ಹನಿ ಹನಿಯಾದರೂ ಒಂದೇ ಕವನ!!!
ಜನ ಜಾತ್ರೆಯ ನಡುವೆಯೂ ನನಗೆ
ನನ್ನ ಒಂಟಿತನ ಕಾಡುತ್ತಿದ್ದಾಗ
ಅಂದುಕೊಳ್ಳುತ್ತಿದ್ದೆ ನಾನು ನನ್ನ
ಅದೃಷ್ಟದಲ್ಲಿ ಜೊತೆಗಾರರಿಲ್ಲೆಂದು;
ಒಂದು ದಿನ ಆಕಸ್ಮಿಕವಾಗಿ ನಿನ್ನ
ಗೆಳೆತನವಾದಾಗ ಅಂದುಕೊಂಡೆ
ನಾನು ನನ್ನ ಹಸ್ತರೇಖೆಯಲೇ
ಏನೋ ವಿಶೇಷತೆಯಿರಬೇಕೆಂದು!!!
ಇಂದು ಯಾರದೋ ಹರಕೆಯ
ಕೊರತೆ ಇದೆ ನನ್ನೀ ಬಾಳಲಿ
ಅದಕೇನೋ ನೋಡಿ ಹನಿಗಳು
ತುಂಬಿವೆ ನನ್ನೀ ಕಂಗಳಲಿ
ಯಾರೋ ಇದ್ದಾರೆ ನನ್ನಿಂದ
ದೂರ ನನ್ನನ್ನು ಮರೆತು
ಆದರೂ ನನ್ನ ಹೃದಯದಲಿ
ಕೂತಿದ್ದಾರೆ ಇಂದಿಗೂ ಅವಿತು
ಜೀವನ ಎಲ್ಲಾ ಭಾವನೆಗಳನು
ಶಬ್ದಗಳಲಿ ವಿವರಿಸಲಾಗುವುದಿಲ್ಲ
ಶಬ್ದಗಳಂತೆಯೇ ಮೌನವೂ
ಕೆಲವೊಮ್ಮೆ ಶೋಭೆಕೊಡುವುದಲ್ಲ
ಆಗಸದಿಂದ ಬಿದ್ದ ಉಲ್ಕೆಯ ಕಂಡು
ನಾನು ಆ ದೇವರಲಿ ಪ್ರಾರ್ಥಿಸಿದೆ
ಮುರಿಯದಿರಲಿ ಈ ಸ್ನೇಹ ಸಂಬಂಧ
ಎಂದು ನಾ ಮನಬಿಚ್ಚಿ ಹಾರೈಸಿದೆ.
Rating
Comments
ಉ: ಹನಿ ಹನಿಯಾದರೂ ಒಂದೇ ಕವನ!!!
In reply to ಉ: ಹನಿ ಹನಿಯಾದರೂ ಒಂದೇ ಕವನ!!! by ambika
ಉ: ಹನಿ ಹನಿಯಾದರೂ ಒಂದೇ ಕವನ!!!
ಉ: ಹನಿ ಹನಿಯಾದರೂ ಒಂದೇ ಕವನ!!!
In reply to ಉ: ಹನಿ ಹನಿಯಾದರೂ ಒಂದೇ ಕವನ!!! by malathi shimoga
ಉ: ಹನಿ ಹನಿಯಾದರೂ ಒಂದೇ ಕವನ!!!
In reply to ಉ: ಹನಿ ಹನಿಯಾದರೂ ಒಂದೇ ಕವನ!!! by malathi shimoga
ಉ: ಹನಿ ಹನಿಯಾದರೂ ಒಂದೇ ಕವನ!!!
In reply to ಉ: ಹನಿ ಹನಿಯಾದರೂ ಒಂದೇ ಕವನ!!! by n.nagaraja she…
ಉ: ಹನಿ ಹನಿಯಾದರೂ ಒಂದೇ ಕವನ!!!