ಸ್ಪೆಶಲ್ ಚಬ್ಬೀಸ್ -ಹಿಂದಿ ಚಿತ್ರ .

ಸ್ಪೆಶಲ್ ಚಬ್ಬೀಸ್ -ಹಿಂದಿ ಚಿತ್ರ .

ಸರ್ವೇ ಸಾಧಾರಣವಾಗಿ ಹಿಂದಿ ಸಿನೆಮಾಗಳನ್ನು ನೋಡುವವರು ಖಂಡಿತವಾಗಿ ಒಂದಾದರೂ ಅಕ್ಷಯ್ ಕುಮಾರ್ ಚಿತ್ರವನ್ನು ನೋಡಿರದೆ ಇರರು-ಹಾಗೆಯೇ ಅಕ್ಷಯ್ ಕುಮಾರ್ ಮೊದಲ ಅಕ್ಷನ್ ಚಿತ್ರಗಳು ನಂತರ ಹಾಸ್ಯ -ಪಾತ್ರಗಳಿಗೆ  ಸೀಮಿತಗೊಂಡ ಬಗೆಗೂ ಗೊತ್ತಿರುತ್ತೆ...

ಎಲ್ಲ ಟಾಪ್ ನಟರ ಹಾಗೆ ಏರು ಪೇರಿನ  ವೃತ್ತಿ ಬದುಕಲ್ಲಿದ್ದ ಅಕ್ಷಯ್ ಕುಮಾರ್ ಅದೃಷ್ಟ ಖುಲಾಯಿಸಿದ್ದು  ಸಿಂಗ್ ಇಸ್ ಕಿಂಗ್ ಚಿತ್ರ-ಆಮೇಲೆ  ಬಂಡ ಎಲ್ಲ ಚಿತ್ರಗಳೂ ಅಪಾರ ಹಣ ಗಳಿಸಿ  ಮೊದಲ ೧೦೦ಕೋಟಿ  ಕ್ಲಬ್ನಲ್ಲಿನ ಒಬ್ಬ ನಟರಾದರು. ಹೀಗೆ ಅಕ್ಷನ್ ನಂತರ ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತ ಹಾಸ್ಯಕ್ಕೆ ಸೀಮಿತಗೊಂಡ ಆಗಾಗ ಅಕ್ಷನ್ ಚಿತ್ರಗಳಲ್ಲಿ ನಟಿಸುವ ಇನ್ನೊಬ್ಬ ಯಶಸ್ವಿ  ನಟ  ಅಜಯ್ ದೇವಗನ್. ಈ ಹಿಂದೆ ಅಕ್ಷಯ್ ತೆಗೆದ ಬಹುಪಾಲು ಚಿತ್ರಗಳು ಹಾಸ್ಯದ ಹಣೆ ಪಟ್ಟಿ ಹೊತ್ತ ನಾನ್ಸೆನ್ಸ್ ಚಿತ್ರಗಳು ಎಂದರೆ ಕೆಲವರಿಗೆ ಬೇಜಾರಗಬಹ್ದು.. ಆದ್ರೆ ಈ ಸ್ಪೆಶಲ್ ಚಬ್ಬೀಸ್ ಚಿತ್ರವನ್ನು ಮಾತ್ರ ಯಾವದೇ ಮುಲಾಜಿಲ್ಲದೆ ನೋ ನಾನ್ಸೆನ್ಸ್ ಚಿತ್ರ ಎನ್ನಬಹ್ದು.
 
ಇಡೀ  ಚಿತ್ರದಲ್ಲಿ ಆವರಿಸಿ  ಮಜಾ ಕೊಡುವ ಅಭಿನಯ ನೀಡಿ ಚಿತ್ರವನ್ನು ಸಹ್ಯವಾಗುವ-ನಕ್ಕು ಸುಸ್ತಾಗುವ-ಒಂದೊಳ್ಳೆ ಚಿತ್ರ ನೋಡಿದ ಫೀಲ್ ಬರುವ ಹಾಗೆ ಮಾಡುವವರು ಎಂದರೆ ಅಕ್ಷಯ್ ಕುಮಾರ್-ಅನುಪಮ್ ಖೇರ್ ಮತ್ತು ಮನೋಜ್ ಬಾಜಪಾಯಿ. ಈ ವೀಕೆಂಡ್ ಅಥವಾ ಯಾವುದೇ ಸಿನೆಮ ನೋಡಿ ಖುಷಿ ಕೊಡುವ ಚಿತ್ರ ನೋಡಬೇಕು ಎಂದಿದ್ದರೆ  ಈಗಲೇ  ನೋಡಿ ಈ ಚಿತ್ರವನ್ನು.. ನಿರುದ್ಯೋಗ -ಕೆಲಸ ಮಾಡೋಕು ರೆಡಿ ಇದ್ದು ಕೆಲಸ ಸಿಗದೇ   ಸ್ವಲ್ಪ 'ತಲೆ ಓಡಿಸಿ ಐಡಿಯಾ  ಮಾಡಿ ಕನ್ನ  ಹಾಕುವ ಮಜಾ ಮಾಡುವ  ಕಳ್ಳರ ಗುಂಪಿನ ಈ ಕಥೆ  ಮಾಮೂಲಾಗಿ ನಾವ್ ಆಗಾಗ ಪತ್ರಿಕೆಗಳಲ್ಲಿ ಓದುವ ನ್ಯೂಸ್ನಲ್ಲಿ ನೋಡುವ ಘಟನೆಗಳು ಸನ್ನಿವೇಶಗಳ ಬಗ್ಗೆಯೇ.
ಮತ್ತು ಇದು ಆಗ  ಈಗ ಮುಂದೆಯೂ ನಡೆವ ಪ್ರಕ್ರಿಯೆ.
 
ಕಥೆ:
 
ಚಿತ್ರದ ಆರಂಭ ಆಗುವುದು ಸೀ ಬಿ ಅಯ್ಗೆ  ಬೇಕಾದ ಸಿಬ್ಬಂಧಿಗಳನ್ನು ನೇಮಕ ಮಾಡುವ ಸಂದರ್ಶನದ ಮೂಲಕ . ಸಂದರ್ಶಕರು  ಅಕ್ಷಯ್ ಕುಮಾರ್ ಮತ್ತು ಅನುಪಮ್ ಖೇರ್. ಅಲ್ಲಿ ಕೇಳುವ ಪ್ರಶ್ನೆ, ನೀವ್ ಸೀ ಬಿ ಅಯ್ಗೆ ಯಾಕೆ ಸೆಲೆಕ್ಟ್ ಆಗೋಕೆ ಇಷ್ಟ ಪಡ್ತೀರ? ಅದ್ಕೆ ಅಭ್ಯರ್ಥಿ(ಹುಡುಗಿ)-ಈ ದೇಶದಲ್ಲಿ ಅನ್ಯಾಯ ಆಕ್ರಮ  ಹಣ ಗಳಿಕೆ  ಸಂಪತ್ತು ಹೆಚ್ಚುತ್ತಿದೆ -ಅದನ್ನು ಕಿತ್ತು ಹಾಕಬೇಕು..! ಇದು ಕನ್ನಡದಲ್ಲಿ ಹೇಳಿದರೆ ಅಸ್ತೆನೂ ಮಜಾ ಇಲ್ಲ-ಹಿಂದಿಯಲ್ಲಿ ಹೇಳೋದು ಹೀಗೆ - ಇಸ್ ದೇಶ್ ಮೇ ಕರಪ್ಚನ್ ಜ್ಯಾದ ಹುವಾ  ಹೈ  ಉಸ್ಕೋ  ಉಕಾಡ್ನ  ಹೈ .
ಅದ್ಕೆ ಅಕ್ಷಯ್ ಕೇಳೋದು-ತುಮ್  ಅಕ್ಹೇಲೆ ಉಕಾಡೋಗಿ ? ಅದ್ಕೆ ಅವಳು -ಹಂ ಸಬ್ ಮಿಲ್ಕೆ ಸರ್.
ಈ ಸನ್ನಿವೇಶ ಅಸ್ತೆನೂ ಮಜ್ವಾಗಿಲ್ಲ ಅನ್ನಿಸಬಹುದು ಆದರೆ ಚಿತ್ರದ ಆರಂಭದ ಈ ದೃಶ್ಯ ನಮಗೆ ಈ ಚಿತ್ರದ ಬಗ್ಗೆ ಒಂದು ಪೂರ್ವಭಾವಿ ತೀರ್ಮಾನಕ್ಕೆ ಬರುವ ಹಾಗೆ  ಮಾಡುವುದು ಆದ್ರೆ  ನಿಜ ಕಥೆ ಬೇರೆ ಇದೆ. ಅದೇ ಈ ಚಿತ್ರದ ವಿಶೇಷತೆ. ಅದಿಲ್ಲಿ ಹೇಳೋಲ್ಲ. ನೋಡಿದರೇನೇ ಮಜಾ..
 
 
 
ಅನುಪಮ್ ಖೇರ್ನನ್ನು ತಮ್ಮ ನಾಯಕ-ಬಾಸ್ ಎಂದು ಮಾಡಿಕೊಂಡು ೪ ಜನರ(ಅಕ್ಷಯ್ ಕುಮಾರ್-ಅನುಪಮ್ ಖೇರ್-ಇನ್ನಿಬ್ಬರು ನಟರು) ತಂಡ 
ಸೀ ಬಿ ಅಯ್ - ಇನ್ಕಂ ಟ್ಯಾಕ್ಸ್ ಆಫೀಸರ್ಸ್ ಎಂದು  ಆಕ್ರಮ ಸಂಪತ್ತು ಹೊಂದಿರುವರ ರಾಜಕೀಯ ನೇತಾರರು. ಆಭರಣ ವ್ಯಾಪಾರಿಗಳು, ದಲ್ಲಾಳಿಗಳು ಮುಂತಾದವರ ಆಫೀಸು ಮನೆ ಮೇಲೆ ರೇಡ್  ಮಾಡಿ ಅದಕ್ಕೆ  ನೈಜ ಪೋಲೀಸರ ಸಹಾಯ ಪಡೆದು ರೈಡ್ನಲ್ಲಿ ಸಿಗುವ ಹಣ -ಆಭರಣ ಇತ್ಯಾದಿ ಸಮೇತ  ಎಸ್ಕೇಪ್ ಆಗುವುದು ಈ ಚಿತ್ರದ ಕಥಾವಸ್ತು.
ಬರೀ ಇಸ್ಟೇ ಆಗಿದ್ದರೆ ಇದೂ ೧೦ ರಲ್ಲಿ ೧೧ ಆಗುವ ಚಾನ್ಸ್ ಇತ್ತು...
 
ಆದರೆ ನಿರ್ದೇಶಕ  ನೀರಜ್ ಪಾಂಡೆ (ತೆಗೆದ ಒಂದೇ ಒಂದು ಯಶಸ್ವಿ  ಮತ್ತು ವಿನೂತನ ಕಥಾ ವಸ್ತುವಿನ ಚಿತ್ರ -ಎ ವೆಡ್ ನೆಸ್ ಡೇ-೨೦೦೮  ಚಿತ್ರದ  ನಿರ್ದೇಶಕ) ತಮ್ಮ  ಹಿಂದಿನ ಚಿತ್ರದಂತೆ ಇಲ್ಲೂ ಚಿತ್ರವನ್ನು ವಿಭಿನ್ನವಾಗಿ ತೆಗೆದು ಅನಿರೀಕ್ಷಿತ  ಅಂತ್ಯದ ಮೂಲಕ ಪ್ರೇಕ್ಷಕರನ್ನು  ಸೆಳೆಯುವರು. ಹೀಗೆ ಸೀ ಬಿ ಅಯ್  -ಇನ್ಕಂ ಟ್ಯಾಕ್ಸ್ ಆಫೀಸರ್ಸ್ ಎಂದು ಗತ್ತಿನಲ್ಲಿ ಅಯ್  ಡಿ  ಕಾರ್ಡ್ -ಸರ್ಚ್ ಪೇಪರ್ ತೋರಿಸುತ್ತ ನುಗ್ಗುವ ಈ ತಂಡ  ತಮಗೆ ಬೇಕಾದ ಕಾಗದ ಪತ್ರ ಸೀಲ್ ಎಲ್ಲವನ್ನು ಆಯ್ಯಾಯ  ಸನ್ನಿವೇಶಗಳಿಗೆ ತಕ್ಕಂತೆ ತಯಾರು ಮಾಡಿ  ರೈಡ್ ಮಾಡಿ  ಆಕ್ರಮ ಹಣವುಳ್ಳವರನ್ನು  ದೋಚಿ -ಮಜಾ ಉಡಾಯಿಸುವರು .
 
  
 
ಅದೊಮ್ಮೆ ಆಡಳಿತ ಪಕ್ಷದ ನೇತಾರರೋಬ್ಬನ  ಮನೆಗೆ ರೈಡ್ ಮಾಡಿ  ಅಪಾರ ಆಕ್ರಮ ಹಣ ಸಂಪತ್ತು ಸಿಕ್ಕಿ  ಅದನ್ನು ತೆಗೆದುಕೊಂಡು ಹೊರಡುವರು. ಅವನಿಗೋ (ನೇತಾರ)ಇವರು ನಕಲಿ ಎಂದು ಗೊತ್ತಾಗುವುದು ಎಲ್ಲ ಮುಗಿದ ಮೇಲೆ-ಆದರೂ ಆ ಬಗ್ಗೆ ಪೊಲೀಸರಿಗೆ ಕಂಪ್ಲೇಂಟ್ ಕೊಡಲು ರೆಡಿ ಇಲ್ಲ ಕಾರಣ ಅದು ಅಕ್ರಮ ಸಂಪತ್ತು-ಅಲ್ಲದೆ  ಆ ಬಗ್ಗೆ ಪೇಪರ್ನಲ್ಲಿ ಬಂದು ತನ್ನ ವೋಟ್ಬ್ಯಾಂಕ್ ನಸ್ಟ  ಆದರೆ ಎಂಬ ಭಯ. ಅಧಿಕಾರ ಇದೆ ಮುಂದೆ ಮತ್ತೆ ದೋಚಿದರೆ ಆಯ್ತು ಎಂಬ ಭಾವ... ಆದರೆ ಪೋಲೀಸು ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಲು ನೈಜ ಸೀ ಬಿ ಅಯ್ ಅಧಿಕಾರಿಗಳಿಗೆ ವರಧಿ ನೀಡಿ ತನಿಖೆ ನಡೆಸಲು ಕೋರುವರು  ಆಗ ಬರುವವರೆ- ದಕ್ಷ ಪ್ರಾಮಾಣಿಕ ಖಡಕ್  ಆದರೆ ಶಾಂತ ಸ್ವಭಾವದ  ಸೀ ಬಿ ಆಯ್  ಅಧಿಕಾರಿ ಮನೋಜ್ ಬಾಜಪೈ ಈ ನಕಲಿ ಅಧಿಕಾರಿಗಳನ್ನು ಹಿಡಿಯಲು ಪ್ರಯತ್ನಿಸುವುದು  ಈ ಕಳ್ಳ ಪೋಲೀಸ್ ಆಟದಲ್ಲಿ ಗೆಲ್ಲೊರ್ಯಾರು  ಸೋಲೋರ್ಯಾರು?ಹೇಗೆ? ಯಾಕೆ? ಎನ್ನುವುದು ತೆರೆ ಮೇಲೆ ನೋಡಿಯೇ ಸವಿಯಬೇಕು ಆ ಮಜಾ..!
 
ಚಿತ್ರ ನೋಡುವಾಗ ಪ್ರತಿ ಕ್ಷಣವೂ ಹಲವು ತಮಾಷೆಯ-ನಗೆ ಉಕ್ಕಿಸುವ ಸನ್ನಿವೇಶಗಳು ಬರುವವು..
 
೧.ಆರಂಭದಲಿ ಸಂದರ್ಶನದ ಸನ್ನಿವೇಶ -ಆಗ ಸಂದರ್ಶನ ನಡೆಸುವವರ-ಸಂದರ್ಶನಕ್ಕೆ  ಬಂದವರ ನಡುವಿನ ಸಂಭಾಷಣೆ..
೨.ಇಡೀ ಚಿತ್ರದ ಹೈಲೈಟ್ ಆದ  ೫೦ಜನ ಡೈನಾಮಿಕ್  ತರುಣ ತರುಣಿಯರು ಸೀ ಬಿ ಅಯ್  ಗೆ ಬೇಕು ಎಂದು ಓಪನ್ ಆಗಿ ಪೇಪರ್ನಲ್ಲಿ ಯಾಡ್  ಹಾಕಿ ಅದಕ್ಕೆ  ಬರುವ ೧೦೦೬ ಜನ ನಿರುದ್ಯೋಗಿ ತರುಣರ ತಯಾರಿ-ಪೂಜೆ -ದೇವರ್ಗೆ ಬೇಡಿಕೆ ಇತ್ಯಾದಿ..
ಅಂದೂ ಇಂದೂ ಮುಂದೂ ಈ ಸನ್ನಿವೇಶ ಇರುವುದೇ!.
೩.ನೇತಾರರ ಮನೆಯಲ್ಲಿ ರೈಡ್ ಆಗಿ  ಮಾತು ಕಥೆ ನಡೆಸಿ ಸಮಸ್ಯೆ ಪರಿಹರಿಸುವ ಎಂದು ನೇತಾರ  ಸೀ ಬಿ ಅಯ್  ಹೆಡ್  ಅನುಪಮ್ ಖೆರ್ಗೆ ಆಮಿಷ ಒಡ್ಡುವ -ಎಷ್ಟು ಕೊಡುವಿರಿ? ಎಂದಾಗ ೨ ಎನ್ನಲು -ಅನುಪಮ್ ಅವರು ಆ ನೇತಾರರ ಕೆನ್ನೆಗೆ ೨ ಬಾರಿಸಿ -ನಮಗೇ  ಲಂಚ ಕೊಡುವಿರಾ? ಎಂದು ಹೇಳುವುದು...ಆಗ ನೇತಾರರ ಪಿ ಏ -ನೀವ್ ೨ ಎಂದು  ಹೇಳಿದ್ದು ಒಳ್ಳೆಯದು, ಜಾಸ್ತಿ ಹೇಳಿದ್ದರೆ  ಇನ್ನೂ ಹೊಡೆತಗಳು ಬೀಳುತ್ತಿದ್ದವು ಎನ್ನುವುದು.
೪.ಪೋಲೀಸರ ತನಿಖೆ  ಬೆನ್ನ ಹಿಂದೆ ಬಿದ್ದಿರುವುದು ಗೊತ್ತಾದಮೇಲೂ ತಮ್ಮ  ದೋಚುವಿಕೆ  ಮುಂದುವರೆಸುವ ತಂಡದ ಚಾಣಾಕ್ಷತೆಯ  ಸನ್ನಿವೇಶಗಳು 
೫.ಅನುಪಮ್ ಖೇರ್ ಪತ್ನಿಯರು-ಮಕ್ಕಳು (ಹಲವು ಜನ)ಅವುಗಳ ಭವಿಷ್ಯಕ್ಕಾಗಿ ತಾನು ಇದೇ  ಕೊನೆಯ ಕಳ್ಳತನ ಎಂದು ಹೇಳುವ  ಸನ್ನಿವೇಶ ಅದಕ್ಕೆ ಅಕ್ಷಯ್ ಕರಾರುವಾಕ್ಕಾಗಿ ಎಷ್ಟು ಸಾರಿ ಈ ಹಿಂದೆಯೂ  ಹೀಗೆಯೇ ಅನುಪಮ್ ಹೇಳಿದ್ದರು ಎಂದು ನೆನಪಿಸುವುದು.
೬.ದಲ್ಲಾಳಿಗಳ ಆಫೀಸು ರೇಡ್  ಮಾಡಲು ಹೋಗಿ ಅಲ್ಲಿ ಯಾವುದೋ ಅಂಗಡಿಗೆ ನುಗ್ಗಿ ಇವರ ಆಗಮನ ನೋಡಿಯೂ ತಲೆ ಕೆಡಿಸಿಕೊಳ್ಳದ ಆ ಜನರ ವ್ಯವಹಾರದ ನಡೆ ನೋಡಿ ಅಕ್ಷಯ್ ನಾವ್ ಸೀ ಬಿ ಅಯ್  ಜನ ರೇಡ್  ಎಂದು ಈ ಅನುಪಮ್ಗೆ ರೇಡ್  ಪೇಪರ್ ಕೊಡು ಎಂದಾಗ  ಅನುಪಮ್ ಕೈಗೆ ಸಿಕ್ಕ ಜೇಬಲ್ಲಿನ  ಯಾವ್ಯ್ದೋ  ಖರೀದಿ ಮಾಡಿದ ರಸೀತಿ ಕೊಡುವುದು..! ಆಗ ಅಕ್ಷಯ್ ಆದಿಯಾಗಿ ಎಲ್ಲರೂ ತಾವೇ ಪೆಂಗರಾಗಿ  ಸುಮ್ಮನೆ ಹುಸಿ ನಗೆ ನಕ್ಕು  ಈ ಅಂಗಡಿ ಅಲ್ಲ ಪಕ್ಕದ್ದು ಎಂದು ಬೇರೂಂದು  ಅಂಗಡಿಗೆ ರೇಡ್  ಮಾಡಿ ಅವರ ಕೈನಲ್ಲೇ ಎಲ್ಲ ಹಣ ಕಾಸು ಕಾರಿಗೆ ಸಾಗಿಸಿ ಪ ರಾರಿ ಆಗುವ ದೃಶ್ಯ.
೭.ಮನೋಜ್ ಬಾಜಪಯ್  ಮತ್ತು ಅಕ್ಷಯ್ ಬಾರ್ನಲ್ಲಿ ಮೀಟ್ ಆಗಿ- ಕೈ ಕುಲುಕಿ ಮಾತಾಡಿ  ಅಕ್ಷಯ ದುಬಾರಿ ಸೆರೆ ಕುಡಿವುದು-ಮನೋಜ್  ಅತಿ ಕಡಿಮೆ ಬೆಲೆಯ ಸೆರೆ ತೆಗದುಕೊಂಡು  ಸೋಡಾ ಹಾಕಿದರೆ ಅದಕ್ಕೂ ಚಾರ್ಜಾ? ಎಂದು ಬೇರರ್ನ  ಕೇಳುವ -ನಂತರ ಅಕ್ಷಯ್ ಗೆ ನೀವ್ ಏನು ಮಾಡುವುದು ಎಂದಾಗ  ಅಕ್ಷಯ್-ನಾನು ಇಂಪೋರ್ಟ್ ಎಕ್ಸ್ಪೋರ್ಟ್ ಎಂದು ಹೇಳಿ  ಹೊರಡುವುದು- ಆಗ ಇವನ ಬಗ್ಗೆ ಗೊತ್ತಿದ್ದೂ  ಚೆಕ್ ಮಾಡಲು ಮನೋಜ್ ಬಾಜಪಯ್  ತನ್ ಜೇಬಿಂದ ೧೦೦ರ ನೋಟು ತೆಗೆದು ನೆಲಕ್ಕೆ ಬೀಳಿಸಿ ಇದು ನಿಮದೇ ಎಂದಾಗ ಅಕ್ಷಯ್ ಹೌದು ಎಂದು ಆ ನೋಟ್  ತೆಗೆದುಕೊಂಡು ಹೋಗುವ  ಅದು ನೋಡಿ  ನಗುವ ಮನೋಜ್ ಬಾಜಪಯ್ ..
೮.ಇಡೀ ಚಿತ್ರದ ಸನ್ನಿವೇಶಗಳಲ್ಲಿ ಅತಿ ನಗೆ ಉಕ್ಕಿಸುವ -ಕೊನೆಯ ರೇಡ್  ಅದೂ  ಮುಂಬೈಯ ಅತಿ ದೊಡ್ಡ ಆಭರಣ ಅಂಗಡಿ ಮೇಲೆ-ಅದರ ಓನರ್ ದೇವರ್ಗೆ ಪೂಜೆ ಮಾಡಿ ಹಿಂದೆ ತಿರುಗಿ ನೋಡಲು ಎದುರಿಗೆ ನಿಂತ  ಜನ ಸೀ ಬಿ ಅಯ್  ನೋರು ಎಂದು ತಿಳಿದು ಕೈ ಕಾಲು ಗಡಗಡ  ನಡುಗಿ-ಆಗ ಮನೋಜ್ ಬಾಜಪಯ್ -ಇವರು ಹೀಗೆ ಮಾಡಿಯೇ ಅಂಥವರಿಗೆ ಕೆಲಸ ಸಲೀಸಾಗುವುದು ಎನ್ನುವುದು.
೯.ಒಂದು ದೊಡ್ಡ ಬಸ್ಸಲ್ಲಿ ೫೦ ಜನ ನಕಲಿ ಸೀ ಬಿ ಅಯ್ ನವರನ್ನು ಕೂರಿಸಿ ಆ ಬಸ್ಸು  ಆ ದೊಡ್ಡ ಆಭರಣ ಅಂಗಡಿ ಮುಂದೆ ನಿಂತು ಎಷ್ಟೊತ್ತಾದರೂ ಒಬ್ಬರೂ ಕೆಳಗೆ ಇಳಿಯದೆ ಇರಲು-ಅದು ಕೇಳುವ ಮನೋಜ್ ಬಾಜಪಯಿಗೆ- ತಾವ್ ನಕಲಿ ಆಫೀಸರ್ಸ್ ಎಂದು ಗೊತ್ತಿರದ ಒಬ್ಬ ತರುಣ -ತಮ್ಮ ಬಾಸ್ ಆಜ್ನೆಗಗೈ ಕಾಯ್ತಿರುವೆವು ಎನ್ನುವುದು .
೧೦..ನಿಸ್ಸಂಶಯವಾಗಿ  ಚಿತ್ರದ ಕೊನೆಯ  ದೃಶ್ಯ-ನಾವೇನೋ ಎಣಿಸೋದು ಅಲ್ಲಿ ಆಗೋದೇ ಬೇರೆ.ಮನೋಜ್ ಬಾಜಪಾಯಿ ಇಂಗು ತಿಂದ ಮಂಗ ಆಗೋದು. ಅದು ತೆರೆ ಮೇಲೆ ನೋಡಿ ಸವಿಯಬೇಕು.
 
ನಿಸ್ಸಂಶಯವಾಗಿ ಇದು  ನೋಡಿ  ಎಂಜಾಯ್ ಮಾಡಬಹುದಾದ ಚಿತ್ರ-ಈ ನಡುವೆ ಬಂದ  ಚಿತ್ರಗಳಲ್ಲಿ ಎದ್ದು ಕಾಣುವಂತ  ಚಿತ್ರ. ಮತ್ತು ಅದಾಗಲೇ ಎಲ್ಲ ಪತ್ರಿಕೆ ದೃಶ್ಯ ಮಾಧ್ಯಮಗಳಿಂದ ಭೇಷ್ ಪಡೆದ -ಗಲ್ಲಾ ಪೆಟ್ಟಿಗೆ ಲೂಟಿ ಹೊಡೆದ ಹೊಡೆಯುತ್ತಿರುವ-ಹಲವು ಪ್ರಶಸ್ತಿ ಪುರಸ್ಕಾರ ಪಡೆಯಬಹುದಾದ ಚಿತ್ರ..
 
ಮೊನ್ನೆ ಮೊನ್ನೆ ಬಂದ  ಒಹ್ ಮೈ ಗಾಡ್ ಮತ್ತು ಕಿಲಾಡಿ ೭೮೬ ನಂತರ ಅಕ್ಷಯ್ ಕುಮಾರ್ ಅವರಿಂದ ಮತ್ತೊಂದು ಫೀಲ್ ಗುಡ್ ಚಿತ್ರ-ಈಗ  ಸಲ್ಮಾನ್ ಮತ್ತು ಅಕ್ಷಯ್ ಮಧ್ಯೆ ಯಾರು ನಂಬರ್ ಒನ್ ಎಂಬ ಸ್ಪರ್ಧೆ..ನೋಡಿ ಎಂಜಾಯ್ ಮಾಡಿ...
>ನಾ ಬರೆಯಬೇಕಾಗಿದ್ದು  ಕುಂಗ್ಫು ಹಸಲ್ -೨೦೦೪ ಚಿತ್ರದ ಬಗ್ಗೆ-ಆದರೆ ನಿನ್ನೆ ಆಕಸ್ಮಿಕವಾಗಿ ಅನಿರೀಕ್ಷಿತವಾಗಿ ಹೊಚ್ಹ ಹೊಸ ಚಿತ್ರ  ಸ್ಪೆಶಲ್  ೨೬ ಹಿಂದಿ ಚಿತ್ರ  ನೋಡಿದೆ-ಮತ್ತು ಆ ಚಿತ್ರ ಇನ್ನೂ ಸಿನೆಮ ಮಂದಿರಗಳಲ್ಲಿ ಇರುವುದರಿಂದ ನೀವೆಲ್ಲ ನೋಡಿ ಎಂಜಾಯ್ ಮಾಡಲಿ ಎಂದು ಈ ಚಿತ್ರದ ಬಗ್ಗೆ ಬರೆದೆ.
 
ಚಿತ್ರ ಮೂಲಗಳು :
 
 
 
ವಿಕಿಪೀಡಿಯ:
 
ಯೂಟೂಬ್ ಟ್ರೇಲರ್ :
 
ಯೂಟೂಬ್ ಫುಲ್ ಸಿನೆಮ 
(ಈ ಹೊಚ್ಹ ಹೊಸ ಸಿನೆಮ ಅಲ್ಲಿ ಪೂರ್ಣವಾಗಿ ಲಭ್ಯ ಆಗಿದ್ದು ಹೇಗೋ ಗೊತ್ತಿಲ್ಲ..!)
 
ಅಯ್  ಎಂ ಡಿ  ಬಿ :
 
Rating
No votes yet