ಹಣವೂ, ಹಸಿದ ಹೊಟ್ಟೆಗಳೂ, ಹಿಟ್ಲರನೂ ನೆನಪಾದಾಗ...

ಹಣವೂ, ಹಸಿದ ಹೊಟ್ಟೆಗಳೂ, ಹಿಟ್ಲರನೂ ನೆನಪಾದಾಗ...

ಅಲ್ಲೀಗ ದೊಡ್ಡ ದೊಡ್ಡ ಮಾಲ್‍ಗಳ ರ್‍ಯಾಕುಗಳಲ್ಲಿ ಆಹಾರ ಧಾನ್ಯದ ಪೊಟ್ಟಣಗಳಿಲ್ಲ. ಅಂಗಡಿ ಬೀದಿಗಳು ನಿರ್ಮಾನುಷ್ಯ. ನಮ್ಮವರೇ ಗುಜರಾತಿ ವಣಿಕರು ಅಲ್ಲೀಗ ಅಂಗಡಿ ತೆರೆದಿಟ್ಟು ನೊಣ ಹೊಡೆಯುವಂತಾಗಿದೆ. ಜಿಂಬಾಬ್ವೆಯಲ್ಲಿ ಆಹಾರ ಧಾನ್ಯಗಳ ಉತ್ಪಾದನೆ ದಾಖಲೆ ಪ್ರಮಾಣದಲ್ಲಿ ಕುಸಿದಿದೆ. ಕನಿಷ್ಟ ತನ್ನ ಪ್ರಜೆಗಳಿಗಾಗುವಷ್ಟಾದರೂ ಆಹಾರಧಾನ್ಯಗಳ ಉತ್ಪಾದನೆಯಿಲ್ಲ. ಇದು ಅಲ್ಲಿನ ಹಣದುಬ್ಬರಕ್ಕೆ ಪ್ರಮುಖ ಕಾರಣಗಳಲ್ಲೊಂದು.ಅಲ್ಲಿನ ಜನರಿಗೆ ಸದ್ಯಕ್ಕೆ ಯಾವುದನ್ನು ಕೊಂಡುಕೊಳ್ಳುವ ಅವಕಾಶವಿಲ್ಲ. ಅವರ ಉದ್ದೇಶವೊಂದೇ ಸಾಧ್ಯವಾದಷ್ಟೂ ದವಸವನ್ನು ಕೊಂಡು ಸಂಗ್ರಹಿಸುವುದು. ಯಾರಿಗೆ ಗೊತ್ತು-ನಾಳೆ ಯಾವ ಬೆಲೆ ಇರುತ್ತದೋ...? ಇರುವ ದುಡ್ಡಿನಲ್ಲಿ ಸದ್ಯಕ್ಕೆ ಊಟದ ವಿಷಯ ನೋಡಿಕೊಳ್ಳೋಣ ಎಂಬ ಮನೋಭಾವ ಅಲ್ಲಿನವರದು. ಅಲ್ಲಿನ ಆಹಾರ ಧಾನ್ಯಗಳ ಕೊರತೆ ೩,೬೦ ೦೦೦ ಟನ್ನುಗಳು. ೩೦ ಪೌಂಡುಗಳ ಆಲೂಗಡ್ಡೆ ಬ್ಯಾಗ್‌ಗೆ ಇನ್ನೂರು ಮಿಲಿಯನ್ ಡಾಲರ್‌ಗಳು! ೫೦ ಮಿಲಿಯನ್ ಡಾಲರ್ ನೋಟಿಗೆ ಸಿಗೋದು ಮೂರೇ ಮೂರು ಪೀಸು ಬ್ರೆಡ್ಡು. ಅಲ್ಲೀಗ ಎಲ್ಲರೂ ಮಿಲಿಯನೇರ್‌ಗಳೇ!

ಆದರೆ ಕಡು ಬಡವರು. ಮುಂದೆ ಓದಿ... <!--break-->

Rating
No votes yet