ಸ್ವಭಾವ: ಜಮಾನಾದ ಜೋಕುಗಳು - ೨

ಸ್ವಭಾವ: ಜಮಾನಾದ ಜೋಕುಗಳು - ೨


    ಟೊರೊಂಟೋದ ಬಹುಮಹಡಿ ಕಟ್ಟದ ಬಗ್ಗೆ ಬರೆಯುತ್ತಾ ವೆಂಕಟೇಶ್ ಸರ್ ಅವರು ಭಾರತೀಯರ ಗೊಣಗುವ ಸ್ವಭಾವದ ಬಗ್ಗೆ ಬರೆದಿದ್ದಾರೆ. http://sampada.net/blog/%E0%B3%A8%E0%B3%AF-%E0%B2%AE%E0%B2%B9%E0%B2%A1%E0%B2%BF%E0%B2%AF-%E0%B2%B5%E0%B2%B8%E0%B2%A4%E0%B2%BF-%E0%B2%97%E0%B3%83%E0%B2%B9/06/07/2012/37359 ಆಗ ನೆನಪಾದದ್ದೇ ನಮ್ಮ ಜಮಾನದಲ್ಲಿ ಪ್ರಚಲಿತವಿದ್ದ ಈ ಹಳೆಯ ಹಾಸ್ಯ ತುಣುಕು, ಹೌದೆನಿಸಿದರೆ ಒಮ್ಮೆ ನಕ್ಕು ಬಿಡಿ.

    ಒಂದು ಪ್ರವಾಸಿ ಕೇಂದ್ರದಲ್ಲಿ ಹೋಟೆಲ್ಲೊಂದು ಇತ್ತು, ಅದರಲ್ಲೇನು ವಿಶೇಷ ಅಂದಿರಾ, ಅಲ್ಲೋ ನೊಣಗಳದು ವಿಪರೀತ ಉಪಟಳ. ಇದ್ದದ್ದು ಒಂದೇ ಹೋಟೆಲ್ಲಾದ್ದರಿಂದ ಎಲ್ಲಾ ಪ್ರವಾಸಿಗಳು ಅಲ್ಲಿಗೇ ಬರಬೇಕಾಗಿತ್ತು. ಅಲ್ಲಿಗೆ ಅಮೇರಿಕದ ಪ್ರಜೆಯೊಬ್ಬ ಚಹಾ ಕುಡಿಯಲೆಂದು ಬಂದ. ಅವನ ಚಹಾ ಕಪ್ಪಿನಲ್ಲಿ ಅಕಸ್ಮಾತ್ತಾಗಿ ಒಂದು ನೊಣ ಬಂದು ಬಿತ್ತು; ಅವನ ಅಮೇರಿಕನ್ ಸ್ವಭಾವದಂತೆ, ಛೀ! ಗಲೀಜು ಎಂದು ಚಹಾವನ್ನು ಚೆಲ್ಲಿ ಹೊರಟು ಹೋದ. ನಂತರ ಅಲ್ಲಿಗೆ ಒಬ್ಬ ಬ್ರಿಟೀಷ್ ಪ್ರಜೆ ಬಂದ, ಅವನ ಕಪ್ಪಿನಲ್ಲೂ ಒಂದು ನೊಣ ಬಂದು ಬಿತ್ತು; ತನ್ನ ದರ್ಪಕ್ಕನುಗುಣವಾಗಿ ಅವನು ಬೇರೆ ಚಹಾ ತರಿಸಿಕೊಂಡು ಕುಡಿದ. ತದನಂತರ ಅಲ್ಲಿಗೆ ಬಂದದ್ದು ಒಬ್ಬ ಭಾರತೀಯ ಪ್ರವಾಸಿ; ಆಕಸ್ಮಿಕವಾಗಿ ಅವನ ಕಪ್ಪಿನಲ್ಲೂ ಒಂದು ನೊಣ ಬಂದು ಬಿತ್ತು. ಅವನು ಸ್ವಚ್ಛತೆಯ ಬಗ್ಗೆ ಗೊಣಗುತ್ತಲೆ, ನೊಣವನ್ನು ತೆಗೆದು ಚಹಾ ಸೇವಿಸಿ ಹೊರಟು ಹೋದ. ಇವರೆಲ್ಲರೂ ಹೋದಮೇಲೆ ಅಲ್ಲಿಗೆ ಬಂದದ್ದು ಒಬ್ಬ ಚೀನಿ ಪ್ರವಾಸಿ; ಯಥಾಪ್ರಕಾರ ಅವನ ಕಪ್ಪಿನಲ್ಲೂ ನೊಣವೊಂದು ಬಂದು ಬಿತ್ತು. ಮೊದಲು ನೊಣವನ್ನು ತಿಂದು ಆಮೇಲೆ ಚಾ ಕುಡಿದು ಸಂತೋಷದಿಂದ ಅಲ್ಲಿಂದ ಹೊರಟ.
 

Rating
No votes yet

Comments