ಹಳೆಯ ನೆನಪು
ಹಳೆಯ ನೆನೆಪು
2008 ನವೆಂಬರ್ -ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಸಮಾರಂಭ.
ನನ್ನನ್ನೂ ಸಹ ಆ ಗೌರವಕ್ಕೆ ಆಯ್ಕೆಮಾಡಲಾಗಿತ್ತು.ಅಮ್ಮ ಐ.ಸಿ.ಯು ನಲ್ಲಿ ಅಡ್ಮಿಟ್ ಆಗಿದ್ದಾರೆ.ನನ್ನ ಪತಿ,ಆಸ್ಪತ್ರೆಯ ಕೆಲಸದಲ್ಲಿ ತಲ್ಲೀನರಾಗಿದ್ದಾರೆ.ನನ್ನ ಅಮ್ಮನ ಜವಾಬ್ದಾರಿಯೂ ಅವರಮೇಲೆ.ಪ್ರಶಸ್ತಿ ಸ್ವಿಕಾರ,ಸಮಾರಂಭ ಯಾವುದರ ಬಗೆಗೂ ನನಗೆ ಗಮನವಿಲ್ಲ.ನನ್ನ ಜೊತೆ ಅಮ್ಮನೂ ಇಲ್ಲ.ಪತಿಯೂ ಇಲ್ಲ.ಯಾವ ಸಂತೋಷದಿಂದ ಪ್ರಶಸ್ತಿಪಡೆಯಲು ಹೋಗಲಿ?ಅರ್ಧಂಭರ್ಧ ಮನಸ್ಸು.ಅಮ್ಮನಿಗೆ ಇದು ತಿಳಿದುಹೋಯಿತು.ನನ್ನಶಿಷ್ಯೆಯನ್ನು ಕರೆದು ಹೇಗಾದರೂ ಮಾಡಿ, ಸಮಾರಂಭಕ್ಕೆ ನಿನ್ನ ಮೇಡಂನ ಕರೆದುಕೊಂಡು ಹೋಗುವ ಜವಾಬ್ದಾರಿ ನಿನ್ನದು ಎಂದು ಮಾತುತೆಗೆದುಕೊಂಡರು.ಎಲ್ಲಾಮುಗಿಯಿತು.
ಮನಸ್ಸು ಮಾತ್ರ ನೋವಿನಿಂದ ಮುದುಡಿತ್ತು.ಆತ್ಮೀಯರೊಬ್ಬರು ಬಂದರು.ನನ್ನ ಜೊತೆ ಮನೆಯವರ್ಯಾರೂ ಸಮಾರಂಭಕ್ಕೆ ಬಾರದಿದ್ದುದನ್ನು ಕಂಡು ಬಾಯಿ ತುಂಬಾ ಬೈದರು.ಟೀಕೆ ಮಾಡಿದರು! ಮೊದಲೇ ತುಂಬಿದ್ದ ದುಃಖದ ಕಟ್ಟೆಒಡೆಯಿತು.ನೊಂದ ಮನ.ಸ್ನೇಹಿತರಿಗೂ ಅರ್ಥವಾಗದೇ ನನ್ನ ಪರಿಸ್ಥಿತಿ?ನೊಂದ ಮನ ಇಷ್ಟೊಂದು ಆಘಾತ ತಡೆದೀತೆ?
Comments
ಉ: ಹಳೆಯ ನೆನಪು