ಹಬ್ಬಕ್ಕೆ ಮುಂಚೆ ... ನಂತರ ... ಒಂದು ರೀಮಾಸ್ಟರ್ಡ್ ಸಿಡಿಯ ಕಥೆ ...

ಹಬ್ಬಕ್ಕೆ ಮುಂಚೆ ... ನಂತರ ... ಒಂದು ರೀಮಾಸ್ಟರ್ಡ್ ಸಿಡಿಯ ಕಥೆ ...

.. ಹಬ್ಬದ ಹಿಂದಿನ ದಿನ ... ಬೆಳಗ್ಗೆ ೪ ಕ್ಕೆ ಎಲ್ಲಾ ಕಾನ್ಫಿಗರ್ ಮಾಡಿರೊ ರೀಮಾಸ್ಟರ್ಡ್ ಸಿಡಿ ತಯಾರಾಯ್ತು. ಇನ್ನೇನ್ ಬಿಡು ಎಲ್ಲ ಸರಿ ಅಂತ ಬಿದ್ದ್ಗೊಂಡ್ವಿ. ಬೆಳ್ಗೆ ಎದ್ದು ಒಂದ್ ಸರ್ತಿ ಇನ್ಸ್ಟಾಲ್ ಮಾಡಿ ಚೆಕ್ ಮಾಡಿದ್ರೆ ... ಗ್ರಬ್ ನೆಟ್ಟಗೆ ಇನ್ಸ್ಟಾಲ್ ಆಗಿರ್ಲಿಲ್ಲ. ಅಯ್ಯಯ್ಯಪ್ಪಾ ... ರಾತ್ರಿ ಮಾಡಿದ್ದೆಲ್ಲ ತಿಂತಲ್ಲಾ ... ಛೆ ಛೆ ಅಂತ ಸಿಕ್ಕಾಪಟ್ಟೆ ಬೇಜಾರಾಯ್ತು ...

ಆದ್ರು plan B ಅಂತ ಇದ್ದಿದ್ದ ಇನ್ನೊಂದು cd ನ ಬಳಸಿ ಹಬ್ಬ ಮಾಡಿದ್ವಿ. ನುಡಿ ಲೇಔಟ್, ಫಾಂಟ್ ಕಾನ್ಫಿಗರೇಶನ್ ಒಬ್ಬೊಬ್ಬರಿಗೂ ಮಾಡಿ ಕೊಟ್ಟು ಎಲ್ಲ ಸರಿ ನಡೀತು.

ನೆನ್ನೆ ರಾತ್ರಿ ೨ಕ್ಕೆ ಮನೆ ಸೇರಿದಾಗ ಈ ಬೆಳಗ್ಗಿನ ಗ್ರಬ್ ರಗಳೆ ಏನಿರ್ಬೋದು ಅಂತ installation logs ಚೆಕ್ ಮಾಡಿ ನೋಡಿದ್ರೆ :) ... ಒಂದ್ಸಣ್ mount ಸಮಸ್ಯೆ ಅಷ್ಟೆ! ಒಂದ್ ಪಾರ್ಟಿಷನ್ನು ಸರಿಯಾಗಿ unmount ಆಗದೆ ಇದ್ದಿದ್ದಕ್ಕೆ grub-update / grub-install ಹರೋಹರ ಅಂದಿದ್ದು !!! ಅದಕ್ಕೆ ಒಂದು e2fsck ಕೊಟ್ಟು ರಿಪೇರಿ ಮಾಡಿ ... ಇನ್ನೊಂದ್ಸಾರಿ ನಮ್ಮ ಮೂರನೆ ರೀಮಾಸ್ಟರ್ಡ್ ಸಿಡಿ ಹಾಕಿ ಇನ್ಸ್ಟಾಲ್ ಮಾಡಿ ನೋಡಿದೆ :) ಎಲ್ಲಾ ಸರಿಯಾಗಿ ನಡೀತಿದೆ. ಕನ್ನಡ font config, ನುಡಿ ಲೇ ಔಟ್ ... ಜೊತೆಗೆ ಹಬ್ಬದ ಥೀಮು :) ಎಲ್ಲ ... ಇನೊಮ್ಮೆ ಬೆಳಗ್ಗೆ ಇನ್ಸ್ಟಾಲ್ ಮಾಡಿ ಚೆಕ್ ಮಾಡಿ ಬಿಟ್ಟಿದ್ರೆ .... ಹಬ್ಬದಲ್ಲಿ ಇದನ್ನೆ ಬಳಸಿಕೊಳ್ಳಬಹುದಿತ್ತು. ಈ ಸಿಡಿ ನಾ upload ಮಾಡ್ತೀನಿ .... ಇದನ್ನೆ ಕಳ್ಸಿದ್ರೆ ಸೆಟ್ಟಿಂಗ್ ಏನು ಬದಲಾಯಿಸೋದೆ ಬೇಡ! font, ನುಡಿ ಲೇ ಔಟ್ , ಹಬ್ಬ ಥೀಮ್, default gdm theme, wallpaper ಎಲ್ಲ intact!

ಒಂದ್ ಹೈ ಬ್ಯಾಂಡ್ವಿಡ್ತಿರೋ ಲೈನಿಂದ iso upload ಮಾಡಿ ಲಿಂಕ್ ಕಳ್ಸ್ತೀನಿ :) :) :) ....ಶ್ರಮ ವ್ಯರ್ಥ ಆಗಲಿಲ್ಲ ... :)

ಹಬ್ಬಕ್ಕೆ ಕೆಲಸ ಮಾಡಿ ಅದನ್ನ ಯಶಸ್ವಿಯಾಗಿ ನಡೆಸಿಕೊಡೋದ್ರಲ್ಲಿ ಭಾಗಿಯಾದ ಎಲ್ಲ volunteer ಬಂಧು ವರ್ಗಕ್ಕೆ ಎಷ್ಟು ವಂದನೆಗಳನ್ನು ಹೇಳಿದರೂ ಸಾಲದು!

ಪೀ. ಎಸ್ಸು. : ಈಗ ಬ್ಲಾಗ್ತಾ ಇರೋದು ಇದೆ ಇನ್ಸ್ಟಾಲ್ಲೇಶನ್ನಿಂದನೇ ! :)

Rating
No votes yet