ಹವಾಮಾನೋವಾಚ
[ಸಾವಿರಾರು ಜನರ ಮುಂದೆ ಕೂಗುವ ಹಾಗೆ ಕೊಂಚ ಎತ್ತರದ ದನಿಯಲ್ಲಿ ಓದಿಕೊಳ್ಳಬೇಕು]
ಛಳಿಯ ಹಿನ್ನೆಡೆ! ಪಶ್ಚಿಮದಿಂದ ಮೋಡಗಳ ಮುನ್ನಡೆ! ಎರಡು ದಿನದಿಂದ ಸಿಡ್ನಿ ಸುತ್ತಮುತ್ತ ರಾಚುತ್ತಿರುವ ಜಡಿಮಳೆ ಇನ್ನೂ ಮೂರು ನಾಕು ದಿನ ನಿಲ್ಲುವ ಸೂಚನೆಯಿಲ್ಲ! ವಾರವಿಡೀ "ಮೋಡ ಮುಸುಕಿದ ವಾತಾವರಣ"! ಜನಗಳ ಗೊಣಗಾಟ! ಸಿಡ್ನಿಗೆ ನೀರೂಡಿಸುವ ವಾರಗಂಬ ಜಲಾಶಯದ ಮಟ್ಟವೂ ಏರುತ್ತಿರುವು ಸೂಚನೆ! ಉತ್ತರದ ಕ್ವೀನ್ಸ್ಲಾಂಡಿನ ದಕ್ಷಿಣದಲ್ಲೂ ಭಾರಿ ಮಳೆ! ಒಳನಾಡಿನಲ್ಲಿ ಈ ವರ್ಷ ಹೀಗೆ ಮಳೆಯಾದರೆ ಬರಗಾಲ ಕೊನೆಗೊಳ್ಳಬಹುದೆಂಬ ಆಶಾಕಿರಣ!
[ಈಗ ಕೊಂಚ ದನಿ ತಗ್ಗಿಸಿಕೊಳ್ಳಬಹುದು]
ನಮ್ಮ ಮನೆಯ ಹತ್ತಿರದ ತೊರೆಯಲ್ಲೂ ಈವತ್ತು ಬೆಳಿಗ್ಗೆ ನೀರಿನ ಓಟ ಹೆಚ್ಚಿದೆ! ಅದಕ್ಕೆ ಕಟ್ಟಿರುವ ಕಾಲ್ಸೇತುವಿನವರೆಗೂ ನೀರು ತುಂಬಿ ಹರಿದ ದಿನಗಳು ನೆನಪಿದೆ! ಮತ್ತೆ ಅಂಥ ದಿನಗಳು ಈ ವರ್ಷ ಬರಬಹುದು ಎಂಬುದು ಎಲ್ಲರ ಅಂಬೋಣ! ಇವಿಷ್ಟೂ ನಾನಿರುವ ಊರಿನ ಹವಾಮಾನದ ವಿಶೇಷ ಸಮಾಚಾರ!
[ಇನ್ನು ಮನದಲ್ಲೇ ಓದಿಕೊಳ್ಳಬಹುದು]
ನಮ್ಮಲ್ಲಿನ ಬರಗಾಲದಷ್ಟು ಹರಿತ ಇಲ್ಲಿಯ ಬರಗಾಲಕ್ಕಿಲ್ಲ. ಕೆಲವು ರೈತರು ಇಲ್ಲಿಯೂ ಆತ್ಮಹತ್ಯೆ ಮಾಡಿಕೊಂಡಿದ್ದರೂ ಕೂಡ. ನೂರಾರು ವರ್ಷ ಕಂಡಿರದಂಥ ಮಳೆಬಾರದ ಈ ಬರಗಾಲ ಜನರಲ್ಲಿ ನೀರಿನ ಬಗ್ಗೆ, ಭೂಶಾಖದ ಬಗ್ಗೆ ಎಚ್ಚರಿಕೆಯಂತೂ ಮೂಡಿಸಿದೆ ಎನ್ನುವದು ಸುಳ್ಳಲ್ಲ.
Comments
ಉ: ಹವಾಮಾನೋವಾಚ
In reply to ಉ: ಹವಾಮಾನೋವಾಚ by ASHOKKUMAR
ಉ: ಹವಾಮಾನೋವಾಚ