ಹಳೆಯ ಪುಟಗಳ ಮತ್ತೆ ತೆರೆದಾಗ...

ಹಳೆಯ ಪುಟಗಳ ಮತ್ತೆ ತೆರೆದಾಗ...

ಕಂಗಳೇ! ನನ್ನ ಸಖಿಯ ತೋರುವ ಕಂಗಳೆ!!

ನನ್ನ ಶತ್ರುವೇಕೆ ಆಗುತ್ತಿರುವಿರಿ ಇಂದು?

ನಲ್ಲೆಯ ನಾ ಕನಸಿನಲ್ಲೂ ಕಾಣಬಾರದೆಂದು

ನಿದ್ರೆ ಬರಿಸದೆ ಮುಷ್ಕರ ಹೂಡಿ ಏಕೆಂದು?

 

ನಿದ್ರಿಸುವಾಗ ನನ್ನ ತೋಳ ತೆಕ್ಕೆಯಲ್ಲಿ

ಸಖಿ ಪವಡಿಸಿರುವಳು

ಎಚ್ಚರವಾಗಲು ಹೃದಯದೊಳಗೆ ಏಕೆ

ಒಮ್ಮೆಲೆ ನುಸುಳುವಳು?

 

ನನ್ನ ಸಖಿಯ ತೋರದ ಪಾಪಿ ಹಗಲೇ

ಸಂಜೆಯಾಗಿ ಕಳಾಹೀನನಾಗಿ ಹೋಗು!

ಹೃದಯಹೀನ ಇರುಳೆ! ಬೇಗ ಹೋಗು

ನನ್ನ ಸಖಿಯ ಜೊತೆ ಬರಲಿ ಭಾನು

 

ಎಲೈ ಸಂಜೆಯೇ! ಕ್ಷಣ ಕ್ಷಣಕ್ಕೂ ನಿನ್ನ

ಮೊಗ ಕಪ್ಪಿಡುತ್ತಿದೆ 

ನನ್ನವಳ ಹಾಗೆ, ನಿನ್ನ ಸಖಿಯೂ

ಬಿಟ್ಟು ಹೋದ ಹಾಗಿದೆ!

 

-ನಾಸೋ

www.yakshaprashne.org

http://images.google.co.uk/imgres?imgurl=http://www.conceptsourceinc.com/images/Human_Eyes_eyes.jpg&imgrefurl=http://www.conceptsourceinc.com/&usg=__CkyVXqBBA04x7G21LZlU_5A2i_k=&h=500&w=1024&sz=51&hl=en&start=3&sig2=oxfNB83o04Sd8nCHdyhacQ&tbnid=bv0zaxm34FuleM:&tbnh=73&tbnw=150&prev=/images%3Fq%3Dhuman%2Beyes%26gbv%3D2%26hl%3Den%26sa%3DX&ei=_z7sSau6OJSv-AaQhrGQAQ

Rating
No votes yet

Comments