ಸ್ವಂತಿಕೆ ಇಲ್ಲದವನು ನೆಮ್ಮದಿಯನೇ ಪಡೆಯಲಾರ!!!

ಸ್ವಂತಿಕೆ ಇಲ್ಲದವನು ನೆಮ್ಮದಿಯನೇ ಪಡೆಯಲಾರ!!!

ಕತ್ತಿ ಹಿಡಿದವರ ಮಾತಿಗೆ ಬನ್ನಿ ಎಂದು ಕರೆದರೆ ಇನ್ನೇನಾಗಬಹುದು
ಕತ್ತಿಯ ಭಯದಿಂದಲೇ ತಮ್ಮನ್ನು ಕರೆಯುತಿಹರು ಎಂದೆನ್ನಬಹುದು


ಅಲ್ಲಿ ಕತ್ತಿಯ ಮಸೆಯಲು ಅವರಿಗೆ ಸಹಕಾರ ನೀಡುತ್ತಾ ಬಂದವರು
ಇಲ್ಲಿ ನಮ್ಮೊಂದಿಗೆ ಬಲು ಸ್ನೇಹದ ಮಾತನ್ನು ಆಡುತ್ತಾ ಇರುವವರು


ಅಮೇರಿಕಾ ಹೇಳಿದಂತೆ ಆಡುತ್ತಾ ಬಂದಿಹುದು ಪಾಕಿಸ್ತಾನ ಈ ತನಕ
ಈಗ ಅವರಾಡಿಸಿದಂತೆಯೇ ಆಡುತಿದೆ ನಮ್ಮ ಸರ್ಕಾರ ಥಕ ಥಕ ಥಕ


ಅಮೇರಿಕಾ ಹೇಳಿದಂತೆ ಕುಣಿದು ಈಗ ಕೊರಗುತ್ತಿದ್ದಾನೆ ಟೋನಿ ಬ್ಲೇರ
ಸ್ವಂತಿಕೆ ಇಲ್ಲದವನು ಏನು ಮಾಡಿದರೂ ನೆಮ್ಮದಿಯನೇ ಪಡೆಯಲಾರ


ನಮ್ಮವರಿಗೆ ಅದ್ಯಾವ ದಿನ ಸದ್ಬುದ್ಧಿ  ಬರುವುದೋ ಆ ಭಗವಂತನೇ ಬಲ್ಲ
ಆದರದರೊಳಗೆ  ಇಟಲಿಯ ಮುದುಕಿ ದೋಚಬಹುದು ಬೇಕಾದುದನ್ನೆಲ್ಲಾ!!!
**************************************


- ಆಸು ಹೆಗ್ಡೆ

Rating
No votes yet