ಹಳ್ಳಿಯಾದರೇನು ಸಿವಾ..
ದೇವನ "ಹಳ್ಳಿ"ಯಲ್ಲಿ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣವಾದ ಕೂಡಲೇ ಆಸುಪಾಸಿನ ಹಳ್ಳಿಗಳು ಸಿಟಿ/ಲೇಔಟ್/ಸ್ಯಾಟಲೈಟ್ ಟೌನ್೧,೨,೩,...ಗಳಾದವು. ಕೆಲವಕ್ಕೆ ಒಳ್ಳೆಯ ಹೆಸರು "..... ನಗರ, ...." :) ಸಿಕ್ಕಿದರೆ, ಇನ್ನೂ ಕೆಲವು ಮಂಚಪ್ಪನ ಹಳ್ಳಿ, ತರಬನ ಹಳ್ಳಿ, ಚನ್ನಹಳ್ಳಿ...ಇತ್ಯಾದಿ ಇತ್ಯಾದಿ ಹೆಸರು ಬದಲಾವಣೆಗೆ ಕಾಯುತ್ತಿವೆ.
ಇದ್ದಬದ್ದ ಹಳ್ಳಕೊಳ್ಳ ಜಮೀನುಗಳನ್ನೆಲ್ಲಾ ಮುಚ್ಚಿ ಸೈಟು ರೋಡು ಮಾಡುತ್ತಲೇ ಇರುವರು.
ಬೇರೆ ಏರಿಯಾದಲ್ಲಿ ಹಳೇ ಮನೆ ಒಡೆದು ಹಾಕಿದರೆ, ಅದರ ಇಟ್ಟಿಗೆ, ಕಲ್ಲು, ಮಣ್ಣುರಾಶಿಗಳನ್ನೆಲ್ಲಾ ಇಲ್ಲಿಗೆ ತಂದು ಹಾಕಿ, ತಗ್ಗುಗಳನ್ನೆಲ್ಲಾ ನೆಲ"ಸಮ" ಮಾಡುತ್ತಿರುವರು.
ಕಳೆದ ರವಿವಾರ ಯಲಹಂಕ ಸಮೀಪದ ಹಳ್ಳಿಗೆ ಹೋಗಿದ್ದೆ. ಹೆಸರು "ದೊಡ್ಡಬೆಟ್ಟಹಳ್ಳಿ" ಸುತ್ತಮುತ್ತ ಎಲ್ಲಿ ನೋಡಿದರೂ ಬೆಟ್ಟ ಕಾಣಿಸಲಿಲ್ಲ. ಅಲ್ಲಿದ್ದ ಹಳ್ಳಿಯವನ ಪ್ರಕಾರ-ಚಿತ್ರದಲ್ಲಿ ಕಾಣಿಸುತ್ತಿರುವ ಕೊಳದ ಪಕ್ಕದ ಕಲ್ಲು ಬಹಳ ಎತ್ತರವಿತ್ತಂತೆ. ಅಲ್ಲಿಂದ ಯಲಹಂಕ ಸುತ್ತಮುತ್ತಲಿನ ಪ್ರದೇಶ ಕಾಣಿಸುತ್ತಿತ್ತಂತೆ. ಸಮೀಪ ಹೋಗಿ ನೋಡಿದಾಗ ಕಲ್ಲು ಕ್ವಾರಿ ಕೆಲಸ ಎಡೆಬಿಡದೆ ನಡೆಯುತ್ತಿರುವುದು ಕಾಣಿಸಿತು. ಜೂನ್ ತಿಂಗಳಾದರೂ ನೀರು ಕೊಳದಲ್ಲಿ ತುಂಬಿ ಸ್ವಚ್ಛವಾಗಿ ಕಾಣಿಸಿತು. (ಕತ್ತಲಾದದ್ದರಿಂದ ಚಿತ್ರ ಚೆನ್ನಾಗಿ ಬಂದಿಲ್ಲ). ಇನ್ನು ಮುಂದೆ ಈ ಕೊಳ ನೋಡಲು ಸಿಗುವುದೋ ಇಲ್ಲವೋ..
****************
ಪುತ್ತೂರು ಸಮೀಪದ ಒಂದು ಹಳ್ಳಿಯ ದೇವಸ್ಥಾನದ ಪಕ್ಕದಲ್ಲಿರುವ ಕೊಳ-
****************
ಸುರ್ಯ(ಧರ್ಮಸ್ಥಳ ಸಮೀಪ)ದ ದೇವಸ್ಥಾನ ಹಾಗೂ ಕೊಳದ ಚಿತ್ರ-
ಕೊನೆಯ ಚಿತ್ರ- ಸುರ್ಯ ದೇವಸ್ಥಾನದ ಹಿಂಬದಿ, ತೆಂಗಿನ ಗಿಡಗಳ ಹಿಂಬದಿ ದೊಡ್ಡ ಕಲ್ಲೇ-ಗಡಾಯಿಕಲ್ಲು(ಜಮಲಾಬಾದ್ ಕೋಟೆ). ಬೆಂಗಳೂರು ಸಮೀಪವಿರುತ್ತಿದ್ದರೆ ಸ್ಟೋನ್ ಕ್ವರಿಗೆ ಗುರಿಯಾಗುತ್ತಿತ್ತೇನೋ..
-ಗಣೇಶ.
Comments
ಉ: ಹಳ್ಳಿಯಾದರೇನು ಸಿವಾ..
In reply to ಉ: ಹಳ್ಳಿಯಾದರೇನು ಸಿವಾ.. by makara
ಉ: ಹಳ್ಳಿಯಾದರೇನು ಸಿವಾ..
ಉ: ಹಳ್ಳಿಯಾದರೇನು ಸಿವಾ..
In reply to ಉ: ಹಳ್ಳಿಯಾದರೇನು ಸಿವಾ.. by kavinagaraj
ಉ: ಹಳ್ಳಿಯಾದರೇನು ಸಿವಾ..
ಉ: ಹಳ್ಳಿಯಾದರೇನು ಸಿವಾ..
In reply to ಉ: ಹಳ್ಳಿಯಾದರೇನು ಸಿವಾ.. by RAMAMOHANA
ಉ: ಹಳ್ಳಿಯಾದರೇನು ಸಿವಾ..
ಉ: ಹಳ್ಳಿಯಾದರೇನು ಸಿವಾ..:ಖಳರೆಲ್ಲ ...ಕೊಳವನ್ನು ..???
In reply to ಉ: ಹಳ್ಳಿಯಾದರೇನು ಸಿವಾ..:ಖಳರೆಲ್ಲ ...ಕೊಳವನ್ನು ..??? by venkatb83
ಉ: ಹಳ್ಳಿಯಾದರೇನು ಸಿವಾ..:ಖಳರೆಲ್ಲ ...ಕೊಳವನ್ನು ..???
ಉ: ಹಳ್ಳಿಯಾದರೇನು ಸಿವಾ..:ರಜೆ ...!!