ಹನಿ ಹನಿ ಧ್ಯಾನ(ಗೀತೆಗಳು)

ಹನಿ ಹನಿ ಧ್ಯಾನ(ಗೀತೆಗಳು)

ಹನಿ ಹನಿ ಧ್ಯಾನ(ಗೀತೆಗಳು)
೧. ಧ್ಯಾನದ ಸ್ಥಿತಿಯಲ್ಲಿ
ಕ್ಷಣಕ್ಷಣವೂ ಮರಣ,
ಪುನರಪಿ ಜನನ.

೨. ಧ್ಯಾನ ಎಂದರೆ ಅಳಿವು,
ನಾವಿಟ್ಟುಕೊಂಡ ನಂಬಿಕೆಗಳ
ಭ್ರಮೆಗಳ, ಸತ್ಯಗಳ
ಸಾವು.

೩. ಧ್ಯಾನ ಎಂದರೆ
ಸಂತೆಯಲ್ಲಿನ ಶಬ್ದಕ್ಕೆ
ಕಿವುಡಾದ ಮನ.

೪.ಧ್ಯಾನ ಎಂದರೆ ಪ್ರೀತಿಯ ಚಲನ,
ಮೊಗೆದಷ್ಟೂ ಬರಿದಾಗದೇ
ನಿಶ್ಚಿಂತವಾಗಿ ಹರಿವ ಗಂಗೆ

Rating
No votes yet