ಹಮ್ಮು ತೊರೆದವಳು

ಹಮ್ಮು ತೊರೆದವಳು

ಇಲ್ಲಿವಳು ಹುಬ್ಬುಗಂಟಿಕ್ಕಿದರು ಕಣ್ಣುಗಳು ಚಡಪಡಿಸಿ ನೋಡುತಿಹವು

ಸೊಲ್ಲಡಗಿ ನೊಂದಿದ್ದ ಮೊಗದಲ್ಲಿ ಮುಗುಳುನಗೆ ತಂತಾನೆ ತೋರ್ಪಡುವುದು

ಕಲ್ಲೆದೆಯ ಮಾಡಿದರು ಅದರ ಕುರುಹರಿಯದಿಹ ಒಡಲು ನವಿರೇಳುತಿಹುದು

ನಲ್ಲ ಕಣ್ಣೆದುರಲ್ಲಿ  ಬಂದಮೇಲೀತರಳೆ ಸೆಡವೆಂತು ತೋರಿಯಾಳು?  

 

 

ಸಂಸ್ಕೃತ ಮೂಲ (ಅಮರುಕನ ಅಮರು ಶತಕ, ಪದ್ಯ-೨೮):

 

ಭ್ರೂಭಂಗೇ ರಚಿತೇಽಪಿ ದೃಷ್ಟಿರಧಿಕಮ್ ಸೋಽತ್ಕಂಠಂ ಉದ್ವೀಕ್ಷ್ಯತೇ

ರುದ್ಧಾಯಾಮಪಿ ವಾಚಿ ಸಸ್ಮಿತಮಿದಮ್ ದಗ್ಧಾನನಮ್ ಜಾಯತೇ |

ಕಾರ್ಕಶ್ಯಂ ಗಮಿತೇಽಪಿ ಚೇತಸಿ ತನುಃ  ರೋಮಾಂಚಮಾಲಂಬತೇ

ದೃಷ್ಟೇ ನಿರ್ವಹಣಮ್ ಭವಿಷ್ಯತಿ ಕಥಮ್ ಮಾನಸ್ಯ ತಸ್ಮಿನ್ ಜನೇ ||

 

-ಹಂಸಾನಂದಿ

  
Rating
No votes yet