನ ಜಾಗದಲ್ಲಿ ಹೋಗಿ ಕೂತೆ, ಹೇಗೋ ಕಷ್ಟ ಪಟ್ಟು ೨ದಿನದಲ್ಲಿ ಪ್ರಶ್ನೆ ಪತ್ರಿಕೆಗೆ ಉತ್ತ್ರ ಬರ್ದಿದ್ದೆ, ಸ್ವಲ್ಪ ಹೊತ್ತಲ್ಲೇ ಗೊತ್ತಾಯ್ತು ನಿನ್ನೆ ಗಣಿತ ಮೇಸ್ಟ್ರು ಪೇಪರ್ ಕೊಟ್ಟಿದ್ರುಂತ ಫೈಲ್ ಆದವ್ರ್ಗೆ ಅವ್ರ ನಾಗರಬೆತ್ತದ ರುಚಿ ಸಿಕ್ಕಿತ್ತು. ಅದಾಗಲೇ ನಮ್ಮ ಗಣಿತ ಮೇಷ್ಟ್ರು ಬಂದ್ರು, ಬಂದು ಹಾಜರಿ ಕರಿಯೋಕೆ ಶುರು ಮಾಡುದ್ದ್ರು ನನ್ನ ಹೆಸ್ರು ಕರುದ್ದ್ರು ನಾನು ಎಸ್ ಸಾರ್ ಅಂದೇ ಅದುಕ್ಕೆ ಅವ್ರು ನಿನ್ನೆ ಯಾಕೋ ಬಂದಿಲ್ಲ ಮೊದುಲ್ನೆ ದಿನಾನೆ ತಪ್ಪ್ಸಿದ್ಯ ಅಂದ್ರು, ನಾನು ಅದುಕ್ಕೆ ಜ್ವರ ಸಾರ್ ಅಂದೇ..ಹೋ ಹೋ ನಿನ್ನೆ ಪೇಪರ್ ಕೊಟ್ಟಿದ್ದೆ ಆಮೇಲೆ ಸ್ಟಾಫ್ ರೂಮ್ಗೆ ಬಾ ಅಂದ್ರು,ನಾನದುಕ್ಕೆ ಆಯ್ತು ಹೇಳಿ ತಲೆ ಅಲ್ಲಡ್ಸ್ದೆ.
ಕ್ಲಾಸ್ ಅದ್ಕೂಡ್ಲೆ ತಲೆ ಕೆರ್ಕೊಂಡು ಸ್ಟಾಫ್ ರೂಮ್ಗೆ ಹೋದೆ, ಸರ್ ಪೇಪರ್ ಕೊಟ್ಟ್ರು ೪ ಮಾರ್ಕ್ಗೆ ಫೈಲಾಗಿದ್ದೆ.
ಸರ್: ಯಾಕೋ ಫೈಲಾಗಿದಿ,ಹೇಳು ಇಲ್ಲಾಂದ್ರೆ ನಿನ್ನ ಬೆನ್ನ್ ಮೂಲೆ ಮುರಿತಿನಿ,ನಾನು ತಬ್ಬಿಬ್ಬಾಗಿ ಬಾಯಲ್ಲಿ ಅಮ್ಮಂಗೆ ಹುಷಾರಿರಲಿಲ್ಲ ಅಂದೇ, ಹೋ ಹೌದ ಯೆನೈಯ್ತು ನಿಮ್ಮಮ್ಮ್ನ್ಗೆ
ನಾನು:ಸ್ವಲ್ಪ ಜ್ವರ ಬಂದಿತ್ತು ಹಾಗೆ ಅದೇ ಯೋಚ್ನೆಲಿದ್ದೆ ಹಾಗೆ ಓದೋಕೆ ಆಗ್ಲಿಲ್ಲ.
ಸರ್ :ಆಯ್ತು ಇನ್ನೋದ್ಸಲ ಈತರಹ ಫೈಲಾಗ್ಬೇಡ ಆಯ್ತಾ....
ನಾನು: ಆಯ್ತು ಅಂದೇ
ಹೇಗಾದರು ಬಚಾವಾದೆ ಎಂಬ ಕುಶಿ ಮನ್ಸಲಿದ್ದ್ರೆ ಅಮ್ಮಂಗೆ ಹುಷಾರಿಲ್ಲ ಹೇಳ್ದೆ ಎಂಬ ನೋವು ಸ್ವಲ್ಪ ಮಟ್ಟಿಗೆ ಕಾಡುತ್ತಿತ್ತು.
ಹೇಗೋ ಸ್ವಲ್ಪ ದಿನ ಕಳಿಯಿತು.
ನಾನು ಫೈಲಾಗಿದ್ದ್ರಿಂದ ಹೆತ್ತವರು ಬಂದು ಮಾರ್ಕ್ಸ್ ಕಾರ್ಡ್ಗೆ ಸಹಿ ಹಕ್ಬೇಕಿತ್ತು, ಹಾಗೆ ಅಮ್ಮನ ಜೊತೆ ಬಂದೆ ಆದ್ರೆ ನಂಗೆ ಭಯ ಇರ್ಲಿಲ್ಲ ಯಾಕಂದ್ರೆ ನಾನು ಸುಲ್ಲ್ಹೆಳಿದ್ದು ಗಣಿತ ಸಾರ್ನತ್ತ್ರ, ಆದ್ರೆ ನಮ್ಮ ಕ್ಲಾಸ್ ಟೀಚರ್ ತುಂಬಾ ಪಾಪ ಹಾಗೆ ಟೆನ್ಶನ್ ಇಲ್ದೆ ಶಾಲಾ ವ್ಯಾರಂಡದಲ್ಲಿ ನಾನು ನನ್ನಮ್ಮ ಹೋಗ್ತಾ ಇದ್ದ್ವಿ ಹೋಗ್ತಾ ಇದ್ದಾಗ್ಲೇ ನಮ್ಮ್ ಗಣಿತ ಸರ್ ಎದುರ್ ಬಂದ್ರು ಅವ್ರು ನನ್ನ ನೋಡಿ ಇವ್ರೇನ ನಿನ್ನಮ್ಮ ಅಂದ್ರು
ನಾನು: ಹೌವ್ದು
ಸರ್ : ಹೇಗಿದ್ದೀರ ಈಗ ಹುಷಾರ್ರ್ಲಿಲ್ಲಂತೆ
ಅಮ್ಮ: ಹಾಗೇನಿಲ್ಲ ದೇವ್ರು ದಯದಿಂದ ಚೆನ್ನಾಗಿದ್ದೇನೆ
ಸರ್: ಲೋ ಬಾರೋ ಇಲ್ಲಿ ಎಂದು ಹೇಳಿ ನನ್ನ ಕಿವಿ ಹಿಡ್ದು ಸ್ಟಾಫ್ ರೂಮ್ಗೆ ಕರ್ಕೊಂಡು ಹೋಗಿ ಕೊಟ್ಟ್ರು ನೋಡಿ ರಪ ರಪಾ ಅಂತ ೨ ದಿನ ಜ್ವರ ಬಂತು ಮನೆಗೊದ್ಮೇಲೆ ನಮ್ಮಮ್ಮನ್ ಸೇವೆ ಬೇರೆ ಆಯ್ತು....ಅದುಕ್ಕೆ ಈವಾಗ್ಲು ನಾನು ಅದುನ್ನ ಯೆನಿಸ್ಕೊಂಡಾಗ ನಗು ಬರುತ್ತೆ.
ಅದುಕ್ಕೆ ದೊಡ್ಡವರು ಹೇಳೋದು ಸುಳ್ಳು ಹೇಳ್ದವ್ರು ಒಂದಲ್ಲ ಒಂದಿನ ಸಿಕ್ಕಿ ಬಿಳ್ತಾರಂತ.....ಅಲ್ವ.