ಸ್ವಾಗತ

ಸ್ವಾಗತ

ಈ ನೆಲಕೆ ಮೂಡಿದ ಕೊಂಬು ನಾನು
ಬೇರಾರಿಗೂ ಲಭಿಸದ ಅಹಿಂಸೆ ಶಾಂತಿ ನಿಕೇತನ

ಸ್ವಾಗತ, ಸಚ್ಚಿದಾನಂದಾರ್ತಿಗಳಿಗೆ
ಆನಂದಾಶ್ರಮದ ಆನಂದಕೋಶಿಯ ಹಸನ್ಮುಖದ ಸ್ವಾಗತ

ಬನ್ನಿ, ಈ ನೆಮ್ಮದಿಯ ನೆರಳಿಗೆ
ಹಲವು ಹುಳುಕು ಬಳುಕು ಕೆಳದಾರಿಗಳ ಬಿಟ್ಟು ಬನ್ನಿ
ಯಾವುದಾದರೇನು ದಾರಿ? ನಾನಿರಲಿ ಗುರಿ!
ನಾನೇ ಸಚ್ಚಿದಾನಂದ !

ನೀವು ನದಿ ದಾಟಬೇಕು
ಆದರೆ ಮೊಸಳೆಯೊಂದಿಗಲ್ಲ
ಸತ್ಯ ಮಾರ್ಗದಲ್ಲಿ ನಾನೇ ಗುರುವೆಲ್ಲಾ
ಆನೆ ನಡೆದದ್ದೇ ದಾರಿಯಲ್ವ?!

ಅಂಜದಿರು ಸಾಧನೆಗೆ
ಶ್ರಮಜೀವಿಯಷ್ಟೇ ಕೊನೆವರಗೆ, ಶ್ರಮಗಳಲ್ಲ
ದಾರಿಯಂತಿಮದಲ್ಲಿ ದಟ್ಟಣೆಯಿಲ್ಲ !

ಕಾದಾಟವೇಕೆ ? ನಿನ್ನ ದಾರಿಯೊಂದೆ ಸರಿಯೆಂದು
ಅದಿನ್ನೂ ನಿನ್ನನುಭವಕ್ಕೇ ದಕ್ಕಿಲ್ಲ!
ಮೊಂಡಾಟವೇಕೆ? ಆ ಗುರಿಯೇ ಪರಮವೆಂದು
ಮೊದಲು ಗುರಿ ತಲುಪು, ನಂತರವೇ ಸ್ವಾಗತಿಸು ಪ್ರೇಮದಾಜ್ಞೆಯಿಂದ !

—————————————-


ಇದು ೩೦ ಡಿಸೆಂಬರ್ ೨೦೦೧ ರಲ್ಲಿ ಬರೆದ ಕವಿತೆ. ಆಗ ನಾನು ಕವಿತೆ ಬರೆಯಲು ಪ್ರಯತ್ನ ಮಾಡ್ತಾ ಇದ್ದಂತ ದಿನಗಳು.

(ಬಹುಶ) ಮಯೂರದಲ್ಲಿ ಒಂದು ಚಿತ್ರ ತೋರಿಸಿ ಅದಕ್ಕೆ ಕವಿತೆ ಬರಿಯೋ ಸ್ಪರ್ಧೆ ಇಡ್ತಾ
ಇದ್ರು. ಒಮ್ಮೆ ಲೈಬ್ರರಿಯಲ್ಲಿ ಸಿಕ್ಕ ಮಯೂರದಲ್ಲಿ , "ಸಾಯಂಕಾಲದಲ್ಲಿ,
ಮುಳುಗುತ್ತಿರುವ ಸೂರ್ಯನೆದುರು ತೆಗೆದೆ ಒಂದು ಕೋಡುಗಲ್ಲಿನ ಚಿತ್ರ"
ಅಲ್ಲಿ
ಕೊಟ್ಟಿದ್ರು. ಕೆಳಗೆ ಕಾಲು ದಾರಿಯೂ ಚಿತ್ರದಲ್ಲಿ ಇತ್ತು. ಅದನ್ನು ನೋಡಿ ಆಗ ಈ ನಾಲ್ಕು
ಸಾಲು ಬರೆದಿದ್ದೆ. ಇವತ್ತು ನನ್ನ ಡೈರಿ ತೆಗೆದಾಗ ಇದು ಕಾಣ್ತು. ಇಲ್ಲಿ ಹಾಕ್ತಾ
ಇದ್ದೀನಿ.

ಇದು ಮಯೂರದಲ್ಲಿ ಪ್ರಕಟ ಆಗಲಿಲ್ಲ ಅಂತ ಬೇರೆ ಹೇಳಬೇಕಾಗಿಲ್ಲ ತಾನೆ! ;)

Rating
No votes yet

Comments